ಮಸ್ಕಿ, ಸೆ. 20 : ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಿಗಬೇಕಾದಂತ ಸೂರ್ಯಕಾಂತಿ,ತೊಗರಿ, ಕಡಲೆ, ಗೊಬ್ಬರ ಬೀಜ ಯಂತ್ರೋಪಕರಣ ತಾಡಪತ್ರಿ ಇವುಗಳ ಹೆಸರಿನಲ್ಲಿ ಬಾರಿ ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ್ ಡಾಕ್ಟರ್ ಎನ್ ಮೂರ್ತಿ ಸ್ಥಾಪಿತ) ಸಮಿತಿ ಮಸ್ಕಿ ತಾಲೂಕ ಸಮಿತಿಯು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಸ್ಕಿ ಹೋಬಳಿಯ ಕೃಷಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಿಗಬೇಕಾದಂತಹ ಯಂತ್ರೋಪಕರಣದಲ್ಲಿ ಬಾರಿ ಗೋಲ್ಮಾಲ್ ಹಾಗೂ ಅದೇ ರೀತಿಯಾದಂತೆ ಕೀಟನಾಶಕ್ಕೆ ಎಣ್ಣೆ, ಹುಳ ಗೊಬ್ಬರ ಔಷಧಿ ಹಾಗೂ ತಾಡಪತ್ರಿ, ತೊಗರಿ ಬೀಜ, ಕಡಲೆ, ಕೀಟನಾಸಿಕೆ ಎಣ್ಣೆ ಗೋಲ್ಮಾಲ್ ಮಾಡಿರುವ ಶ್ರೀ ಕುಮಾರಿ ಮೇಘನಾ ಕೃಷಿ ಅಧಿಕಾರಿ ಹಾಗೂ ಲೆಕ್ಕಾಧಿಕಾರಿ ಸಿದ್ದರಾಮ ಇನ್ನುಳಿದ ಅಪರಿಚಿತ ವ್ಯಕ್ತಿಗಳನ್ನು ಇಟ್ಟುಕೊಂಡು ರೈತರ ಹೆಸರಿನಲ್ಲಿ ಕೊಟ್ಟೆ ದಾಖಲೆ ಸೃಷ್ಟಿ ಮಾಡಿ ತಮ್ಮ ಮನ ಬಂದಂತೆ ಸರ್ಕಾರದ ನೀತಿ ನಿಯಮವನ್ನು ಮಿತಿಮೀರಿ ತಮ್ಮ ಮನದಂತೆ ಹೆಚ್ಚಿನ ದರದಲ್ಲಿ ಮಾರಾಟಕ್ಕೆ ಮುಂದಾಗಿರುತ್ತಾರೆ. ರೈತರಿಗೆ ಬಿಲ್ಲು ಕೇಳಿದರೆ ರಶೀದು ಕೇಳಿದರೆ ನಮ್ಮತ್ರ ಯಾವುದು ಬಂದಿಲ್ಲ ಎಂದು ಉತ್ತರ ನೀಡುತ್ತಾರೆ ತಮ್ಮ ಮನ ಬಂದಂತೆ ಸರ್ಕಾರದ ನೀತಿ ನಿಯಮವನ್ನು ಉಲ್ಲಂಘನೆ ಮಾಡಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ತಂಡ ರಚನೆ ಮಾಡಬೇಕೆಂದು ತನಿಖೆಗೆ ಮುಂದಾಗಬೇಕು ತಪ್ಪಿತಸ್ಥ ಅಧಿಕಾರಿಗಳು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮಕ್ಕೆ ಕಾರ್ಲಕುಂಟೆ ಗ್ರಾಮಕ್ಕೆ ಬಂದಿದ್ದ ಸಂಧರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ
ಯಲ್ಲಾಲಿಂಗ ಕುಣಿಕೆಲ್ಲೂರು ಕದಸಂ ಸಮಿತಿ ಅಧ್ಯಕ್ಷರು ಮಸ್ಕಿ ತಾಲೂಕು ,
ಚನ್ನಬಸವ ಬಿಕೆ ಕುಂಟಿ,ಸುನಿಲ್ ಬೈಲಗುಡ್ಡ,ಶಿವರಾಜ ಕುಣಿಕೆಲ್ಲೂರು,ಬಸವರಾಜ್,ತಾಲೂಕ ಮಟ್ಟದ ಸರ್ವ ಅಧಿಕಾರಿಗಳು ಸೇರಿದಂತೆ ಇನ್ನಿತರ ಸದಸ್ಯರಿದ್ದರು.
ಕ್ಷಣ ಕ್ಷಣದ ಸುದ್ದಿ ಕೆಳಗಿನ ಜನಸ್ಪಂದನ ವಾಟ್ಸಾಪ್ ಗುಂಪಿನ ಲಿಂಕ್ ಬಳಸಿರಿ.
https://chat.whatsapp.com/EnPflH1YdrTKgr8itRlTe9
ಸುದ್ಧಿಯ ಲಿಂಕ್ ಓಪನ್ ಆಗದಿದ್ದರೆ *'9008329745'* ನಂಬರನ್ನು *'UDAYAVANI. NEWS'* ಎಂದು ಸೇವ್ ಮಾಡಿಕೊಳ್ಳಿ.