ನೂತನ ಪಿಎಸ್ಐ ವಿರೂಪಾಕ್ಷಪ್ಪ ರವರಿಗೆ ಸನ್ಮಾನ

Udayavani News
0

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ,
ಮಸ್ಕಿ ಸೆ.12 : ನೂತನ ಪಿಎಸ್ಐ ವಿರೂಪಾಕ್ಷಪ್ಪ ಬಳಗಾನೂರು ಪಟ್ಟಣದ ಪೊಲೀಸ್ ಠಾಣೆಗೆ ಕಂಪ್ಲಿಯಿಂದ ವರ್ಗವಾಗಿ ಬಂದು ಇಲ್ಲಿನ ಠಾಣೆಯಲ್ಲಿ ಅಧಿಕಾರವನ್ನು ವಹಿಸಿಕೊಂಡ ಪಿಎಸ್ಐ ಯನ್ನು ಬಳಗಾನೂರಿನ ಉಧ್ಯಮಿಗಳಾದ ಬಿ. ಭದ್ರಿನಾಥ ಮತ್ತು ತಮ್ಮ ಒಡನಾಡಿಗಳಾದ ದಲಿತ ಸಂರಕ್ಷ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಬಿ. ಮೌನೇಶ ಬಳಗಾನೂರ ಸನ್ಮಾನಿಸಿ ಗೌರವಿಸಿದರು.


ಕಂಪ್ಲಿಯಿಂದ ಬಳಗಾನೂರ ಠಾಣೆಗೆ ವರ್ಗಾವಣೆಗೊಂಡ ಬಳಗಾನೂರ ಪೋಲಿಸ್ ಠಾಣೆಯ ನೂತನ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ವಿರುಪಾಕ್ಷಪ್ಪ ರವರಿಗೆ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಬಳಗಾನೂರಿನ ಉಧ್ಯಮಿಗಳಾದ ಬಿ.ಭದ್ರಿನಾಥ ಮತ್ತು ಅವರ ಒಡನಾಡಿಗಳಾದ ದಲಿತ ಸಂರಕ್ಷ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಬಿ. ಮೌನೇಶ ಬಳಗಾನೂರ ಇವರು ನೂತನ ಪಿಎಸ್ಐ ವಿರುಪಾಕ್ಷಪ್ಪ ರವರನ್ನು ಸನ್ಮಾನಿಸಿ ಗೌರವಿಸಿದರು. 

ಇದೇ ಸಂದರ್ಭದಲ್ಲಿ ನೂತನ ಪಿಎಸ್ಐ ಮಾತನಾಡಿ ಬಳಗಾನೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಅಕ್ರಮ ಚಟುವಟಿಕೆ ಮಾಡುವವರ ವಿರುದ್ಧ ಮತ್ತು ಕಾನೂನು ಬಾಹಿರ ಚಟುವಟಿಕೆಗಳಾದ ಇಸ್ಪೀಟ್, ಮಟ್ಕಾ, ಜೂಜು ಇನ್ನಿತರ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಹದ್ದಿನ ಕಣ್ಣಿಟ್ಟು ಕಾನೂನು ಕ್ರಮ ಜರುಗಿಸಲಾಗುವುದು. ನಮ್ಮೊಂದಿಗೆ ಸಂಘಟನೆಯವರು ಮತ್ತು ಸಾರ್ವಜನಿಕರು ಸಹಕರಿಸಬೇಕು ಹಾಗೂ ಪ್ರತಿ ತಿಂಗಳಿಗೊಮ್ಮೆ ನಮ್ಮ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆಗಳ ಸಭೆಕರೆಯಲಾಗುವುದೆಂದು ತಿಳಿಸಿದ್ದಾರೆ.
ಸನ್ಮಾನ ಸಂದರ್ಭದಲ್ಲಿ ಪತ್ರಕರ್ತರಾದ ಹನುಮೇಶ ಕಮ್ಮಾರ, ರಾಜಶೇಖರ ನಾಗಲೀಕರ್, ಶ್ರೀ ಧರ ಕೊಂಡಾ ಇನ್ನಿತರರಿದ್ದರು.

Post a Comment

0Comments

Post a Comment (0)