ತಹಶೀಲ್ದಾರ್ ಕಾರ್ಯಾಲಯದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

Udayavani News
0
ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,
ಮಸ್ಕಿ, ಸೆ.17 : ಪಟ್ಟಣದ ತಹಶೀಲ್ದಾರರ ಕಾರ್ಯಾಲಯದಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಸರ್ವ ಸಿಬ್ಬಂದಿ ಹಾಗೂ ವಿಶ್ವಕರ್ಮ ಮುಖಂಡರ ಸಮ್ಮುಖದಲ್ಲೇ ಪುಷ್ಪಾರ್ಚನೆ ನೆರವೇರಿಸಿ ತಹಶೀಲ್ದಾರ್ ಕವಿತಾ.ಆರ್ ಮಾತನಾಡಿದರು. 


ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಹಶೀಲ್ದಾರ್ ಕವಿತಾ. ಆರ್ ಬ್ರಹ್ಮಶ್ರೀ ನಾರಾಯಣಗುರು, ಮಹಾತ್ಮ ಗಾಂಧೀಜಿ, ವಿಶ್ವಕರ್ಮರಂತ ಮಹಾತ್ಮರು ವ್ಯಕ್ತಿಗಳಲ್ಲ. ಅವರು ಸಮಾಜದ ಶಕ್ತಿ. ಸಮಾಜದ ಅಭಿವೃದ್ಧಿಗಾಗಿ ಬದುಕಿದವರು. ತಮ್ಮ ಸರ್ವಸ್ವವನ್ನು ಸಮಾಜದ ಏಳಿಗೆಗಾಗಿ ಧಾರೆ ಎರೆದವರು. ಅವರ ಆದರ್ಶ, ಜೀವನ ಶೈಲಿಯನ್ನು ಇಂದಿನ ಹಾಗೂ ಮುಂದಿನ ಸಮಾಜಕ್ಕೆ ತಿಳಿಸಿ, ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮಹಾತ್ಮ ಜಯಂತಿಗಳನ್ನು ಆಚರಿಸಲಾಗುತ್ತಿದೆ.
 ದಿನಾಚರಣೆ ವಿಶ್ವಕರ್ಮ ದೇವರು ವಿಶ್ವವನ್ನೇ ಸೃಷ್ಟಿ ಮಾಡಿದವರು. ಅವರ ಜನ್ಮ ದಿನಾಚರಣೆಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೇ ಇಡೀ ಸಮಾಜವೇ ಆಚರಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ವಿಶ್ವಕರ್ಮ ಸಮಾಜವು ಭವ್ಯ ಪರಂಪರೆಯುಳ್ಳ ಸಮಾಜ,ವಾಸ್ತು ಶಿಲ್ಪವನ್ನು ಬಲ್ಲವರು.ಮನೆ, ದೇವಾಲಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮಾಜದ ಕೈಚಳಕವಿದೆ. ಪ್ರತಿಯೊಂದು ಕಲೆಯಲ್ಲೂ ವಿಶ್ವಕರ್ಮ ಸಮಾಜದ ಚಾರಿತ್ರ್ಯವಿದೆ ಎಂದರು.

ಈ ಸಂದರ್ಭದಲ್ಲಿ 

ತಹಸೀಲ್ದಾರ ಕವಿತಾ. ಆರ್, ಷಣ್ಮುಖಪ್ಪ ಗ್ರೇಡ-2 ತಹಶೀಲ್ದಾರ, ವಿಜಯಕುಮಾರ ಸಜ್ಜನ್ ಶಿರಸ್ತೇದಾರ್, ಕಾರ್ಯಾಲಯದ ಸಿಬ್ಬಂದಿ ವರ್ಗದವರು ಮತ್ತು ವಿಶ್ವಕರ್ಮ ಸಮಾಜದ ಹಿರಿಯರು ಸಮಾಜದ ಮುಖಂಡರು ಭಾಗವಹಿಸಿದ್ದರು.

Post a Comment

0Comments

Post a Comment (0)