ರಾಯಚೂರು ವಿಶ್ವಕರ್ಮ ಜಿಲ್ಲಾ ಜಾಗೃತಿ ಸಮಾವೇಶ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ

Udayavani News
0


ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ,
ಮಸ್ಕಿ ಸೆ.12  : ಇದೇ ಭಾನುವಾರ ದಿನಾಂಕ 18 -9 -2022 ರಂದು ಶ್ರೀ ಶಂಕರ ರೆಡ್ಡಿ ಕಲ್ಯಾಣ ಮಂಟಪ, ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ, ಲಿಂಗಸೂಗೂರು ಬೆಳಗ್ಗೆ 11 ಗಂಟೆಗೆ ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜ( ರಿ) ರಾಯಚೂರು ಸಹಯೋಗದೊಂದಿಗೆ ತಾಲೂಕು ವಿಶ್ವಕರ್ಮ ಸಮಾಜದ ಲಿಂಗಸುಗೂರು ಸಮಾಜವು ಪರಮಪೂಜ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಶ್ರೀ ಭಗವಾನ್ ವಿಶ್ವಕರ್ಮ ಪೂಜಾ ಮಹೋತ್ಸವ ಆಚರಣೆ ಹಾಗೂ ರಾಯಚೂರು ಜಿಲ್ಲೆಯ ವಿಶ್ವಕರ್ಮ ಸಮಾಜದ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹೊಸ ಚೈತನ್ಯ ಮೂಡಿಸುವ ಸದುದ್ದೇಶದಿಂದ "ವಿಶ್ವಕರ್ಮ ವಿದ್ಯಾರ್ಥಿ ರತ್ನ" ಎಂಬ ಗೌರವ ನೀಡಿ ಸನ್ಮಾನಿಸಲಾಗುವುದು ಹಾಗೂ ಜಿಲ್ಲಾ ಜಾಗೃತಿ ಸಮಾವೇಶ, ಹಾಗೂ ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜವನ್ನು ಕಳೆದ 32 ವರ್ಷಗಳಿಂದ ಕಟ್ಟಿ ಬೆಳೆಸಿದಂತಹ ಹಿರಿಯರು ನಮ್ಮ ಸಂಸ್ಥಾಪಕ ಅಧ್ಯಕ್ಷರಾಗಿರುವ ಶ್ರೀ ಬಿ ಚಂದಪ್ಪ ಅವರಿಗೂ ಹಾಗೂ ಅವರೊಂದಿಗೆ ಶ್ರಮಿಸಿರುವ ಸಮಾಜದ ಗಣ್ಯರಿಗೆ ಮತ್ತು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದಿರು ವಂತಹ ಸಮಾಜದ ಬಂಧುಗಳಿಗೆ *ವಿಶ್ವಕರ್ಮ ಸಾಧಕ ರತ್ನ ಪ್ರಶಸ್ತಿಯನ್ನು* ನೀಡಲಾಗುವುದು.

 ಕಾರ್ಯಕ್ರಮದ ವಿಶೇಷ ಆಹ್ವಾನಿತರು
ಮಸ್ಕಿ ಶಾಸಕರಾದ ಬಸನಗೌಡ ತುರ್ವಿಹಾಳ ಅವರನ್ನು ಭೇಟಿಯಾಗಿ ವಿಶೇಷ ಆಹ್ವಾನಿತರಾಗಿ ಬರುವಂತೆ ಕೋರಿದರು ಹಾಗೂ ಮಸ್ಕಿ ಪಟ್ಟಣದ ಹಿರಿಯರನ್ನು ಮತ್ತು ವಿಶ್ವಕರ್ಮ ಸಮಾಜದವರನ್ನು ಭೇಟಿಯಾಗಿ ಕಾರ್ಯಕ್ರಮದ ಬಗ್ಗೆ ಚರ್ಚಿಸಿದರು ಮತ್ತು ಬಳಗಾನೂರಿಗೆ ಬೇಟಿ ನೀಡಿ ಸಮಸ್ತ ಹಿರಿಯರು ಯುವಕರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಲಾಯಿತು ಎಂದು ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜದ ಜಿಲ್ಲಾ ಅಧ್ಯಕ್ಷರಾದ ಗುರು ವಿಶ್ವಕರ್ಮ ಮಾದ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)