ಯಾದಗಿರಿ ವರದಿ ಸೆ 14 :: ಗುರುಮಿಠಕಲ್ ಮತಕ್ಷೇತ್ರದಲ್ಲಿ ಕೋಲಿ ಸಮುದಾಯದ ಮತಗಳ ಓಲೈಕೆಗಾಗಿ, ತಮ್ಮ ಸ್ವಾರ್ಥದ ರಾಜಕಾರಣಕ್ಕಾಗಿ ಕಾಟಚಾರಕ್ಕೆ ಸಮುದಾಯದ ಬಹು ದೊಡ್ಡ ಸಮಸ್ಯೆಯ ಬಗ್ಗೆ ತಾವುಗಳು ಶಾಸಕರಾದಗಿನಿಂದ ಇದು 2ನೇ ಬಾರಿ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತಿರುವುದು ಸರಿಯಷ್ಟೇ. ರಾಜ್ಯದಲ್ಲಿ ಕೋಲಿ, ಕಬ್ಬಲಿಗ ಮತ್ತು ಅದರ ಉಪ ಜಾತಿಗಳ ಕುಲಶಾಸ್ರೀಯ ಅಧ್ಯಯನ ಕಾರ್ಯವನ್ನು ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರಿಂದ ಕೈಗೊಂಡು, ಅವರು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಸಲ್ಲಿಸಿದ ಅಂತಿಮ ವರದಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ನಂತರ RGI ರವರು ಕೇಳಲಾಗಿದ್ದ ಅಂಶಗಳ ಸಮರ್ಥನೆ/ಅಭಿಪ್ರಾಯಗಳನ್ನು ಕುಲಸಚಿವರು ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರಿಂದ ಪಡೆದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಇವರು 2019 ರಲ್ಲ್ಲಿ ಸಲ್ಲಿಸಿದ್ದು, ಸಮರ್ಥನೆ/ಅಭಿಪ್ರಾಯಗಳನ್ನು 2021 ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಈ ಸಮಸ್ಯೆಯು Constitutional Matter ಇದರಡಿ ಬರುವುದರಿಂದ ಈ ಬಗ್ಗೆ ಯಾರು ಮುಂಚಿತವಾಗಿ ಏನೆ ಭರವಸೆ ನೀಡಲು ಆಸಾಧ್ಯ ತಾವು ಮೊದಲು ಅಧ್ಯಯನ ಮಾಡಬೇಕಿತ್ತು. ನನಗೆ ಸಂಪರ್ಕಿಸಿದರೇ ನಾನೇ ಮಾಹಿತಿ ನೀಡುತ್ತಿದೆ. ತಾವು ಕೇಳಿರುವ 2 ಪ್ರಶ್ನೆಗಳಿಗೆ ಒಂದೇ ಉತ್ತರ ST ಸೇರ್ಪಡೆ ಪ್ರಸ್ತಾವನೆ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ ಎಂಬುವುದು ಬರುತ್ತದೆ.
ನಾಟಕೀಯ ಗುರುಮಿಠಕಲ್ ಶಾಸಕರುತಾವುಗಳು ಕೇವಲ ಕಾಟಚಾರಕ್ಕೆ ಎಂಬಂತೆ ಪ್ರಶ್ನೆ ಕೇಳಿ ಚುನಾವಣೆ ಸಂಧರ್ಭದಲ್ಲಿ ಸಮುದಾಯದ ಪರ ಧ್ವನಿ ಎತ್ತಿದ್ದೇನೆ ಎಂದು ಬಿಂಬಿಸಲು, ಮತಬ್ಯಾಂಕ ಗಟ್ಟಿಗೊಳಿಸಲು ಹೋರಟಿರುವುದು ಸ್ವಾರ್ಥಕ್ಕಾಗಿ ವಿನಃ ಯಾವುದೇ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಅಲ್ಲ. ಯಾವುದೇ ಸ್ಪಷ್ಟತೆಯ ದಾಖಲೆ, ಸಮುದಾಯದ ಪರವಾಗಿ ಇರುವ ದಾಖಲೆಗಳು, ಸಂವಿಧಾನದಡಿಯಲ್ಲಿರುವ ಅವಕಾಶದ ಬಗ್ಗೆ ತಿಳಿಯದೇ ಕೇವಲ ಪ್ರಶ್ನೆ ಕೇಳುವುದರಿಂದ ST ಆಗುವುದಿಲ್ಲ. ತಮಗೆ ನಿಜವಾಗಿಯೂ ST ಸೇರ್ಪಡೆ ಮಾಡಬೇಕೆಂದು ಮನದಲ್ಲಿದ್ದರೆ ತಾವುಗಳು ಮೊದಲು ಸಮುದಾಯದವರಿಂದ ಕ್ರೋಢಿಕೃತ ದಾಖಲೆ, ಅಭಿಪ್ರಾಯ ಹಾಗೂ ರಹಸ್ಯ ವರದಿ ಪಡೆದು ಮಾಡಬಹುದಾಗಿತ್ತು. ಇದು ನಿಮ್ಮಲ್ಲಿನ ಸರ್ವಧಿಕಾರಿ ಧೋರಣೆ ಏನಿದೆ ಎಂಬುವುದನ್ನು ಸ್ಪಷ್ಷವಾಗಿ ಸೂಚಿಸುತ್ತದೆ. ಸಮುದಾಯ ಈ ನಿಮ್ಮ ಜಾಣ ನಡೆಯನ್ನು ತೀವ್ರವಾಗಿ ಖಂಡಿಸುತ್ತದೆ.