ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ ನದಿ:ಜಿಲ್ಲೆಯ ಸಾವಿರಾರು ಎಕರೆ ಬೆಳೆಗಳು ನೀರಿನಲ್ಲಿ

Udayavani News
0

ವರದಿ:ಶರಣಪ್ಪ ಹೆಳವರ,ಬಾಗಲಕೋಟೆ
ಬಾಗಲಕೋಟೆ, ಸೆ.14 : ಘಟಪ್ರಭಾ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಮುಧೋಳ ತಾಲ್ಲೂಕಿನ ಮಿರ್ಜಿ ಹಾಗೂ ಮಳಲಿ ಗ್ರಾಮಗಳಿಗೆ ನೀರು ನುಗ್ಗಿದೆ.

ಮಿರ್ಜಿ ಗ್ರಾಮದ ಆಯುರ್ವೇದ ಆಸ್ಪತ್ರೆಯಲ್ಲಿ ಕಾಳಜಿ ಕೇಂದ್ರ ಆರಂಭಿಸಿದ್ದು, 16 ಕುಟುಂಬಗಳ ಸದಸ್ಯರಿಗೆ ಆಶ್ರಯ ನೀಡಲಾಗಿದೆ.

ಯಾದವಾಡ ಸೇತುವೆ ಮುಳುಗಡೆಯಾಗಿದೆ. ಈಗಾಗಲೇ ಮುಧೋಳ ತಾಲ್ಲೂಕಿನ 10 ಹಾಗೂ ರಬಕವಿ ಬನಹಟ್ಟಿ ತಾಲ್ಲೂಕಿನ ಒಂದು ಬ್ಯಾರೇಜ್ ಮುಳುಗಡೆಯಾಗಿವೆ.

ರೂಗಿ, ಮೆಟಗುಡ್ಡ, ಉತ್ತೂರ, ಒಂಟಗೋಡಿ, ಚನ್ನಾಳ, ರಂಜನಗಿ, ಚನ್ನಾಳ, ಮಲ್ಲಾಪೂರ ಯಾದವಾಡ ಕಡೆ ಹೋಗುವ ರಸ್ತೆ ಮಾರ್ಗ ಕಡಿತ ಗೊಂಡಿದೆ.‌

ಮಿರ್ಜಿ, ಒಂಟಗೋಡಿ, ಅಕ್ಕಿಮರಡಿ, ನಾಗರಾಳ, ಮಳಲಿ, ಚನ್ನಾಳ, ಜಾಲಿಬೆರಿ, ಉತ್ತೂರು, ಜಿರಗಾಳ, ಇಂಗಳಗಿ, ಯಡಹಳ್ಳಿ, ಅಂತಪುರ, ಬುದ್ನಿ ಬಿ.ಕೆ, ಬಿದರಿ, ಮಾಚಕನೂರ ಸೇರಿದಂತೆ ಹಲವು ಗ್ರಾಮಗಳ ಸಾವಿರಾರು ಎಕರೆಯಲ್ಲಿನ ಬೆಳೆಗಳು ನೀರಿನಲ್ಲಿವೆ.


Post a Comment

0Comments

Post a Comment (0)