ಮಸ್ಕಿ, ಸೆ.19 : ತಾಲೂಕಿನ ಹಾಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಂಗಮರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಕ್ಕಳಿಗೆ ವಿತರಿಸುವ ಹಾಲು ಕುಡಿದು, ಪ್ರತಿ ನಿತ್ಯ ಗುಣಮಟ್ಟದ ಸ್ವಾಧ ಭರಿತ ಹಾಲು ವಿತರಣೆಗೆ ಕ್ರಮ ಕೈಗೊಳ್ಳಬೇಕು. ನಾನು ಬಂದ ದಿನ ಮಾತ್ರ ಎಲ್ಲವೂ ಸರಿಯಿದ್ದರೆ ಪ್ರಯೋಜನವಿಲ್ಲ ಎಂದರು. ನರೇಗಾದಡಿ ನಿರ್ಮಿಸುತ್ತಿರುವ ಭೋಜನಾಲಯಕ್ಕೆ ಭೇಟಿ ನೀಡಿದರು. ಹಾಲಾಪುರ ಗ್ರಾಪಂ ನೂತನ ಕಟ್ಟಡ, ರಾಜೀವ್ ಗಾಂಧೀ
ಸೇವಾ ಕೇಂದ್ರದ ಕಟ್ಟಡ ಪರಿಶೀಲಿಸಿ, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ಗುಡಿಹಾಳದ ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ, ತುಂಗಭದ್ರಾ ಎಡದಂಡೆ ನಾಲೆಯಿಂದ ಕೆರೆಗೆ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಲಾಗುವುದು ಎಂದರು.
ಜೆಜೆಎಂ ಕಾಮಗಾರಿ ಪರಿಶೀಲನೆ : ಮುಸ್ಲಿ ಕಾರ್ಲಕುಂಟೆ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗಳನ್ನು ಜಿಪಂ ಸಿಇಒ ಶಶಿಧರ ಕುರೇರ ಪರಿಶೀಲಿಸಿದರು. ಗುಣಮಟ್ಟಕ್ಕೆ ಆದ್ಯತೆ ನೀಡುವುದರ ಜೊತೆಗೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಈ ಸಂಧರ್ಭದಲ್ಲಿ
ಮಸ್ಕಿ ತಾಪಂ ಇಒ ಪವನ್ ಕುಮಾರ್, ಸಹಾಯಕ ನಿರ್ದೇಶಕರಾದ (ನರೇಗಾ) ಶಿವಾನಂದರೆಡ್ಡಿ, ಪಿ.ಆರ್.ಡಿ ಲಿಂಗಸುಗೂರಿನ ಎಇಇ ಶಿವಕುಮಾರ್, ಪಿಡಿಒ ಎಂ.ಸಿ.ರೆಡ್ಡಿ, ತಾಂತ್ರಿಕ ಸಂಯೋಜಕ ಶಿವಲಿಂಗಯ್ಯ ಹಿರೇಮಠ, ಪಿಡಿಒ ಮಲ್ಲಿಕಾರ್ಜುನ,ತಾಂತ್ರಿಕ ಸಹಾಯಕ ಅಭಿಯಂತರ ಪ್ರದೀಪ್, ಕಂಪ್ಯೂಟರ್ ನಿರ್ವಾಹಕ ರಂಗಪ್ಪ, ಗ್ರಾಪಂ ಸದಸ್ಯರು, ಸಾರ್ವಜನಿಕರು ಇದ್ದರು.
ಕ್ಷಣ ಕ್ಷಣದ ಸುದ್ದಿ ಕೆಳಗಿನ ಜನಸ್ಪಂದನ ವಾಟ್ಸಾಪ್ ಗುಂಪಿನ ಲಿಂಕ್ ಬಳಸಿರಿ.
https://chat.whatsapp.com/EnPflH1YdrTKgr8itRlTe9
ಸುದ್ಧಿಯ ಲಿಂಕ್ ಓಪನ್ ಆಗದಿದ್ದರೆ *'9008329745'* ನಂಬರನ್ನು *'UDAYAVANI. NEWS'* ಎಂದು ಸೇವ್ ಮಾಡಿಕೊಳ್ಳಿ.