ಮಸ್ಕಿ. ಸೆ.19 : ತಾಲೂಕಿನ ಗುಡುದೂರು ಬಸನಗೌಡ ಪಿ. ಯು ಕಾಲೇಜು ಆವರಣದಲ್ಲಿ ಮಸ್ಕಿ ತಾಲೂಕ ಮಟ್ಟದ ಕ್ರೀಡಾ ಕೂಟಗಳು ಜರುಗಿದ್ದು, ಗುಂಪು ಆಟಗಳಿಗೆ ಶಾಸಕ ತುರುವಿಹಾಳ ಚಾಲನೆ ನೀಡಿದರು.
ಭಾನುವಾರ ಪದವಿ ಪೂರ್ವ ಕಾಲೇಜು ತಾಲೂಕ ಮಟ್ಟದ ಕ್ರೀಡೆಗಳು ಗುಡುದೂರು ಬಸನಗೌಡ ಪಿ. ಯು ಕಾಲೇಜು ಆವರಣದಲ್ಲಿ ಜರುಗಿದವು.ಶಾಸಕರಾದ ಆರ್.ಬಸನಗೌಡ ತುರುವಿಹಾಳ ವಾಲಿಬಾಲ್ ಸರವ್ ಮಾಡುವ ಮೂಲಕ ಛಾಲನೆ ನೀಡಿದರು.
ಬಾಲಕ ಮತ್ತು ಬಾಲಕಿಯರ ಕ್ರೀಡೆಗಳಲ್ಲಿ ಕೆಲವು ತಂಡಗಳು ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರೆ.ಕೆಲವು ತಂಡಗಳು ರನ್ನರ್ ಆಫ್ ಆಗಿ ದ್ವಿತೀಯ ಸ್ಥಾನಕ್ಕೆ ಸಂತಸಪಟ್ಟವು.
ಬಾಲಕರ ತಂಡಗಳು
ಬಾಲಕರ ಕಬ್ಬಡ್ಡಿ ಪ್ರಥಮ ಸ್ಥಾನ - ಪ್ರಭವಿತುಂ ಪಿಯು ಕಾಲೇಜು ಮಸ್ಕಿ,ದ್ವಿತೀಯ ಸ್ಥಾನ ಕಿತ್ತೂರು ರಾಣಿ ಚೆನ್ನಮ್ಮ ಪಿಯು ಕಾಲೇಜು ಮಸ್ಕಿ, ಬಾಲಕರ ಥ್ರೋ ಬಾಲ್ ಪ್ರಥಮ ಸ್ಥಾನ - ಪ್ರಭವಿತುಂ ಪಿಯು ಕಾಲೇಜು ಮಸ್ಕಿ,ದ್ವಿತೀಯ ಸ್ಥಾನ - ತುಂಗಭದ್ರಾ ಪಿಯು ಕಾಲೇಜು ಹಾರಾಪೂರ,ಬಾಲಕರ ವಾಲಿಬಾಲ್ ಪ್ರಥಮ ಸ್ಥಾನ - ರಾಷ್ಟೀಯ ಪಿಯು ಕಾಲೇಜು ಮಸ್ಕಿ,
ದ್ವಿತೀಯ ಸ್ಥಾನ - ಪ್ರಭವೀತುಂ ಪಿಯು ಕಾಲೇಜು ಮಸ್ಕಿ,ಬಾಲಕರ ಖೋ- ಖೋ ಪ್ರಥಮ ಸ್ಥಾನ - ಸಿದ್ರಾಮೇಶ್ವರ ಪಿಯು ಕಾಲೇಜು ಬಳಗಾನೂರು,ದ್ವಿತೀಯ ಸ್ಥಾನ - ಪ್ರಭವಿತುಂ ಪಿಯು ಕಾಲೇಜು ಮಸ್ಕಿ,
ಬಾಲಕಿಯರ ಖೋ- ಖೋ ಪ್ರಥಮ ಸ್ಥಾನ - ಬಸನಗೌಡ ಪಿಯೂ ಕಾಲೇಜು ಗುಡುದೂರು,ದ್ವಿತೀಯ ಸ್ಥಾನ - ಸಿದ್ರಾಮೇಶ್ವರ ಪಿಯು ಕಾಲೇಜು ಬಳಗಾನೂರು,ಬಾಲಕಿಯರ ಥ್ರೋ ಬಾಲ್ ಪ್ರಥಮ ಸ್ಥಾನ - ಬಾಲಕಿಯರ ಸರಕಾರಿ ಪಿಯು ಕಾಲೇಜು ಮಸ್ಕಿ, ದ್ವಿತೀಯ ಸ್ಥಾನ - ಸಿದ್ರಾಮೇಶ್ವರ ಪಿಯು ಕಾಲೇಜು ಬಳಗಾನೂರು, ಬಾಲಕಿಯರ ಕಬ್ಬಡ್ಡಿ ಪ್ರಥಮ ಸ್ಥಾನ - ಪ್ರಭವಿತುಂ ಪಿಯು ಕಾಲೇಜು ಮಸ್ಕಿ, ದ್ವಿತೀಯ ಸ್ಥಾನ -
ಬಾಲಕಿಯರ ಸರಕಾರಿ ಪಿಯು ಕಾಲೇಜು ಮಸ್ಕಿ,
ಬಾಲಕಿಯರ ವಾಲಿಬಾಲ್ ಪ್ರಥಮ ಸ್ಥಾನ - ಪ್ರಭವಿತುಂ ಪಿಯು ಕಾಲೇಜು ಮಸ್ಕಿ,ದ್ವಿತೀಯ ಸ್ಥಾನ -ಬಾಲಕಿಯರ ಸರಕಾರಿ ಪಿಯು ಕಾಲೇಜು ಮಸ್ಕಿ,
ಭಾನುವಾರ ಗುಂಪು ಆಟಗಳು ನಡೆದಿದ್ದು ನಾಲ್ಕು ಬಾಲಕರ ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದು,ನಾಲ್ಕು ಬಾಲಕಿಯರ ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಆಯಾ ಕಾಲೇಜು ಆಡಳಿತ ಮಂಡಳಿ ಕ್ರೀಡಾ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ. ಇಂದು ವೈಯಕಿಕ ಆಟಗಳು ನಡೆಯಲಿವೆ ಕಾಲೇಜು ವಿದ್ಯಾರ್ಥಿಗಳಲ್ಲಿ ನಮ್ಮ ಕಾಲೇಜು ವೈಯಕ್ತಿಕ ಕ್ರೀಡೆ ಗಳಲ್ಲಿ ನಾವೇ ಗೆಲವು ಸಾಧಿಸುವುದು ಎಂಬ ಆತ್ಮ ವಿಶ್ವಾಸದಲ್ಲಿ ಇಂದಿನ ಕ್ರೀಡೆಗಳಲ್ಲಿ ಆಸಕ್ತಿ ತೋರಿಸುತ್ತಾ ಆಟವನ್ನು ಆಡುತ್ತಿದ್ದಾರೆ.
ಇದೇ ಸಂದರ್ಭದಲ್ಲಿ
ಪಂಪಾಪತಿಯಪ್ಪ ಪ್ರಾಂಶುಪಾಲರು, ನಾಗೇಶ್ ಪ್ರಾಂಶುಪಾಲರು ಜಂಗಮರ ಹಳ್ಳಿ, ವಿಜಯ್ ಕುಮಾರ್ ಗಿಡದ ಪ್ರಾಂಶುಪಾಲರು, ಉಪನ್ಯಾಸಕರಾದ ಮರಿಸ್ವಾಮಿ ಜಂಗಮರ ಹಳ್ಳಿ, ಸಿದ್ದಾರ್ಥ್ ಪಾಟೀಲ, ಪಂಪಾಪತಿ ಗುತ್ತೇದಾರ್,ರಾಮ್ ಪ್ರಸಾದ್ ಡಿ. ಚಿಗರಿ, ರವಿಕುಮಾರ್ ಪರಾಪೂರಾ, ಚಾಂದ್ ಪಾಷಾ,ಮಲ್ಲಯ್ಯ, ಮಾಳಪ್ಪ, ಷರೀಫ್ ,ಗುಂಡಮ್ಮ, ನರಸಿಂಹ ರಾಜು, ಗೋಪಿ ಸೇರಿದಂತೆ ಬಸನಗೌಡ ಪಿಯು ಕಾಲೇಜು ಸರ್ವ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಇದ್ದರು.