ಯಶ್​ ಮುಂದಿನ ಸಿನಿಮಾ ಯಾವುದು..? ಪ್ಯಾನ್​ ವರ್ಲ್ಡ್​​​ ವಾರ್​​ ಯಶ್​​ಗೆ ಶಂಕರ್​ ಡೈರೆಕ್ಷನ್​..!

Udayavani News
0

ವರದಿ ಆಕಾಶ್ ಚಲವಾದಿ ಬೆಂಗಳೂರು
ಬೆಂಗಳೂರು, ಸೆ. 20 : ರಾಕಿಂಗ್​ ಸ್ಟಾರ್​ ಯಶ್​​ ಸ್ಯಾಂಡಲ್​ವುಡ್​ ಟು ನ್ಯಾಷನಲ್​ ಲೆವೆಲ್​ವರೆಗೆ ಸೂಪರ್​​​ ಸ್ಟಾರ್​​ ಆಗಿ ಮಿಂಚುತಿರುವ ಸೂಪರ್​ ಸ್ಟಾರ್​. ಭಾರತೀಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್​​ ಕ್ರಿಯೇಟ್​​ ಮಾಡಿಕೊಂಡಿರುವ ರಾಕಿಭಾಯ್​ಗೆ, ಕೊಟ್ಯಂತರ ಅಭಿಮಾನಿ ಬಳಗವಿದೆ. ಹೀಗಿರುವಾಗಲೇ ಸೌತ್​ ಸ್ಟಾರ್​​ ನಿರ್ದೇಶಕ ಶಂಕರ್​ ದಿಢೀರ್​​ ಅಂತ ಕಮಲ್​​ ಹಾಸನ್​ ಕೈ ಬಿಟ್ಟು, ಯಶ್​​ ಕೈ ಹಿಡಿತ್ತಾರಂತೆ.. ಅರೇ ಏನಿದು ಅಂತ ಯೋಚನೆ ಮಾಡ್ತಿದ್ದೀರಾ..? ಈ ಸ್ಟೋರಿ ಓದಿ…

ರಾಕಿಂಗ್​ ಸ್ಟಾರ್​ ಯಶ್​​..ಸ್ಯಾಂಡಲ್​ವುಡ್​​ ಮಾಸ್ಟರ್​​ ಪೀಸ್​​..ರಾಜಾಹುಲಿ…ರಾಮಾಚಾರಿ..ರಾಕಿಭಾಯ್​​​​..‘ನಾನು ಬರೋವರೆಗೂ ಬೇರೆಯವರ ಹವಾ, ನಾನು ಬಂದ್ಮೇಲೆ ನಂದೇ ಹವಾ’ ಅಂತ ಖದರ್​​ ಲುಕ್​​ನಲ್ಲಿ ಖಡಕ್​​​ ಡೈಲಾಗ್​ ಮೇಲೆ ಡೈಲಾಗ್​ ಹೊಡೆಯುತ್ತ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟು, ತನ್ನದೇ ಹವಾ ಕ್ರಿಯೇಟ್​ ಮಾಡಿ ಮಿಂಚುತ್ತಿರುವ ಓನ್​ ಎಂಡ್​ ಓನ್ಲಿ ಹೀರೋ​​ ಅಂದ್ರೆ ರಾಕಿಂಗ್​ ಸ್ಟಾರ್​ ಯಶ್​.

ರಾಕಿಂಗ್​ ಸ್ಟಾರ್​ ಯಶ್​ ಸ್ಯಾಂಡಲ್​​ವುಡ್​​ನ ಯೂತ್ ಐಕಾನ್​.. ಈ ಮಾಸ್ಟರ್​​ ಪೀಸ್​​ ಸಿನಿಮಾ ಅಂದ್ರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿತ್ತಾರೆ. ಅಷ್ಟರ ಮಟ್ಟಿಗೆ ಯಶ್​​ ಫ್ಯಾನ್ಸ್​​ ಫಾಲೋಯಿಂಗ್​​ ಹೊಂದಿದ್ದಾರೆ. ಇನ್ನು ರಾಕಿಭಾಯ್​​ ಖದರ್​​ ಲುಕ್​​​, ಖಡಕ್​ ವಾಯ್ಸ್​​​​, ಡಿಫರೆಂಟ್​​ ಮ್ಯಾನರಿಸಂಗೆ ಫ್ಯಾನ್ಸ್​​ ಫುಲ್​​ ಥ್ರಿಲ್​ ಆಗಿದ್ದು, ಯಶ್​​ನ ಬೆಳ್ಳಿ ತೆರೆ ಮೇಲೆ ನೋಡಲು ಫ್ಯಾನ್ಸ್​​ ತುದಿಗಾಲಲ್ಲಿ ನಿಂತಿರ್ತಾರೆ..

ರಾಕಿಭಾಯ್ ಸ್ಯಾಂಡಲ್​​ವುಡ್​​ನ ಓಡೋ ಕುದುರೆ. ಕನ್ನಡ ಸಿನಿ ಅಭಿಮಾನಿಗಳಿಗೆ ಸಿಕ್ಕ ಮಾಸ್ಟರ್ ಪೀಸ್​ ಆ್ಯಕ್ಟರ್.. ಪರದೆ ಮೇಲೆ ರಂಗು ರಂಗಾಗಿ ಮಿಂಚೋ ಅಣ್ತಮ್ಮ.. ಸ್ಯಾಂಡಲ್​ವುಡ್ ತಾಕತ್ತು ಏನು ಅನ್ನೋದನ್ನ ಇಡೀ ಜಗತ್ತಿಗೆ ತೋರಿಸಿಕೊಟ್ಟ ರಾಜಾಹುಲಿ. ‘ಕೆಜಿಎಫ್’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​​ ಟು ನ್ಯಾಷನಲ್​​ ಲೆವೆಲ್​​ವರೆಗೆ ತನ್ನದೇ ಛಾಪು ಮೂಡಿಸಿ, ನ್ಯಾಷನಲ್ ಸ್ಟಾರ್​​​ ಆಗಿ ಮಿಂಚಿತ್ತಿದ್ದಾರೆ…ಹೀಗಾಗಿ ಯಶ್​​ಗೆ ಕೋಟ್ಯಂತರ ಅಭಿಮಾನಿ ಬಳಗವೇ ಇದೆ..

ಕೆಜಿಎಫ್ ಚಾಪ್ಟರ್ 2 ನಂತರ ರಾಕಿಂಗ್ ಸ್ಟಾರ್ ಯಶ್ ನಡೆ ಏನು? ರಾಕಿಂಗ್ ಸ್ಟಾರ್ 19ನೇ ಸಿನಿಮಾ ಯಾವಾಗ ಅನೌನ್ಸ್ ಆಗುತ್ತೆ. ಆ ಚಿತ್ರಕ್ಕೆ ಸಾರಥಿ ಯಾರು? ಇಂತ ಹತ್ತು ಹಲವು ಪ್ರಶ್ನೆಗಳು ರಾಕಿಭಾಯ್ ಅಭಿಮಾನಿಗಳ ಮನಸ್ಸಿನಲ್ಲಿ ಓಡಾಡುತ್ತಿದೆ. ಅಲ್ಲದೇ ಕೆಲದಿನಗಳಿಂದ ಇವರು ಯಶ್​ಗೆ ಆ್ಯಕ್ಷನ್ ಕಟ್ ಹೇಳ್ತಾರಂತೆ, ಇವರಂತೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದೀಗ ಅದೇ ರೀತಿಯಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಇದನ್ನು ಕೇಳಿದ ರಾಕಿಭಾಯ್ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

ಕೆಜಿಎಫ್​ 2 ಸಿನಿಮಾ ನೋಡಿರೋ ಪ್ರತಿಯೊಬ್ಬ ಅಭಿಮಾನಿಯು ಯಶ್​ ಮುಂದಿನ ಸಿನಿಮಾದಲ್ಲಿ ಯಾವ ಲುಕ್​ನಲ್ಲಿ ಕಾಣಿಸಿಕೊಳ್ಳಬಹುದು ಅಂತ ಕ್ಯಾಲ್ಕುಲೇಷನ್​ ಹಾಕುತ್ತಿದ್ದಾರೆ. ಹೀಗಿರುವಾಗ್ಲೇ ಅಣ್ತಮ್ಮಾ ​ಮತ್ತೊಂದು ಪ್ಯಾನ್​ ವರ್ಲ್ಡ್​ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ಟಾಕ್​ ಗಾಂಧಿನಗರ ಟು ಇಡೀ ವರ್ಲ್ಡ್​ ವೈಡ್​​​ ಶುರುವಾಗಿದೆ.

ಕೆಜಿಎಫ್​ 2 ಸಕ್ಸಸ್​​ ನಂತ್ರ ಯಶ್​ ಸಾಕಷ್ಟು ಕಥೆಗಳು ಕೇಳಿ, ಸಾಲು ಸಾಲು ಸಿನಿಮಾಗಳಲ್ಲಿಗೆ ಗ್ರೀನ್​ ಸಿಗ್ನಲ್​​ ಕೊಟ್ಟಿದ್ದಾರಂತೆ. ಇದಲ್ಲದೇ ರಾಕಿಭಾಯ್​ಗೆ ಪೂರಿ ಜಗನ್ನಾಥ್ ನಿರ್ದೇಶನ ಮಾಡಲಿದ್ದಾರೆ, ಮಫ್ತಿ ಖ್ಯಾತಿಯ ನರ್ತನ್ ಆಕ್ಷನ್ ಕಟ್ ಹೇಳುತ್ತಾರೆ ಅನ್ನೋ ಸುದ್ದಿ ಸಹ ಸಖತ್​ ಸೌಂಡ್​ ಮಾಡಿತ್ತು. ಇಷ್ಟೇ ಅಲ್ಲಾ ಕೆಜಿಎಫ್​ ಚಾಪ್ಟರ್​ 3 ಸದ್ಯದಲ್ಲಿಯೇ ಸೆಟ್ಟೇರಲಿದೆ. ಇದರಲ್ಲಿ ರಾಕಿಭಾಯ್​ ಪೂಜಾ ಹೆಗ್ಡೆ ಜೊತೆ ಸ್ಕ್ರೀನ್​ ಶೇರ್​ ಮಾಡಿದ್ದಾರಂತೆ ಅನ್ನೋ ಸುದ್ದಿ ಸಹ ಹರಿದಾಡ್ತಿತ್ತು. ಈಗ ಭಾರತದ ​ ಖ್ಯಾತ ನಿರ್ದೇಶಕ ಶಂಕರ್​​, ಯಶ್​ಗೆ ಆ್ಯಕ್ಷನ್​​ ಕಟ್​ ಹೇಳ್ತಾರೆ ಅನ್ನೋ ಸುದ್ದಿ ಜೋರಾಗಿದೆ.

ಹೌದು ಶಂಕರ್ ರಾಕಿ ಭಾಯ್​​​​​ಗೆ ಆಕ್ಷನ್ ಕಟ್ ಹೇಳಲಿದ್ದು ಈ ಸಿನಿಮಾಗೆ ಬಾಲಿವುಡ್​​ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಬಂಡವಾಳ ಹೂಡಲಿದ್ದಾರಂತೆ. ಇಷ್ಟೇ ಅಲ್ಲಾ ಗುರು ಈ ಸಿನಿಮಾದ ಬಜೆಟ್​ ಕೇಳಿದ್ರೆ ನೀವು ಶಾಕ್​ ಆಗ್ತೀರಾ.. ಹೌದು ಬರೋಬ್ಬರಿ 1000 ಕೋಟಿ ಬಜೆಟ್​​​ನಲ್ಲಿ ಯಶ್​​-ಶಂಕರ್​ ಕಾಂಬಿನೇಷನ್ ಹೊಸ​ ಸಿನಿಮಾ ಮೂಡಿಬರ್ತಿದೆಯಂತೆ. ಇನ್ನು ಮೂಲಗಳ ಪ್ರಕಾರ ಮೂವರ ಕಾಂಬಿನೇಷನ್​ನ ಸಿನಿಮಾಗೆ ಎಸ್. ವೆಂಕಟೇಶನ್ ಅವರು ಚಿತ್ರಕಥೆ ಬರೆಯಲಿದ್ದಾರಂತೆ. ಸದ್ಯ ಈ ಸುದ್ದಿ ಬಾಲಿವುಡ್ ಹಾಗೂ ಸೌತ್ ಇಂಡಸ್ಟ್ರಿಗಳಲ್ಲಿ ಸಂಚಲವನ್ನೇ ಸೃಷ್ಟಿ ಮಾಡಿದೆ.
ಇನ್ನು ನಿರ್ದೇಶಕ ಶಂಕರ್​​, ಕಮಲ್​ ಹಾಸನ್​​ ನಟನೆಯ ‘ಇಂಡಿಯನ್​ 2’ ಸಿನಿಮಾವನ್ನ ನಿರ್ದೇಶನ ಮಾಡ್ತಿದ್ದಾರೆ. ಆದ್ರೆ ಇದರ ಚಿತ್ರೀಕರಣ ಕಾರಣಾತರದಿಂದ ನಿಧಾನವಾಗ್ತಿದೆ. ಹೀಗಾಗಿ ಶಂಕರ್​, ‘ಇಂಡಿಯನ್​-2’ ಸಿನಿಮಾವನ್ನ ಅರ್ಧಕ್ಕೆ ಬಿಟ್ಟು, ರಾಕಿಂಗ್​ ಸ್ಟಾರ್​ ಯಶ್​​ಗೆ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರಂತೆ. ಅಂದ್ಹಾಗೆ ಇದ್ರಲ್ಲಿ ವಿಜಯ್​ ಸೇತುಪತಿ ಸೇರಿದಂತೆ ಮಲ್ಟಿಸ್ಟಾರ್​ಗಳ ಸಂಗಮವಿರಲಿದ್ದು, ಪ್ಯಾನ್​​ ಇಂಡಿಯಾ ಸಿನಿಮಾವಾಗಲಿದೆಯಂತೆ


ಶಂಕರ್​​​ ಸಿನಿಮಾ ಅಂದ್ರೆ, ಅಲ್ಲಿ ಸಿಕ್ಕಾಪಟ್ಟೆ ಸ್ಪೆಷಾಲಿಟಿ ಇರುತ್ತೆ. ರಜನಿಕಾಂತ್​ ಜೊತೆ ಶಿವಾಜಿ, ರೋಬೋ, ರೋಬೋ 2.O ಸೇರಿ ಹಲವು ಸೂಪರ್​ಹಿಟ್​ ಸಿನಿಮಾ ಕೊಟ್ಟವರು ಶಂಕರ್​. ಇದೇ ಶಂಕರ್​ ಈಗ ಯಶ್​ ಜೊತೆ ಸಿನಿಮಾ ಮಾಡ್ತಾರೆ ಅನ್ನೋದೇ ಒಂದು ಸೆನ್ಸೇಷನಲ್. ಸದ್ಯದಲ್ಲಿಯೇ ಯಶ್​ ಹಾಗೂ ಶಂಕರ್​​ ಹೊಸ ಸಿನಿಮಾ ಅಧಿಕೃತವಾಗಿ ರಿವೀಲ್​ ಆಗಲಿದ್ದು, ಟೈಟಲ್​ ಫಿಕ್ಸ್​ ಆಗಲಿದೆಯಂತೆ. ಇನ್ನು ಈ ಸುದ್ದಿ ಕೇಳುತ್ತಿದಂತೆ ರಾಕಿ ಫ್ಯಾನ್ಸ್​​ ಫುಲ್​ ಥ್ರಿಲ್​ ಆಗಿದ್ದು, ಈ ಸುದ್ದಿ ಅಧಿಕೃತವಾಗಲ್ಲಿ ಅಂತ ದೇವರ ಹತ್ತಿರ ಬೇಡಿಕೊಳ್ತಿದ್ದಾರೆ.. ಇದಲ್ಲದೇ ಈ ಸಿನಿಮಾ ನೋಡಲು ವೇಟ್​​​ ಮಾಡ್ತಿದ್ದಾರೆ.

ಕ್ಷಣ ಕ್ಷಣದ ಸುದ್ದಿ ಕೆಳಗಿನ ಜನಸ್ಪಂದನ ವಾಟ್ಸಾಪ್ ಗುಂಪಿನ ಲಿಂಕ್ ಬಳಸಿರಿ. 
https://chat.whatsapp.com/EnPflH1YdrTKgr8itRlTe9

ಸುದ್ಧಿಯ ಲಿಂಕ್ ಓಪನ್ ಆಗದಿದ್ದರೆ *'9008329745'* ನಂಬರನ್ನು *'UDAYAVANI. NEWS'* ಎಂದು ಸೇವ್ ಮಾಡಿಕೊಳ್ಳಿ.



Post a Comment

0Comments

Post a Comment (0)