ಮಸ್ಕಿ, ಸೆ.18 : ಅಭಿನಂದನ್ ಸಂಸ್ಥೆಯ ವತಿಯಿಂದ ಜಾರಿಗೆ ತರಲಾದ ಸ್ವಚ್ಛ ಭಾರತ ಪರ್ಕಲ್ಪನೆಯನ್ನು ಆಧರಿಸಿದ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಭಾಗವಾಗಿ 63ನೇ ಸೇವಾ ಕಾರ್ಯವನ್ನು ಮಸ್ಕಿ ತಾಲೂಕಿನ ಬಸಾಪೂರ ಗ್ರಾಮದಲ್ಲಿ ಇರುವಂತಹ ಅಂಗನವಾಡಿ ಕೇಂದ್ರವನ್ನು ಸ್ವಚ್ಛಗೊಳಿಸಿ ಕಸ ಕಟ್ಟಿಗಳನ್ನು ತೆಗೆದು ಶಾಲಾ ಕೊಠಡಿಗಳಿಗೆ ಗೋಡೆಗಳಿಗೆ ಬಣ್ಣವನ್ನು ಹಚ್ಚಲಾಯಿತು.
ಇದೇ ಸಂಧರ್ಭದಲ್ಲಿ ಮುಖ್ಯೋಪಧ್ಯಾಯರಾದ ಅರಳಯ್ಯ ಶೆಟ್ಟಿ, ಶಿಕ್ಷಕರಾದ ಸೂರ್ಯಕಾಂತ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು
ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಪದಾಧಿಕಾರಿಗಳಾದ ಜಾಫರಮಿಯಾ ಸರ್, ಶೃತಿ ಹಂಪರಗುಂದಿ, ಮಲ್ಲಿಕಾರ್ಜುನ್ ಬಡಿಗೇರ, ರವಿಚಂದ್ರ ಸುಂಕನೂರ, ಹನುಮೇಶ್ ಶೀಕಲ್, ಕಾರ್ತಿಕ್ ಜೋಗಿನ್, ಕಿಶೋರ್ ಹಾಗೂ ಅಭಿನಂದನ್ ಸ್ಪೂರ್ತಿಧಾಮದ ಮಕ್ಕಳು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.