ಬೆಂಗಳೂರ : ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಉತ್ತರ ಕರ್ನಾಟಕದ ಪ್ರಭಾವಿ ರಾಜಕೀಯ ನಾಯಕರು, ಸಚಿವರಾದ ಸನ್ಮಾನ್ಯ ಶ್ರೀ ಉಮೇಶ ಕತ್ತಿಯವರೊಂದಿಗಿನ ಆತ್ಮೀಯ ಒಡನಾಟ, ಸ್ನೇಹ, ಅವರ ಕ್ಷೇತ್ರದ ಜನಸೇವೆ, ಜನಪರ ಕಾರ್ಯಗಳ ಕುರಿತು ಸವಿಸ್ತಾರವಾಗಿ ಭಾವನಾತ್ಮಕವಾಗಿ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿ ಅವರು ಇಂದು ಜರುಗಿದ ವಿಧಾನ ಪರಿಷತ್ ಅಧಿವೇಶನದಲ್ಲಿ ಮಾತನಾಡಿದರು.