ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,
ಮಸ್ಕಿ ಸೆ.12 : ತಾಲೂಕಿನ ಸಂತೆ ಕೆಲ್ಲೂರು ಗ್ರಾಮ ಪಂಚಾಯಿತಿ ಕೆ.ಬಸಾಪೂರ ಗ್ರಾಮದಲ್ಲಿ ಸತತವಾಗಿ ಐದನೇದಿನ ನೀರಿಲ್ಲದೆ ಪರದಾಡುತ್ತಿರುವ ಜನರು.ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯ ಗ್ರಾಮಸ್ಥರು ಫೋನ್ ಕರೆಯ ಮೂಲಕ ಮಾಹಿತಿ ನೀಡಿ ಸಮಸ್ಯೆ ಪರಿಹರಿಸಲು ಅಧಿಕಾರಿಗಳನ್ನು ಸ್ಥಳೀಯರ ಗ್ರಾಮಸ್ಥರು ಫೋನ್ ಕರೆಯ ಮೂಲಕ ಕೇಳಿದರೆ ಉಡಾಫೆ ಉತ್ತರ ನೀಡುವ ಅಧಿಕಾರಿಗಳು.
ಕೆ.ಬಸಾಪುರ ಗ್ರಾಮದಲ್ಲಿನ ನೀರಿನ ಸಮಸ್ಯೆಯ ಕುರಿತು ಮೊದಲಿಗೆ ಪಿಡಿಓ ಗೆ ಹೇಳಿದರೆ ನಾನು ಸೋಮವಾರ ಬರುತ್ತೇನೆ ಎಂದರೆ, ಜಿಲ್ಲಾ ಪಂಚಾಯತ್ ನ ಜೆ.ಇ ತ್ರಿವೇಣಿ ಮೇಡಂ ನ ಕೇಳಿದರೆ ನಾನೇನು ಮಾಡಬೇಕು ಅನ್ನುವರು,ನಂತರ ತಾಲೂಕ ಪಂಚಾಯತ್ ಅಧಿಕಾರಿಯನ್ನು ಕೇಳಿದರೆ ನಿಮ್ಮ ಪಿಡಿಒ ರನ್ನು ಕೇಳಿ ಎಂದು ಸಂತೆ ಕೆಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಎಲ್ಲಾ ಅಧಿಕಾರಿಗಳಿಗೆ ಮತ್ತು ಮೇಲಾಧಿಕಾರಿಗಳಿಗೆ ಫೋನ್ ಕರೆಯ ಮೂಲಕ ಕೇಳಿದರೆ ಎಲ್ಲರು ಹಾರಿಕೆ ಉತ್ತರ ಮತ್ತು ಉಡಾಫೆ ಉತ್ತರವನ್ನು ನೀಡಿರುತ್ತಾರೆ.
ಅಧಿಕಾರಿಗಳ ಉಡಾಫೆ ಉತ್ತರವನ್ನು ಕೇಳಿಯೂ ಸುಮ್ಮನಿದ್ದರೆ ನಮ್ಮ ಸಮಸ್ಯೆ ಪರಿಹಾರ ಆಗುವುದಿಲ್ಲ ಎಂದು ಸ್ಥಳೀಯರೇ ತಮ್ಮ ಸ್ವಂತ ಖರ್ಚಿನಲ್ಲಿ ಟ್ರಾಕ್ಟರ್ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಂಡು ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಟ್ರಾಕ್ಟರ್ ಸೇವೆ ಮಾಡಿದ ದೇವಣ್ಣ ಪೂಜಾರಿಗೆ, ನೀರಿನ ಟ್ಯಾಂಕರ್ ಸೇವೆ ಮಾಡಿದ ಅಮರೇಶ್ ಹವಾಲ್ದಾರ್ ಇವರಿಗೆ ಗ್ರಾಮಸ್ಥರು ಆಶೀರ್ವದಿಸಿ ಅಭಿನಂದಿಸಿದ್ದಾರೆ.
ಹೇಳಿಕೆ:1
ಸಂತೆ ಕೆಲ್ಲೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜ್ಯೋತಿಬಾಯಿ ನಾನು ಸೋಮವಾರ ಬರುತ್ತೇನೆ ಎಂದರೆ, ಜಿಲ್ಲಾ ಪಂಚಾಯತ್ ಜೆ.ಇ ತ್ರಿವೇಣಿ ನಾನೇನು ಮಾಡಬೇಕು ಎನ್ನುವರು, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ನಿಮ್ಮ ಪಿಡಿಒ ರನ್ನು ಕೇಳಿ ಎನ್ನುತ್ತಾರೆ. ಒಟ್ಟಿನಲ್ಲಿ ನಮ್ಮ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ಈ ತರಹದ ಉಡಾಫೆ ಉತ್ತರವನ್ನು ನೀಡುವ ಅಧಿಕಾರಿಗಾಳನ್ನು ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶಿಸ್ತು ಕಾನೂನೂ ಕ್ರಮ ಕೈಗೊಂಡು ಕೆಲಸದಿಂದ ವಜಾ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸವಲಿಂಗ ನಾಯಕ ಕುಣೆಕೆಲ್ಲೂರು ಸ್ಥಳೀಯ ಗ್ರಾಮಸ್ಥರು,
ಹೇಳಿಕೆ:2
ಕೆ.ಬಸಾಪುರ ಗ್ರಾಮದಲ್ಲಿನ ನೀರಿನ ಸಮಸ್ಯೆಯ ಕುರಿತು ಅಧಿಕಾರಿಗಳಿಗೆ ಫೋನ್ ಕರೆಯ ಮೂಲಕ ನೀರಿನ ವ್ಯವಸ್ಥೆ ಮಾಡುವಂತೆ ಕೇಳಿದರೆ ಹಾರಿಕೆ ಮತ್ತು ಉಡಾಫೆ ಉತ್ತರ ನೀಡುವುದು ಸರಿಯಲ್ಲ,ಗ್ರಾಮಗಳ ಅಭಿವೃದ್ದಿಗೆಂದೆ ನೇಮಕವಾದ ಅಧಿಕಾರಿಗಳೇ ಈ ರೀತಿಯ ಉತ್ತರ ನೀಡಿದ್ದು ಸರಿಯಲ್ಲ, ಆದಷ್ಟು ಬೇಗ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಸಾಮಾಜಿಕ ಹೋರಾಟಗಾರ ಮಲ್ಲಿಕ್ ಮುರಾರಿ ಪತ್ರಿಕೆಯ ಮೂಲಕ ಒತ್ತಾಯಿಸಿದ್ದಾರೆ.