ಮಸ್ಕಿ, ಸೆ.14 : ಮಹಾತ್ಮಾಗಾಂಧಿ ರಾಯಚೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ದಲ್ಲಿ ಮಹಿಳೆಯರು ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಮಸ್ಕಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹಾಲಾಪೂರಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಐದು ವಿದ್ಯಾರ್ಥಿನಿಯರು ಆಯ್ಕೆ, ವಿದ್ಯಾರ್ಥಿಗಳನ್ನು ಅಭಿನಂದಿಸಿದ ಆಡಳಿತ ಮಂಡಳಿ.
2022-23 ನೇ ಸಾಲಿನ ಸೋಮವಾರ
ದಂದು ಮಹಾತ್ಮಾಗಾಂಧಿ ರಾಯಚೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ದಲ್ಲಿ ಮಹಿಳೆಯರು ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಮಸ್ಕಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹಾಲಾಪೂರಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಐದು ಜನ ವಿದ್ಯಾರ್ಥಿನಿಯರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ಟ್ರೋಫಿ ಮೆಡಲ್ ಗಳನ್ನು ನೀಡಿ ಗೌರವಿಸಿದ್ದಾರೆ.
ನಂದಿನಿ ಮಲ್ಲಪ್ಪ, ಪವಿತ್ರ ಶಂಕರಪ್ಪ, ಅಂಕಿತಾ ಈರಪ್ಪ, ಸ್ನೇಹ ಕಲ್ಯಾಣಪ್ಪ, ಸಂಗೀತ ಅಮರಪ್ಪ, ಆಯ್ಕೆಯಾಗಿದ್ದಾರೆ.ಆಯ್ಕೆಯಾದ ಬಾಲಕಿಯರಿಗೆ ಮುಖ್ಯೋಪಾಧ್ಯರಾದ ಸುಭಾಸ್ ಸಿಂಗ್ ಹಜಾರಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ವೀರಭದ್ರ ತಾತ ಹಾಗೂ ಸರ್ವ ಶಾಲಾ ಸಿಬ್ಬಂದಿ ವರ್ಗ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ರವೀಂದ್ರ ಹಾಗೂ ಶಾಲೆಯ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಪಾಲಕರು, ಊರಿನ ಪ್ರಮುಖರು ಅಭಿನಂದಿಸಿದ್ದಾರೆ.