ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಇಂಡಿಯನ್ ಸೋಶಿಯಲ್ ಫೋರಮ್ ಪ್ರಶಸ್ತಿ ಪ್ರಧಾನ

Udayavani News
0

UDAYAVANI NEWS
ಮನಾಮ ಸೆ.19 : ಸಮಾಜದಲ್ಲಿ ತಮ್ಮನ್ನು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರಿಗೆ ಇಂಡಿಯನ್ ಸೋಶಿಯಲ್ ಫೋರಂ ನೀಡುವ ಈ ವರ್ಷದ ಪ್ರಶಸ್ತಿಯನ್ನು ಮನಾಮ ಮುಹರ್ರಕ್ಅಲ್ ಇಸ್ಲಾ ಸೊಸೈಟಿ ಹಾಲ್ ನಲ್ಲಿ ಪ್ರಧಾನಿಸಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಮುಸ್ತಫಾ ರಜಾ ರಬ್ಬಾನಿ (ಬಿಹಾರ) ರವರಿಗೆ ಶಿಕ್ಷಣ ತಜ್ಞ ಪ್ರಶಸ್ತಿ,ಸಾಮಾಜಿಕ ಕಾರ್ಯಕರ್ತರಾದ 
ಜವಾದ್ ಪಾಷಾ (ಕರ್ನಾಟಕ) ಅತ್ಯುತ್ತಮ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿ,
ಮಾನವೀಯ ಸೇವೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ಸಾಬು ಚಿರಮ್ಮೆಲ್ ಮತ್ತು ಫೈಸಲ್ ಪತಂಡಿ (ಕೇರಳ) ರವರಿಗೆ ಪ್ರಶಸ್ತಿಯನ್ನು ನೀಡಿದರು.

ಅತ್ಯುತ್ತಮ ಬರಹಗಾರ ಪ್ರಶಸ್ತಿಯನ್ನು ಅಬ್ದುಲ್ ಖಾಯ್ (ತಮಿಳುನಾಡು) ಮತ್ತು ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದ ರಿಯಾಜ್ ಬಿ.ಕೆ (ಕರ್ನಾಟಕ) ಅವರಿಗೆ ಅತ್ಯುತ್ತಮ ಉದ್ಯಮಿ ಪ್ರಶಸ್ತಿಯನ್ನು ನೀಡಿದರು.
 ಅಲ್ ಇಸ್ಲಾಹ್ ಸಭಾಂಗಣದಲ್ಲಿ ನಡೆದ
ಇಂಡಿಯನ್ ಸೋಶಿಯಲ್ ಫೋರಮ್ ಆಯೋಜಿಸಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರಧಾನಕಾರ್ಯಕ್ರಮ ನಡೆಯಿತು. ಇಂಡಿಯನ್ ಸೋಶಿಯಲ್ ಫೋರಂ ಕೇಂದ್ರ ಸಮಿತಿ ಅಧ್ಯಕ್ಷ ಅಲಿ ಅಕ್ಬರ್ ಮತ್ತು ಪ್ರಧಾನ ಕಾರ್ಯದರ್ಶಿ ರಫೀಕ್ ಅಬ್ಬಾಸ್ ಉಪಸ್ಥಿತರಿದ್ದರು.


Post a Comment

0Comments

Post a Comment (0)