ಬೀದರ್. ಸೆ.17 : ಜಿಲ್ಲೆಯ ಹುಮನಾಬಾದ ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ದಲಿತ ಕ್ರಿಯಾ ಸಮಿತಿ ದಿಂದ ನಡೆದ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಅಂಕುಶ್ ಗೋಖಲೆ ಹಾಗೂ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿಪುತ್ರ ಮಾಳಗೆ ರವರು ಮಾತನಾಡಿ ನಕಲಿ ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಸ್ಥಳೀಯ ಶಾಸಕರು ವಿಧಾನ ಪರಿಷತ್ ಸದಸ್ಯರು ಗಳು ಸೇರಿ ರಾಜ್ಯದ ಕೆಲ ಜನಪ್ರತಿನಿದಿನಗಳು ಮನವಿ ಸಲ್ಲಿಸಿದ್ದಾರೆ ಇದು ದಲಿತರಿಗೆ ಮಾಡುವ ಅನ್ಯಾಯ ಎಂದರು ಇದನ್ನ ವಿರೋಧಿಸಿ ಇದೆ ದಿನಾಂಕ 20 ರಂದು ಹುಮನಾಬಾದ ಬಂದ್ ಮಾಡುವ ಮೂಲಕ ಪಟ್ಟಣದಲ್ಲಿ ಬ್ರಹತ್ ಪ್ರತಿಭಟನೆ ನಡೆಯಲಿದೆ ಪ್ರತಿಭಟನೆ ಯಲ್ಲಿ ಸುಮಾರು 10ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸುತ್ತಾ ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಜನರು ಭಾಗವಹಿಸಲು ಕೋರಿದರು.
ಈ ಸಂಧರ್ಭದಲ್ಲಿ ದಲಿತ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಅಂಕುಶ್ ಗೋಖಲೆ, ಲಕ್ಷ್ಮಿ ಪುತ್ರ ಮಾಳಗೆ, ಗೌತಮ್ ಸಾಗರ, ಗೌತಮ್ ಚೌಹಾಣ್ ಸೇಡೊಳ್, ಅನಿಲ್ ದೊಡ್ಡಿ, ಗೌತಮ್ ಪ್ರಸಾದ್, ಶರಣು ಮಿತ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.