ರಾಯಚೂರು, ಸೆ.14 : ಕರ್ನಾಟಕ ಜಾಗೃತ ರೈತ ಸಂಘ ರಾಜ್ಯ ಸಮಿತಿ ಬೆಂಗಳೂರು ಹಾಗೂ ಕೆ. ವೈ. ಎಫ್ ಸಂಘವು ಜಂಟಿಯಾಗಿ ರಾಯಚೂರು ಜಿಲ್ಲಾಧಿಕಾರಿಗಳ ಕಛೇರಿಯ ಎದುರುಗಡೆಯ ಟಿಪ್ಪು ಸುಲ್ತಾನ್ ಗಾರ್ಡನ್ ನಲ್ಲಿ
ಮಸ್ಕಿಯ ಮಾರಲದಿನ್ನಿ ಡ್ಯಾಂನ ಆಧುನೀಕರಣ ನಾಲಾ ಯೋಜನೆಯ 42 ಕೋಟಿ ರೂಪಾಯಿ ಕಾಮಗಾರಿಯು ತೀರಾ ಕಳಪೆ ಕಾಮಗಾರಿ ಎಂದು ವಿರೋಧಿಸಿ ಪ್ರತಿಭಟಿಸಲಾಯಿತು.
ಮಸ್ಕಿ ತಾಲೂಕಿನ ಈ ಭಾಗದ ಹಳ್ಳಿಗಾಡಿನ ಹಸಿರು ಉಸಿರಿನ ಎಂದೇ ಹೆಸರುವಾಸಿಯಾಗಿರುವ ನಾಲಾ ಯೋಜನೆಯು ಸುಮಾರು ಹತ್ತು ಹಲವು ಹಳ್ಳಿಗಳ ನೀರಾವರಿ ಅಚ್ಚುಕಟ್ಟು ಪ್ರದೇಶವಾಗಿದ್ದು,7416 ಎಕರೆಗೂ ನೀರಾಡುತ್ತಿದ್ದು ಈ ಪ್ರದೇಶದಲ್ಲಿ ಸದರಿ ಕಾಲುವೆಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಹಾಗಾಗಿ ಕಾಲುವೆಗಳನ್ನು ಆಧುನೀಕರಣ ಗೊಳಿಸಲು ಮತ್ತು ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪಿಸಲು ಸರ್ಕಾರದಿಂದ 42 ಕೋಟಿ 75 ಲಕ್ಷ ಮತದ ಕಾಮಗಾರಿ ನಡೆಯುತ್ತಿದ್ದು, ಸದರಿ ಆಧುನಿಕರಣ ಕಾಮಗಾರಿಯಿಂದ ಮಸ್ಕಿ ನಾಲಾ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಹತ್ತು ಹಲವು ಗ್ರಾಮಗಳ ರೈತರಿಗೆ ಪ್ರಯೋಜನವಾಗಲಿದೆ ಈ ಯೋಜನೆಯ ಕಾಮಗಾರಿಯಿಂದ ರೈತರು ಸಂತೋಷಗೊಂಡಿದ್ದು ಮತ್ತು ಈ ಆಧುನೀಕರಣ ಕಾಮಗಾರಿಯೂ ಕೂಡ ಸ್ವಾಗತಾರ್ಹ. ಆದರೆ ಮುಖ್ಯ ವಿಷಯ ಏನಂದರೆ ಗುತ್ತಿಗೆದಾರ ಎ. ಭೂಪಾಲ ರೆಡ್ಡಿ ಮತ್ತು ನಾಲಾ ಅಚ್ಚುಕಟ್ಟ ಅಭಿವೃದ್ಧಿ ಪ್ರದೇಶದ ಎಇ ದಾವುದ್ ಅವರು ಇದರ ಜೊತೆ ಕೈ ಜೋಡಿಸಿದ್ದು,42,75,00,000 ಮೊತ್ತದ ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿದ್ದು, ಯೋಜನಾಕ್ರಿಯ ಸಿದ್ಧತಾ ಪಟ್ಟಿಯ ಪ್ರಕಾರ ಅನುಗುಣವಾಗಿ ಕಾಮಗಾರಿ ನಡೆಯುತ್ತಿರುವುದಿಲ್ಲ ಹಾಗಾಗಿ ಈ ಭಾಗದ ರೈತರ ಪಾಲಿನ ವರದಾನವಾಗಿರುವ ಮಸ್ಕಿ ನಾಳೆ ಯೋಜನೆಯ 7416 ಎಕರೆಯ ಭೂಮಿಗೆ ನೀರು ಹರಿಯಲು ಸಾಧ್ಯವೇ ಇಲ್ಲ. ಏಕೆಂದರೆ ಕಾಮಗಾರಿಯ ಶಿಥಿಲಗೊಂಡ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದ್ದು ಕಾಲುವೆಗಳು ಮೊದಲಿದ್ದಕ್ಕಿಂತ ಪೂರ್ಣಮಟ್ಟದ ಚಿಕ್ಕದಾಗಿದೆ. ಹಾಗಾಗಿ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು ಗುತ್ತಿಗೆದಾರ ಮತ್ತು ಅದಕ್ಕೆ ಸಹಕಾರಿಯಾಗಿರುವ ಇಇ, ಎಇಇ,ಎಇ, ಜೆಇ ಇವರ ಮೇಲೆ ಕಾನೂನು ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಹಾಗೂ ಗುತ್ತಿಗೆದಾರ ಎ.ಭೂಪಾಲ ರೆಡ್ಡಿಯ ವಿರುದ್ಧ ಕಾನೂನ ಶಿಸ್ತು ಕ್ರಮ ಕೈಗೊಂಡು ಅವರ ಪರವಾನಿಗೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಮತ್ತು ಕಾಲುವೆಗಳ ಆಧುನೀಕರಣ ಪುನಹ ಮೊದಲಿನಂತೆ ನಿರ್ಮಾಣಗೊಳ್ಳಬೇಕು ಎಂದು ಕರ್ನಾಟಕ ಜಾಗೃತ ರೈತ ಸಂಘ ರಾಜ್ಯ ಸಮಿತಿ ಬೆಂಗಳೂರು ವತಿಯಿಂದ ಮಾನ್ಯ ಅಧೀಕ್ಷಕರು ಇಂಜಿನಿಯರಿಂಗ್ ತುಂಗಭದ್ರಾ ಕಾಲುವೆ ನಿರ್ಮಾಣ ವೃತ್ತ, ಕೆ. ಎನ್.ಎನ್. ಎಲ್ ಯರಮರಸ್ ಕ್ಯಾಂಪ್ ರಾಯಚೂರು ಇವರಿಗೆ ಮನವಿ ಪತ್ರವನ್ನು ಸಲ್ಲಿಸಿ, ಈ ಹೋರಾಟವನ್ನು ನಿರ್ಲಕ್ಷ್ಯ ಮಾಡಿದ್ದಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.
ಇದೇ ಸಂದರ್ಭದಲ್ಲಿ
ಅಬ್ರಹಾಂ ಪನ್ನೂರು ರಾಜ್ಯಾಧ್ಯಕ್ಷರು ಕೆ. ಜೆ. ಆರ್. ಎಸ್, ಲಿಂಗಣ್ಣ ಜಿಲ್ಲಾ ಅಧ್ಯಕ್ಷರು ಕೆ. ಜೆ.ಆರ್.ಎಸ್, ಅನಿಲ್ ಕುಮಾರ್ ಕೆ. ವೈ. ಎಫ್ ಜಿಲ್ಲಾಅಧ್ಯಕ್ಷರು ರಾಯಚೂರು,ಪ್ರದೀಪ್ ಕಪಗಲ್ ವಿಭಾಗೀಯ ಅಧ್ಯಕ್ಷರು ಕೆ. ಜೆ.ಆರ್.ಎಸ್, ರಾಜೇಂದ್ರ ಕಲ್ಲೂರು ರೈತ ಮುಖಂಡರು, ಮಲ್ಲಿಕ್ ಮುರಾರಿ ಕೆ. ವೈ.ಎಫ್ ತಾಲೂಕಾ ಅಧ್ಯಕ್ಷರು ಮಸ್ಕಿ,ರವಿಕುಮಾರ್ ಕಟ್ಟಿಮನಿ ಉಪಾಧ್ಯಕ್ಷರು ಕೆ. ವೈ. ಎಫ್ ಮಸ್ಕಿ, ಬಾಬು ಹರನಹಳ್ಳಿ, ಜಿ.ನರಸಿಂಹ ಕುರ್ಡಿ, ಪೃಥ್ವಿ ಕುಮಾರ್ ಕಪಗಲ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.