ಬೆಂಗಳೂರು, ಸೆ.18 : ಸಾಹಸ ಸಿಂಹ, ಅಭಿನಯ ಭಾರ್ಗವ, ಹೃದಯವಂತ, ಕರ್ನಾಟಕದ ಸುಪುತ್ರ, ಹೀಗೆ ಏನ್ ಬೇಕಾದ್ರು ಹೇಳಿ ಏನ್ ಬೇಕಾದ್ರು ಕರೀರಿ, ಹೇಗ್ ಬೇಕಾದ್ರು ಆರಾಧಿಸಿ. ಆದ್ರೆ ಕೋಟೆ ಕೋಟಿ ಅಭಿಮಾನಿಗಳ ಪಾಲಿನ ಆಪ್ತ ಮಿತ್ರನನ್ನು ಬಣ್ಣಿಸೋಕೆ ಪದಗಳೇ ಸಾಕಾಗೊಲ್ಲ. ಆ ಹೆಸರೇ ವಿಷ್ಣುವರ್ಧನ್.
ಡಾಕ್ಟರ್ ವಿಷ್ಣುವರ್ಧನ್… ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ.. ಹೃದಯಶಾಲಿ.. ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ.. ಕನ್ನಡ ಸಿನಿ ರಸಿಕರ ಕೋಟಿಗೊಬ್ಬ.. ವಿಷ್ಣು ಅಂದ್ರೆ ಮೊದಲು ನೆನಪಾಗೋದೆ ಅವರ ಸುಸಂಸ್ಕೃತ ವ್ಯಕ್ತಿತ್ವ.. ಡಾಕ್ಟರ್ ರಾಜ್ಕುಮಾರ್ ಬಿಟ್ರೆ ನಂತರದ ಸ್ಥಾನದಲ್ಲಿ ನಿಲ್ಲೋದು ಸಾಹಸ ಸಿಂಹ ವಿಷ್ಣು, ಈ ನಾಡಿನ ಬಂಧನ ಕಳಚಿಕೊಂಡು ಸುಮಾರು 13 ವರ್ಷಗಳಾಗಿವೆ.
ಆದ್ರೆ ವಿಷ್ಣು ಅಭಿಮಾನಿಗಳ ಮನಸ್ಸಿನಲ್ಲಿ ಮಾತ್ರ ಸದಾ ಹಚ್ಚ ಹಸಿರಾಗಿ ಉಳಿದಿದ್ದಾರೆ. ಕನ್ನಡಿಗರ ಮನದಲ್ಲಿ ಯಾವಾಗಲೂ ಮರೆಯಾದ ಮಾಣಿಕ್ಯ. ವಿಷ್ಣು ಜನ್ಮ ದಿನ ಅಂದ್ರೆ ಅವರ ಕೊಟ್ಯಂತರ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಈ ವರ್ಷವೂ ಸಹ ಸಂಭ್ರಮ ಸಡಗರದಿಂದ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು, ಅಭಿಮಾನಿಗಳು ಸಖತ್ ಗ್ರ್ಯಾಂಡ್ ಆಗಿ ಸೆಲಬ್ರೆಟ್ ಮಾಡ್ತಿದ್ದಾರೆ.
ವಿಷ್ಣು ದಾದಾ ಬರ್ತಡೇ ಸಡಗರ ಕಳೆದ ಒಂದು 15 ದಿನದಿಂದ ಶುರುವಾಗಿದೆ. ಸಾಯಸಿಂಹನ ಫ್ಯಾನ್ಸ್ ಭರ್ಜರಿ ತಯಾರಿ ಮಾಡಿಕೊಂಡು, ವಿಷ್ಣುವರ್ಧನ್ ಹುಟ್ಟುಹಬ್ಬವನ್ನ ಸಾಕಷ್ಟು ಅರ್ಥಪೂರ್ಣವಾಗಿ ಸೆಲಬ್ರೆಟ್ ಮಾಡಿದ್ದಾರೆ. ವಿಶೇಷ ಅಂದ್ರೆ ಡಿಸೆಂಬರ್ 29ಕ್ಕೆ ವಿಷ್ಣು ವರ್ಧನ್ ಕನ್ನಡ ಇಂಡಸ್ಟ್ರಿಗೆ ಬಂದು ಬರೋಬರಿ 50 ವರ್ಷಗಳು ಪೂರೈಸಲಿದೆ. ಹೀಗಾಗಿ ಡಾ. ವಿಷ್ಣುವರ್ಧನ್ ಸೇನಾ ಸಮಿತಿ, ಹಾಗೂ ಹಲವು ವಿಷ್ಣು ವರ್ಧನ್ ಸಂಘಗಳು ಸೇರಿ ಪುಣ್ಯಭೂಮಿಯಲ್ಲಿ ದಾದಾನ ಪ್ರಮುಖ ಸಿನಿಮಾಗಳ 50 ಕಟೌಟ್ಗಳನ್ನ ನಿಲ್ಲಿಸಿ, ಹೊಸ ದಾಖಲೆ ಬರೆದಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಈ 50 ಕಟೌಟ್ಗಳು ಬರೋಬ್ಬರಿ 40 ಅಡಿ ಎತ್ತರ ಇವೆ. ಭಾರತೀಯ ಚಿತ್ರರಂಗದಲ್ಲಿ ಇಲ್ಲಿಯವರೆಗೂ ಒಂದೇ ಜಾಗದಲ್ಲಿ ಯಾವುದೇ ಸ್ಟಾರ್ಗೆ ಈ ರೀತಿ ಕಟೌಟ್ಗಳನ್ನು ನಿಲ್ಲಿಸಿರಲಿಲ್ಲ. ಇದು ಒಂಥರಾ ವಿಶೇಷ ಅಂತಲೇ ಹೇಳಬಹುದು.
ಹೌದು ವಿಷ್ಣುದಾದಾನ 72ನೇ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು. ಬೆಳ್ಳಂ ಬೆಳಗ್ಗೆಯೇ ಅಭಿಮಾನ್ ಸ್ಟುಡಿಯೋ ಬಳಿ ಜಮಾಯಿಸಿದ ವಿಷ್ಣುದಾದಾನ ಫ್ಯಾನ್ಸ್, ವಿಷ್ಣುಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದಾದ ನಂತ್ರ ಅಭಿಮಾನಿಗಳಿಂದ ರಕ್ತದಾನ ಹಾಗೂ ಅನ್ನದಾನ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಯಿತ್ತು. ಇನ್ನು ಈ ವರ್ಷ ವಿಷ್ಣು ವರ್ಧನ್ 72 ವರ್ಷದ ಹುಟ್ಟುಹಬ್ಬವನ್ನ, ಫಿಲ್ಮ್ ಚೇಂಬರ್ ಮುಂಭಾಗದಲ್ಲಿಯೂ ಸಹ ಫ್ಯಾನ್ಸ್ ಸೆಲಬ್ರೆಟ್ ಮಾಡಿದ್ದಾರೆ. ಸಾಹಸಿಂಹನ ದೊಡ್ಡ ಫೋಟೋ ಇಟ್ಟು, ಇದಕ್ಕೆ ಹೂವಿನಿಂದ ಅಲಂಕಾರ ಮಾಡಿ ಜೈಕಾರ ಹಾಕುತ್ತಾ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ.
ಇನ್ನೂ ಮೈಸೂರಿನಲ್ಲಿ ಸಾಹಸಸಿಂಹ ಡಾ. ವಿಷ್ಣು ವರ್ಧನ್ ಹುಟ್ಟುಹಬ್ಬ ಆಚರಣೆ ಮಾಡಲಾಗಿದ್ದು, ಮೈಸೂರಿನ ಎಚ್.ಡಿ. ಕೋಟೆ ರಸ್ತೆಯ ಹಾಲಾಳು ಸಮೀಪ ಇರುವ ವಿಷ್ಣು ಸ್ಮಾರಕದಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ವಿಷ್ಣು ಸ್ಮಾರಕಕ್ಕೆ ಡಾ. ಭಾರತಿ ವಿಷ್ಣುವರ್ಧನ್, ಅನಿರುದ್ದ್, ಕೀರ್ತಿ ಅನಿರುದ್ ಭೇಟಿಕೊಟ್ಟಿದ್ದು, ಸ್ಮಾರಕದ ಬಳಿ ವಿಷ್ಣು ಫೋಟೋ ಮುಂದೆ ದೀಪ ಬೆಳಗಿಸಿ ಪೂಜೆ ಸಲ್ಲಿಸಲಾಗಿದೆ. ಸ್ಮಾರಕದ ಬಳಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳ ಜಮಾವಣೆಯಾಗಿದ್ದು, ವಿಷ್ಣು ಹುಟ್ಟುಹಬ್ಬಕ್ಕೆ ಅಭಿಮಾನಿಗಳು ತರಿಸಿದ್ದ ಬೃಹತ್ ಕೇಕ್ ಅನ್ನ ಭಾರತಿ ವಿಷ್ಣುವರ್ಧನ್ ಕತ್ತರಿಸಿದ್ದಾರೆ. ಅಭಿಮಾನಿಗಳ ಸಿಹಿ ವಿತರಿಸಿ, ವಿಷ್ಷು ಭಾವಚಿತ್ರವಿರೋ ಟೀ ಶರ್ಟ್ ಗಳ ವಿತರಣೆ ಮಾಡಲಾಗಿದೆ.
ಇಂದು ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ಡಬಲ್ ಧಮಾಕ..ಸಾಹಸಿಂಹ ವಿಷ್ಣು ವರ್ಧನ್ ಹುಟ್ಟುಹಬ್ಬದ ದಿನವೇ, ಇಂಡಿಯನ್ ಸೂಪರ್ ಸ್ಟಾರ್ ಉಪೇಂದ್ರ ಬರ್ತಡೇ..ಕನ್ನಡ ಚಿತ್ರರಂಗದಲ್ಲಿ ಡಿಫರೆಂಟ್ ಸಿನಿಮಾಗಳಿಂದ ಐಡೆಂಟಿಪೈ ಆಗೋ ಉಪ್ಪಿ ವಾಸ್ತವ ಜಗತ್ತಿನ ಕ್ರೂರತೆಯನ್ನು ಜನರ ಕಣ್ಣಿಗೆ ಕಟ್ಟಿಕೊಟ್ಟವರು. ಈ ಕಾರಣದಿಂದ ಸಾಮಾನ್ಯ ಉಪೇಂದ್ರ ರಾವ್ ಅನ್ನೋ ಪ್ರತಿಭೆ ಇಂದು ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಪಟ್ಟಗಿಟ್ಟಿಸಿಕೊಂಡಿರೋದು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಡಿಫರೆಂಟ್ ಆಗಿ ಆ್ಯಕ್ಷನ್ ಕಟ್ ಹೇಳಿರೋ ಉಪ್ಪಿಗೆ ಹುಟ್ಟುಹಬ್ಬದ ಸಂಭ್ರಮ.
ಯೆಸ್ ಸ್ಯಾಂಡಲ್ವುಡ್ನ ರಿಯಲ್ ಸ್ಟಾರ್.. ಸೂಪರ್ ಸ್ಟಾರ್ ಉಪೇಂದ್ರಗೆ ಜನ್ಮ ದಿನ. ಉಪ್ಪಿ 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ವರ್ಷವೂ ವಿಶೇಷವಾಗಿ ಬರ್ತಡೇ ಸೆಲೆಬ್ರೇಟ್ ಮಾಡೋ ರಿಯಲ್ ಅಭಿಮಾನಿಗಳು ಈ ವರ್ಷ ತಮ್ಮ ಫೇವರಿಟ್ ಆ್ಯಕ್ಟರ್ ಉಪ್ಪಿಯ ಜನ್ಮ ದಿನವನ್ನ ಮತ್ತಷ್ಟು ರಂಗಾಗಿ ಸೆಲೆಬ್ರೇಟ್ ಮಾಡಿದ್ದಾರೆ.. ಹೌದು, ಉಪ್ಪಿ ಏನ್ ಮಾಡಿದ್ರು ಡಿಫ್ರೆಂಟ್ ಅನ್ನೋದು ಎಲ್ರಿಗೂ ಗೊತ್ತಿರೋ ವಿಷ್ಯ. ಹೀಗಾಗಿ ಉಪ್ಪಿ ಹುಟ್ಟುಹಬ್ಬ ಅಂದ್ರೆ ಅಭಿಮಾನಿಗಳಿಗೆ ದೊಡ್ಡ ಫೆಸ್ಟಿವಲ್. ಭಿನ್ನ ವಿಭಿನ್ನವಾಗಿ ರಿಯಲ್ ಸ್ಟಾರ್ ಮನೆ ಮುಂದೆ ಫ್ಯಾನ್ಸ್ ಬಂದುಬಿಡ್ತಾರೆ. ಇಂತಹ ಸೂಪರ್ ಫ್ಯಾನ್ಸ್ಗಾಗಿ ಉಪ್ಪಿ ತಮ್ಮ ಬರ್ತ್ಡೇ ದಿನವೇ ಸರ್ಪ್ರೈಸ್ ಕೊಟ್ಟಿದ್ದಾರೆ..
ಕನ್ನಡದ ಬುದ್ಧಿವಂತನ ಕಂಡು ಥ್ರಿಲ್ ಆದ್ರು ಅಭಿಮಾನಿಗಳು.!
ಹೌದು, ಉಪೇಂದ್ರ ಜನ್ಮದಿನ ಅಂದ್ರೆ ಫ್ಯಾನ್ಸ್ಗೆ ಸಂಭ್ರಮ. ಸಿನಿಮಾಗಳಲ್ಲಿ ಮನ ಬಂದಂತೆ ರಂಜಿಸೋ ಉಪ್ಪಿ ರಿಯಲ್ ಆಗಿ ಸಿಗ್ತಾರೆ ಅಂದ್ರೆ ಕೇಳ್ಬೇಕಾ.. ಸಾವಿರ ಸಾವಿರ ಅಭಿಮಾನಿಗಳು ಮಧ್ಯೆ ರಾತ್ರಿಯಿಂದಲೇ ಉಪ್ಪಿ ಮನೆ ಮುಂದೆ ಜಮಾಯಿಸಿದ್ರು,. ಕಳೆದ ಎರಡು ವರ್ಷದಿಂದ ಕೊರೋನಾ ಕಾರಣ, ಅಭಿಮಾನಿಗಳ ಜೊತೆ ಉಪ್ಪಿ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿಲ್ಲ. ಇದಕ್ಕಾಗಿ ಉಪೇಂದ್ರ ಈ ಬಾರಿ ಸಖತ್ ಡಿಫರೆಂಟ್ ಆಗಿ ಅಭಿಮಾನಿಗಳ ಜೊತೆ ಬರ್ತಡೇ ಸೆಲಬ್ರೆಟ್ ಮಾಡಿಕೊಂಡಿದ್ದಾರೆ.
ಪ್ರತಿ ವರ್ಷ ತಮ್ಮ ನೆಚ್ಚಿನ ಸ್ಟಾರ್ ಬರ್ತಡೇಗೆ ಕೇಕ್, ಹಾರ ಹೂಗುಚ್ಛವನ್ನು ತರದೇ ಗಿಡಗಳನ್ನ ಉಪ್ಪಿಗೆ ನೀಡಿ ತಮ್ಮ ವಿಶ್ ತಿಳಿಸುತ್ತಿದ್ರು. ಆದ್ರೆ ಈ ವರ್ಷ ಉಪ್ಪಿ ಇದಕ್ಕೆಲ್ಲ ಬ್ರೇಕ್ ಹಾಕಿದ್ದಾರೆ.. ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು.. ಉಪ್ಪಿಗೆ ಕೊಟ್ಟು ವಿಶ್ ಮಾಡಿದ್ದಾರೆ. ಇಷ್ಟೇ ಅಲ್ಲಾ ಉಪ್ಪಿ ಬರ್ತಡೇ ಸ್ಪೆಷಲ್ ಆಗಿ ಕಬ್ಜ ಸಿನಿಮಾದ ಟೀಸರ್ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ ಆಗಿ, ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿ, ಟ್ರೆಂಡಿಂಗ್ನಲ್ಲಿ ಕಮಾಲ್ ಮಾಡ್ತಿದೆ.. ಇದರ ಜೊತೆಗೆ ಉಪ್ಪಿ ನಟಿಸಿ/ನಿರ್ದೇಶಿಸುತ್ತಿರುವ UI ಸಿನಿಮಾದ ವಿಡಿಯೋ ರಿಲೀಸ್ ಮಾಡಿ ರಿಯಲ್ ಸ್ಟಾರ್ಗೆ ಬರ್ತಡೇ ವಿಶ್ ಮಾಡಿದೆ ಈ ಎರಡು ಚಿತ್ರತಂಡ.. ಇನ್ನು ಇಡೀ ಭಾರತೀಯ ಚಿತ್ರರಂಗದ ಸ್ಟಾರ್ಸ್ ಉಪೇಂದ್ರಗೆ ಶುಭ ಹಾರೈಸಿದ್ದಾರೆ.. ಎನಿವೇ ನಮ್ ಕಡೆಯಿಂದ ಈ ಎರಡು ಮಹಾನ್ ಕಲಾವಿದರಿಗೆ ಹುಟ್ಟುಹಬ್ಬದ ಶುಭಾಶಯಗಳು.