ನಿಯಮ ಉಲ್ಲಂಘಿಸಿ ಅಪ್ತಾಪ್ರರಿಗೆ ಮದ್ಯ ಸರಬರಾಜು, ಕೇಂದ್ರ ವಿಭಾಗದಲ್ಲಿ 13 ಪ್ರಕರಣ ದಾಖಲು: ಡಿಸಿಪಿ ಶ್ರೀನಿವಾಸ್ ಗೌಡ

Udayavani News
0


ವರದಿ ಆಕಾಶ್ ಚಲವಾದಿ ಬೆಂಗಳೂರು
ಬೆಂಗಳೂರು, ಸೆ.20 : ಕೇಂದ್ರ ವಿಭಾಗ ಪೊಲೀಸರು ನಿನ್ನೆ ರಾತ್ರಿ ದಾಳಿ ನಡೆಸಿ ಅಪ್ತಾಪ್ರರಿಗೆ ಮದ್ಯ ಸರಬರಾಜು ಮಾಡುತ್ತಿದ್ದವರ ವಿರುದ್ಧ 13 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ, ಅಬಕಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ‌ ಅಪ್ರಾಪ್ತ ರಿಗೆ ಮದ್ಯ ಸರಬರಾಜು ಮಾಡಲಾಗುತಿತ್ತು. ನಿನ್ನೆ ರಾತ್ರಿ ಮತ್ತು ವಿಕೇಂಡ್ ನಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಮತ್ತು ಅಶೋಕ್ ನಗರ ಪೊಲೀಸರು ಹಲವೆಡೆ ದಾಳಿ ನಡೆಸಿದ್ದಾರೆ.

ನಿನ್ನೆಯ ದಾಳಿಯಲ್ಲಿ ಮೂರು ಪ್ರಕರಣಗಳು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಅಬಕಾರಿ ಇಲಾಖೆ ಮತ್ತು ಬಿಬಿಎಂಪಿ ಗೆ ವರದಿ ನೀಡಲಾಗಿದ್ದು, ಮಾಲೀಕರ ಲೈಸನ್ಸ್ ರದ್ದು ಮುಂತಾದ ವಿಚಾರಗಳ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಒಟ್ಟು 13 ಪ್ರಕರಣಗಳು ಕೇಂದ್ರ ವಿಭಾಗದಲ್ಲಿ ದಾಖಲಾಗಿದೆ. 18 ವರ್ಷದೊಳಗಿನ ಯುವಕ-ಯುವತಿಯರಿಗೆ ಮದ್ಯ ಸರಬರಾಜು ಮಾಡುವಂತಿಲ್ಲ. ಮಾಲೀಕರುಗಳು ದಾಖಲೆ ಪರಿಶೀಲನೆ ಮಾಡಿ ಅವರಿಗೆ ಸರಬರಾಜು ಮಾಡಬೇಕು ಎಂದು ಹೇಳಿದ್ದಾರೆ.
 ಕ್ಷಣ ಕ್ಷಣದ ಸುದ್ದಿ ಕೆಳಗಿನ ಜನಸ್ಪಂದನ ವಾಟ್ಸಾಪ್ ಗುಂಪಿನ ಲಿಂಕ್ ಬಳಸಿರಿ. 
https://chat.whatsapp.com/EnPflH1YdrTKgr8itRlTe9

ಸುದ್ಧಿಯ ಲಿಂಕ್ ಓಪನ್ ಆಗದಿದ್ದರೆ *'9008329745'* ನಂಬರನ್ನು *'UDAYAVANI. NEWS'* ಎಂದು ಸೇವ್ ಮಾಡಿಕೊಳ್ಳಿ.

Post a Comment

0Comments

Post a Comment (0)