ಮಸ್ಕಿ ಸೆ.19 : ತಾಲೂಕಿನ ಗುಡದೂರು ಬಸನಗೌಡ ಬಾದರ್ಲಿ ಕಾಲೇಜು ಆವರಣದಲ್ಲಿ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದ ವೈಯಕ್ತಿಕ ಕ್ರೀಡೆ ನಡೆದವು.
ಸಾಯಂಕಾಲ ಕ್ರೀಡೆಯಲ್ಲಿ ವಿಜೇತರಿಗೆ ಪ್ರಶಸ್ತಿ ಹಾಗೂ ಪದಕ ನೀಡಿ ಅಭಿನಂದಿಸಲಾಯಿತು.
ಸೋಮವಾರ ದಂದು ಗುಡದೂರು ಬಸನಗೌಡ ಬಾದರ್ಲಿ ಕಾಲೇಜು ಆವರಣದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಬಳಗನೂರಿನ ಶ್ರೀ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು. ಗುಂಪು ಆಟದಲ್ಲಿ ಖೋ ಖೋ ದಲ್ಲಿ ಪ್ರಥಮಸ್ಥಾನ ಹಾಗೂ ಥ್ರೋಬಾಲ್ ಆಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಹಾಗೂ ಇಂದು ನಡೆದ ವೈಯಕ್ತಿಕ ಆಟೋಟಗಳಲ್ಲಿ 1)ಅಮರೇಶ್ ತಂದೆ ಬಸ್ಸಣ್ಣ 3000 ಮೀಟರ್ ಓಟದಲ್ಲಿ ಪ್ರಥಮಸ್ಥಾನ. 200 ಮೀಟರು ಓಟದಲ್ಲಿ ಪ್ರಥಮಸ್ಥಾನ.100ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ . ಅದೇ ರೀತಿಯಾಗಿ 2)ಸುಚಿತ್ರ ತಂದೆ ಶಿವರಾಜ್ ಗೌಡ ವಿದ್ಯಾರ್ಥಿನಿ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ. 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ. 100ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಅದೇ ರೀತಿಯಾಗಿ 3)ಅನಿತಾ ತಂದೆ ಹನುಮಂತ 400 ಮೀಟರ್ ಓಟದಲ್ಲಿ ಪ್ರಥಮಸ್ಥಾನ. 800 ಮೀಟರ್ ಓಟದಲ್ಲಿ ಪ್ರಥಮಸ್ಥಾನ. 3000 ನಡಿಗೆ ಸ್ಪರ್ಧೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಅದೇ ರೀತಿಯಾಗಿ 4)ಸುಧಾ ತಂದೆ ರಾಮನಗೌಡ 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ. 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. 5)ಅಭಿಷೇಕ್ 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ. 6)ಸಂತೋಷ್ ತಂದೆ ಯಂಕಪ್ಪ ತ್ರಿವಿಧ ಜಿಗಿತದಲ್ಲಿ ಪ್ರಥಮಸ್ಥಾನ. 7)ಅಯ್ಯಮ್ಮ ತಂದೆ ಅಂಬರೀಶ್ 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ. 8) ಚನ್ನಬಸಮ್ಮ ತಂದೆ ಮರೇಗೌಡ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಹಾಗೂ ಅನಿತಾ ತಂದೆ ಹನುಮಂತ 3 ವೈಯಕ್ತಿಕ ಆಟಗಳಲ್ಲಿ ಪ್ರಥಮಸ್ಥಾನ ಬಂದು ವೀರಾಗ್ರಹಣಿ ಪ್ರಶಸ್ತಿ ಪಡೆದಿದ್ದಾಳೆ. ಈ ಕ್ರೀಡಾಪಟುಗಳಿಗೆ ಹಾಗೂ ತರಬೇತಿ ನೀಡಿದ ಶ್ರೀ ಬಸವರಾಜ್ ಯಾದಗಿರಿ ದೈಹಿಕ ಶಿಕ್ಷಕರಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೇದಾರನಾಥ ಸ್ವಾಮಿಗಳು ಹಾಗೂ ಕಾರ್ಯದರ್ಶಿಗಳಾದ ಶ್ರೀ ಸಿದ್ದನಗೌಡ ಮಾಲಿಪಾಟೀಲ್ ಹಾಗೂ ಸರ್ವ ಸದಸ್ಯರು ಮತ್ತು ಮುಖ್ಯ ಗುರುಗಳಾದ ಶ್ರೀ ಅಮರನಾಥ ಹಳ್ಳೂರ್ ಮತ್ತು ಶಿಕ್ಷಕ ವೃಂದ ಸಿಬ್ಬಂದಿ ವರ್ಗ ಹಾಗೂ ಪ್ರಾಚಾರ್ಯರಾದ ಶ್ರೀ ಸಿದ್ದಪ್ಪ ಸೆಳ್ಳೆದ್ ಹಾಗೂ ಉಪನ್ಯಾಸಕ ವೃಂದದವರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಊರಿನ ಗುರು ಹಿರಿಯರು,ಹಳೆಯ ಕ್ರೀಡಾಪಟುಗಳು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿ ಕೆಳಗಿನ ಜನಸ್ಪಂದನ ವಾಟ್ಸಾಪ್ ಗುಂಪಿನ ಲಿಂಕ್ ಬಳಸಿರಿ.
https://chat.whatsapp.com/EnPflH1YdrTKgr8itRlTe9
ಸುದ್ಧಿಯ ಲಿಂಕ್ ಓಪನ್ ಆಗದಿದ್ದರೆ *'9008329745'* ನಂಬರನ್ನು *'UDAYAVANI. NEWS'* ಎಂದು ಸೇವ್ ಮಾಡಿಕೊಳ್ಳಿ.