ಮಸ್ಕಿ, ಸೆ.20 : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಲಿಂಗಸ್ಗೂರು , ಉಪ ಮಾರುಕಟ್ಟೆ ಮಸ್ಕಿ ಕಛೇರಿಗೆ ಇಂದು ಆಗಮಿಸಿ ಲಿಂಗಸ್ಗೂರು ತಾಲೂಕಾ ನ್ಯಾಯಾಧೀಶರಾದ ಚಂದ್ರಶೇಖರ್ ದಿದ್ದಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಕೋರ್ಟ್ ಸ್ಥಳ ಪರಿಶೀಲನೆ ಮಾಡಿದರು.
ನವೆಂಬರ್ 22 ರಿಂದ ಮಸ್ಕಿ ತಾಲೂಕು ಮಟ್ಟದ ನ್ಯಾಯಾಲಯ ಪ್ರಾರಂಭ ಮಾಡುವ ಉದ್ದೇಶದಿಂದ ಇಂದು ಮಸ್ಕಿ ಪಟ್ಟಣಕ್ಕೆ ಆಗಮಿಸಿ ಲಿಂಗಸ್ಗೂರು ತಾಲೂಕಾ ನ್ಯಾಯಾಧೀಶರಾದ ಚಂದ್ರಶೇಖರ್ ದಿದ್ದಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಕೋರ್ಟ್ ಸ್ಥಳ ಪರಿಶೀಲನೆ ಮಾಡಲು ಈಗಾಗಲೇ ಕೋರ್ಟ್ ಸ್ಥಳ ವನ್ನು ಈ ಹಿಂದೆ ಇದ್ದಂತಹ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಲಿಂಗಸ್ಗೂರು , ಉಪ ಮಾರುಕಟ್ಟೆ ಮಸ್ಕಿ ಕಛೇರಿಯನ್ನೇ ಆಯ್ಕೆ ಮಾಡಿದ್ದು, ಸ್ಥಳವನ್ನು ಪರಿಶೀಲಿಸಿ ಯಾವ ಯಾವ ರೂಮಿನಲ್ಲಿ ಏನೇನೂ ವಿಭಾಗವನ್ನು ಮಾಡೋಣ ಎಂದು ಸ್ಥಳವನ್ನು ಗುರುತಿಸಿ ಕೋರ್ಟ್ ನಡೆಸುವ ಜಾಗವನ್ನು ನಿಗದಿಪಡಿಸಿದರು. ಇದೇ ನವೆಂಬರ್ 22 ರಂದು ಪ್ರಾರಂಭವಾಗಿ ವಾರದ ಮೂರು ದಿನದ ಕಾರ್ಯ ಕಲಾಪ ಮಸ್ಕಿಯಲ್ಲಿ ನಡೆದರೆ ಇನ್ನುಳಿದ ದಿನಗಳು ಲಿಂಗಸ್ಗೂರ್ ನಲ್ಲಿ ನಡೆಯಲಿದೆ ಎಂದು ಕಛೇರಿ ಮೂಲಗಳು ತಿಳಿಸಿವೆ. ನಂತರ ಪುರಸಭೆ ಆಡಳಿತ ಮಂಡಳಿ ಹಾಗೂ ಸ್ಥಳೀಯ ರಾಜಕೀಯ ಮುಖಂಡರು ಹಾಗೂ ಮಸ್ಕಿ ತಾಲೂಕಿನ ನ್ಯಾಯವಾದಿಗಳ ಸಮ್ಮುಖದಲ್ಲಿ ನ್ಯಾಯಾಧೀಶರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ
ನ್ಯಾಯವಾದಿಗಳಾದ ರುದ್ರಪ್ಪ ಎಲಿಗಾರ,ಮಲ್ಲಪ್ಪ ನಾಗರಬೆಂಚಿ, ಕೆ. ಎಲ್ ನಾಯಕ್, ಅಮರೇಗೌಡ, ನಭೀ ಶೆಡ್ಮಿ,ಹಾಗೂ ಇತರ ವಕೀಲರು ಉಪಸ್ತಿತರಿದ್ದರು.
ಪುರಸಭೆಯ ವ್ಯವಸ್ಥಾಪಕರು, ಶಿವಣ್ಣ ಎಫ್.ಡಿ.ಎ, ಪುರಸಭೆ ಸದಸ್ಯರುಗಳಾದ ಸುರೇಶ್ ಹರಸೂರು,ಮಲ್ಲಯ್ಯ ಅಂಬಾಡಿ, ರಾಜಕೀಯ ಮುಖಂಡರುಗಳಾದ ರವಿಕುಮಾರ ಮಡಿವಾಳ ಮೌನೇಶ್ ನಾಯಕ, ಮಲ್ಲಯ್ಯ ಮುರಾರಿ,ಜಯಪ್ಪ ಮೆದಿಕಿನಾಳ, ಮಲ್ಲಿಕ್ ಮುರಾರಿ, ರವಿಕುಮಾರ್ ಕಟ್ಟಿಮನಿ, ಮೈಬೂಬ್ ಸಂತೆ ಬಜಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಸುದ್ದಿ ಕೆಳಗಿನ ಜನಸ್ಪಂದನ ವಾಟ್ಸಾಪ್ ಗುಂಪಿನ ಲಿಂಕ್ ಬಳಸಿರಿ.
https://chat.whatsapp.com/EnPflH1YdrTKgr8itRlTe9
ಸುದ್ಧಿಯ ಲಿಂಕ್ ಓಪನ್ ಆಗದಿದ್ದರೆ *'9008329745'* ನಂಬರನ್ನು *'UDAYAVANI. NEWS'* ಎಂದು ಸೇವ್ ಮಾಡಿಕೊಳ್ಳಿ.