ಮಸ್ಕಿ,ಸೆ.21 : ಬಸನಗೌಡ ಬಾದರ್ಲಿ ಪಿಯು ಕಾಲೇಜು ಗುಡುದೂರಿನಲ್ಲಿ ನಡೆದ ತಾಲ್ಲೂಕು ಮಟ್ಟದ ಕಾಲೇಜುವಾರು ಕಬಡ್ಡಿ ಕ್ರೀಡಾ ಕೂಟದಲ್ಲಿ ಪ್ರಭವಿತುಂ ಕಾಲೇಜಿನ ವಿದ್ಯಾರ್ಥಿಗಳ ಅಭೂತಪೂರ್ವ ಗೆಲುವು ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.
ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ತಂಡಗಳಾದ ಕಬಡ್ಡಿ ಮಹಿಳಾ ತಂಡ, ಕಬಡ್ಡಿ ಪುರುಷರ ತಂಡ,ವಾಲಿಬಾಲ್ ಮಹಿಳಾ ತಂಡ, ಥ್ರೋಬಾಲ್ ಪುರುಷರ ತಂಡ.
ರನ್ನರ್ ಆಫ್ ಕ್ರೀಡಾ ತಂಡಗಳು
ಖೋ-ಖೋ ಪುರುಷರ ತಂಡ,ವಾಲಿಬಾಲ್ ಪುರುಷರ ತಂಡ.
ವೈಯಕ್ತಿಕ ಕ್ರೀಡೆ ಯಲ್ಲಿ ಜಯ ಗಳಿಸಿದ ಕ್ರೀಡೆಗಳು
ಚಕ್ರ ಎಸೆತ ಪ್ರಥಮ ಸ್ಥಾನ :- ಮಹಮ್ಮದ್ ಕೈಫ್, 100 ಮೀ ಓಟ ಮೂರನೇ ಸ್ಥಾನ :- ಸ್ವಪ್ನ, 1500 ಮೀ ಓಟ ದ್ವೀತಿಯ ಸ್ಥಾನ :- ಭೀಮನಗೌಡ, ಭರ್ಚಿ ಎಸೆತ ದ್ವೀತಿಯ :- ಚೈತ್ರಾ, 4X400 ರೀಲೆ ದ್ವೀತಿಯ ಸ್ಥಾನ :- ದುರ್ಗಾ ಮತ್ತು ತಂಡ, 1500 ಮೀ ಓಟ ಮೂರನೇ ಸ್ಥಾನ :- ಪ್ಲಾವ್ಯರಾಣಿ,ಉದ್ದ ಜಿಗಿತ ಮೂರನೇ ಸ್ಥಾನ :- ಮೇಘಾ, ಗುಂಡು ಎಸೆತ ಮೂರನೇ ಸ್ಥಾನ :- ಸುಶ್ಮೀತಾ
ಮಹಿಳಾ ಕಬಡ್ಡಿ ತಂಡಕ್ಕೆ ಮೆಂಟರಾಗಿ ಜವಾಬ್ದಾರಿ ಕೊಟ್ಟಂತಹ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿಜಯಕುಮಾರ್ ಮತ್ತು ಹಿರಿಯ ಉಪನ್ಯಾಸಕರಾದ ಶ್ರೀ ಪಂಪಾಪತಿ ಗುತ್ತೇದಾರ ಹಾಗೂ ಕಲಾ ವಿಭಾಗದ ಮುಖ್ಯಸ್ಥರಾದ ಶ್ರೀ ರವಿಕುಮಾರ್ ಪರಾಪೂರು ಅವರಿಗೂ. ವಿಶೇಷವಾಗಿ ಕಬಡ್ಡಿ ತಂಡದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಪ್ರದರ್ಶನವನ್ನು ನೀಡಿ ಗೆಲುವು ಸಾಧಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಅಭಿನಂದನೆಗಳನ್ನು ಸಲ್ಲಿಸಿ ಹೀಗೆ ಮುಂಬರುವ ಕ್ರೀಡೆಗಳಲ್ಲಿ ಇನ್ನೂ ಹೆಚ್ಚೆಚ್ಚು ಆಸಕ್ತಿ ತೋರಿಸುತ್ತಾ ಗೆಲುವು ಸಾಧಿಸಿ ಕಾಲೇಜಿನ ಕೀರ್ತಿ ಹೆಚ್ಚಿಸಿ ಎಂದು ಶುಭ ಹಾರೈಸಿದ್ದಾರೆ.
ಕ್ಷಣ ಕ್ಷಣದ ಸುದ್ದಿ ಕೆಳಗಿನ ಜನಸ್ಪಂದನ ವಾಟ್ಸಾಪ್ ಗುಂಪಿನ ಲಿಂಕ್ ಬಳಸಿರಿ.
https://chat.whatsapp.com/EnPflH1YdrTKgr8itRlTe9
ಸುದ್ಧಿಯ ಲಿಂಕ್ ಓಪನ್ ಆಗದಿದ್ದರೆ *'9008329745'* ನಂಬರನ್ನು *'UDAYAVANI. NEWS'* ಎಂದು ಸೇವ್ ಮಾಡಿಕೊಳ್ಳಿ.