ಸಿಂಧನೂರುಸೆ.12 : ತಾಲೂಕಿನ ತುರುವಿಹಾಳ ಹೋಬಳಿ ವ್ಯಾಪ್ತಿಯಲ್ಲಿ ಬರುವ ಚಿಕ್ಕಬೇರಗಿ ಗ್ರಾಮದ ಪರಂಪೋಕ ಜಮೀನನ್ನು ಅರಣ್ಯ ಇಲಾಖೆಯಿಂದ ಒತ್ತುವರಿ ಮಾಡಿಕೊಂಡು ಅಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನೂ ಕೂಡಲೇ ನಿಲ್ಲಿಸಿ ಪರಂಪೋಕ ಜಮೀನನ್ನು ತೆರವು ಮಾಡಿಕೊಡಬೇಕೂ ಎಂದು
ಕೆ.ಆರ್.ಎಸ್ ಪಕ್ಷದ ಸಿಂಧನೂರು ತಾಲೂಕ ಘಟಕದ ವತಿಯಿಂದ ತಹಶೀಲ್ದಾರರಿಗೆ ಮನವಿ ಪತ್ರವನ್ನು ನೀಡಲಾಯಿತು.
ಜಮೀನು ವಿಚಾರವಾಗಿ ಮಾತಾನಾಡಿದ ಸಿಂಧನೂರು ಮತ ಕ್ಷೇತ್ರದ ಅಭ್ಯರ್ಥಿ ನಿರುಪಾದಿ ಗೊಮರ್ಸಿ
ಚಿಕ್ಕ ಬೇರಿಗಿ ಗ್ರಾಮದ ಸರ್ವೆ ನಂಬರ್ 96 ಕ್ಷೇತ್ರ 29 ಎಕ್ಕರೆ ಮತ್ತು ಜಮೀನು ಸರ್ವೆ ನಂಬರ್ 10 ಕ್ಷೇತ್ರ 40 ಎಕರೆ 18 ಗುಂಟೆ, ಜಮೀನು ಪರಂಪೋಕ ಜಮೀನುಗಳಾಗಿದ್ದು ಈ ಜಮೀನುಗಳು ಈ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ರೈತರ ಮತ್ತು ಕುರಿಗಾಹಿಗಳ ಅನಾನುಕೂಲಕ್ಕೆ ಇಡಾಗಿದ್ದು ಅಂದರೆ ದನಗಳ ಮೇಯಿಸೋಕೆ ಮತ್ತು ಕುರಿಗಳನ್ನು ಮೇಯಿಸುವುದಕ್ಕೆ ಮೀಸಲು ಇಟ್ಟಿರುವ ಜಮೀನುಗಳಾಗಿದ್ದು ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯಿಂದ ಈ ಜಮೀನುಗಳು ಒತ್ತುವರಿ ಮಾಡಿಕೊಂಡು ಅಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರಿಂದ ರೈತರಿಗೆ ಮತ್ತು ಅವರ ಹಸುಗಳಿಗೆ ಮೇಯಿಸಲು ಮತ್ತು ಮೇಯಲು ತೊಂದರೆಯಾಗಿದ್ದು ಬೇರೆ ಜಮೀನುಗಳು ಇಲ್ಲದೆ ಇರುವುದರಿಂದ ಈ ಪಾರಂಪೋಕ ಜಮೀನುಗಳನ್ನು ರೈತರು ಅವಲಂಬಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಆರ್‌ಎಸ್ ಪಕ್ಷವು ಒತ್ತಾಯಿಸುವುದೇನೆಂದರೆ ಕೂಡಲೇ ಒತ್ತುವರಿ ಮಾಡಿದ ಜಮೀನು ತೆರವುಗೊಳಿಸಿ ಮೊದಲಿನಂತೆ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕು ಮತ್ತು ಅಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಗಿದೆ. ಇಲ್ಲವಾದಲ್ಲಿ ಈ ಭಾಗದ ರೈತರ ಸಹಯೋಗದಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ರೈತರ ಸಮ್ಮುಖದಲ್ಲಿ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ತಾಲೂಕ ದಂಡಾಧಿಕಾರಿಗಳಾದ ಅರುಣ್ ದೇಸಾಯಿ ರವರಲ್ಲಿ ಮನವಿ ಪತ್ರ ಸಲ್ಲಿಸುವ ಮೂಲಕ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ವೀರಭದ್ರಯ್ಯ ಎಸ್.ಪ್ರಧಾನ ಕಾರ್ಯದರ್ಶಿ ಶರಣಬಸವ ಗೊರೆಬಾಳ, ಯುವ ಘಟಕದ ಜಿಲ್ಲಾಧ್ಯಕ್ಷ ನಾಗರಾಜ ಎಲೆಕೂಡ್ಲಗಿ, ತಾಲೂಕ ಯುವ ಘಟಕದ ಅಧ್ಯಕ್ಷ ಸ್ವಾಮಿ ವಿವೇಕಾನಂದ,ಪ್ರಧಾನ ಕಾರ್ಯದರ್ಶಿ ಚನ್ನಬಸವ ಸೋಮಲಾಪೂರ,ಸಂಘಟನಾ ಕಾರ್ಯದರ್ಶಿ ದೇವಣ್ಣ ಪುಲದಿನ್ನಿ, ಶರಣಪ್ಪ ಬೇರಗಿ ಹಾಗೂ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.