ಸಿಂಧನೂರು ಸೆ.12 : ತಾಲೂಕಿನ ತಿಡಿಗೋಳ ಪಂಚಾಯ್ತಿ ವ್ಯಾಪ್ತಿಯ ಕಾನಿಹಾಳ ಗ್ರಾಮದ ಅಂಗನವಾಡಿ ಕೇಂದ್ರವನ್ನು ಅಭಿನಂದನ್ ಸಂಸ್ಥೆ ವತಿಯಿಂದ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಭಾಗವಾಗಿ 62ನೇ ಸ್ವಚ್ಟತಾ ಸೇವಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿತು.
ಅಭಿನಂದನ್ ಸಂಸ್ಥೆಯ ವತಿಯಿಂದ ಜಾರಿಗೆ ತರಲಾದ ಸ್ವಚ್ಛ ಭಾರತ ಪರ್ಕಲ್ಪನೆಯನ್ನು ಆಧರಿಸಿದ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಭಾಗವಾಗಿ 62ನೇ ಸೇವಾ ಕಾರ್ಯವನ್ನ ಸಿಂಧನೂರು ತಾಲೂಕಿನ ಕಾನಿಹಾಳ್ ಗ್ರಾಮದಲ್ಲಿ ಇರುವಂತಹ ಅಂಗನವಾಡಿ ಕೇಂದ್ರವನ್ನು ಸ್ವಚ್ಛಗೊಳಿಸಿ ಕಸ ಕಟ್ಟಿಗಳನ್ನು ತೆಗೆದು ಕುಳಿತುಕೊಳ್ಳಲು ಬೆಂಚುಗಳನ್ನ ಹಾಕಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ ಅಭಿಮಾನಿ ಬಳಗದ ಮುಖ್ಯಸ್ಥರಾದ ಶರಣಬಸವ ಕುರ್ಲಿ ಅವರು ಮಾತನಾಡಿ ಯಶಸ್ವಿಯಾಗಿ 62ನೇ ಸಂಡೇ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಸೇವಾ ಕಾರ್ಯವನ್ನು ನಮ್ಮ ಗ್ರಾಮದ ಅಂಗನವಾಡಿ ಕೇಂದ್ರವನ್ನ ಸ್ವಚ್ಛಗೊಳಿಸಿ ಹೊಸ ಮೆರುಗನ್ನ ನೀಡಿರುವ ಅಭಿನಂದನ್ ಸಂಸ್ಥೆಗೆ ನಮ್ಮ ಊರಿನ ಹಿರಿಯರು ಹಾಗೂ ಎಲ್ಲಾ ನಾಗರಿಕರ ಪರವಾಗಿ ತುಂಬು ಹೃದಯದ ಧನ್ಯವಾದಗಳು. ಇವರ ಈ ಸೇವೆಯ ನಾಡಿನ ಎಲ್ಲಾ ಗ್ರಾಮಗಳಿಗೆ ವ್ಯಾಪಿಸಿ ಮಹಾತ್ಮ ಗಾಂಧಿಯವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವಲ್ಲಿ ಮುಖ್ಯ ಪಾತ್ರ ವಹಿಸಿ ಯಶಸ್ವಿಯಾಗಲಿ ಕೀರ್ತಿ ಶಾಲೆಯಾಗಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಟೀಚರ್ ಆಗಿರುವ ಗೌರಮ್ಮ, ಊರಿನ ಮುಖಂಡರಾದ ಮಲ್ಲಯ್ಯ ಮುರುಡಿ, ರಾಜೇಶ್, ಹನುಮೇಶ್, ಕರಿಯಪ್ಪ, ಹನುಮಪ್ಪ ತಳವಾರ್, ಅಯ್ಯನಗೌಡ, ಅಮರೇಶ್, ಭೀಮೇಶ್, ಹುಲುಗಪ್ಪ, ಲಯನ್ಸ್ ಕ್ಲಬ್ ಶಾಲೆಯ ಮುಖ್ಯ ಗುರುಗಳಾದ ದೊಡ್ಡಪ್ಪ ಗಬ್ಬೂರ, ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಪದಾಧಿಕಾರಿಗಳಾದ ಜಾಫರ ಮಿಯಾ ಸರ್,ಜಕ್ಕಪ್ಪ ತುಗ್ಗಲ ದಿನ್ನಿ, ಮಲ್ಲಿಕಾರ್ಜುನ್ ಬಡಿಗೇರ, ರವಿಚಂದ್ರ ಸುಂಕನೂರ, ಹನುಮೇಶ್ ಶೀಕಲ್, ಬಸಲಿಂಗಪ್ಪ ಬಾದರ್ಲಿ, ದುರ್ಗೇಶ್, ಕಿಶೋರ್, ಅಭಿನಂದನ್ ಸ್ಪೂರ್ತಿಧಾಮದ ಮಕ್ಕಳು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.