ಕಲಬುರಗಿ ಸೆ 12 ::- ಅಭಿವೃದ್ಧಿಯ ದೃಷ್ಟಿಯಿಂದ ನನ್ನ ಜೊತೆ ಯಾರು ಕೆಲಸ ಮಾಡುತ್ತಾರೆ ನನ್ನವರು ಕೆಲಸ ಮಾಡದೇ ಇರುವವರು ನನ್ನವರಲ್ಲ ಎಂದು ಕಲ್ಬುರ್ಗಿಯ ಡಾ. ಉಮೇಶ್ ಜಾದವ್ ಹೇಳಿದರು.
ಚಿಂಚೋಳಿ ಪಟ್ಟಣದ ನೂತನ ಬೇಕರಿ ಉದ್ಘಾಟಿಸಿ ಮಾತನಾಡಿ ಬಿಜೆಪಿ ಸರಕಾರದ ಹೆಚ್ಚೆಚ್ಚು ಸೌಲಭ್ಯಗಳನ್ನು ಜನರು ಪಡೆದು ಸ್ವಾವಲಂಬನೆಯಾಗಿ ಹೊಸ ಹೊಸ ಉದ್ಯೋಗ ಪ್ರಾರಂಭ ಮಾಡಿ ನಿರುದ್ಯೋಗ ಯುವಕರಿಗೆ ಕೆಲಸಗಳನ್ನು ಮಾಡಲು ಅನುಕೂಲವಾಗಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಿ ನಿರುದ್ಯೋಗವನ್ನು ಕಡಿಮೆ ಮಾಡಬಹುದು. ಚಿಂಚೋಳಿ ತಾಲೂಕು ಬರುವ 10 ವರ್ಷಗಳಲ್ಲಿ ರಾಜ್ಯದಲ್ಲಿ ನಂಬರ್ 1 ತಾಲೂಕು ಅಭಿವೃದ್ಧಿ ಮಾಡುತ್ತೇನೆ, ಅದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ ಸಕ್ಕರೆ ಕಾರ್ಖಾನೆ ರಾಷ್ಟ್ರೀಯ ಹೆದ್ದಾರಿ ಐನಾಪುರ್ ಏತ ನೀರಾವರಿ ಯೋಜನೆ ಅರಣ್ಯ ಕಾಲೇಜು ಇನ್ನು ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳನ್ನು ತಂದಿದ್ದು, ಯಾರು ಕೂಡ ವಿರೋಧ ಪಕ್ಷಗಳ ಮಾತಿಗೆ ಬೆಲೆ ಕೊಡದೆ ನಮ್ಮ ಅಭಿವೃದ್ಧಿ ಕೆಲಸದ ಬಗ್ಗೆ ಚುನಾವಣೆಯಲ್ಲಿ ಮಾತ್ರ ಹೇಳೋಣ ಮತ್ತೆ 5 ವರ್ಷ ಅಧಿಕಾರ ನಮ್ಮದೇ ಮತ್ತೆ ಅಭಿವೃದ್ಧಿಪರ ಕೆಲಸ ನಿರಂತರವಾಗಿ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಕೆ.ಎಂ.ಬಾರಿ, ಹಸೇನ ಹಾಶ್ಮಿ, ಕೂಡ ಮಾತನಾಡಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ
ಕೆ. ಬಸವರಾಜ್, ಪುರಸಭೆ ಮುಖ್ಯ ಅಧಿಕಾರಿ ಕಾಶಿನಾಥ್ ಧನಿ, ಸಾರ್ವಜನಿಕ ಆಡಳಿತ ಅಧಿಕಾರಿ ಡಾ. ಸಂತೋಷ್ ಪಾಟೀಲ್, ಶ್ರೀಮಂತ ಕಟ್ಟಿಮನಿ,