ಮಾನ್ವಿ, ಸೆ.20 : ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಸ್ಥಳಿಯ ಸಂಸ್ಥೆಗಳಿಗೆ ಚುನಾವಣೆ ನಡೆಸದೆ ಇರುವುದರಿಂದ ಸ್ಥಳಿಯ ಸಂಸ್ಥೆಗಳ ಮುಖ್ಯಸ್ಥರ ಸ್ಥಾನ ಖಾಲಿಯಿದ್ದು ನ್ಯಾಯಾಲಯದ ತೀರ್ಪು ಬಂದಲ್ಲಿ ಶೀರ್ಘವೇ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿಯೇ ಜಿ,ಪಂ,ತಾ,ಪಂಚಾಯಿತಿ ಚುನಾವಣೆ ಬರುವ ಸಂಭವವಿರುವುದರಿಂದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷವನ್ನು ತಳ ಮಟ್ಟದಿಂದ ಬಲಪಡಿಸಲು ಬೇಕು ಎಂದು ಸಂಸದ ರಾಜಾ ಅಮರೇಶ ನಾಯಕ ಕಾರ್ಯಕರ್ತರಿಗೆ ಕರೆ ನೀಡಿದರು.
ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ನಡೆದ ಪೋತ್ನಾಳ ಜಿಲ್ಲಾ ಪಂಚಾಯತ್ ಕಾರ್ಯಕರ್ತರ ಸಭೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ಭಾರತವನ್ನು ಗುರುವನ್ನಾಗಿಸಿ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೋಮ್ಮಯಿಯವರು ಕೇಂದ್ರದ ಯೋಜನೆಗಳನ್ನು ರಾಜ್ಯದ ಜನರಿಗೆ ತಲುಪಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೇಂದ್ರ ಸರಕಾರವು ನರೇಗಾ ಸೇರಿದಂತೆ,ಕುಡಿಯುವ ನೀರಿನ ಯೋಜನೆಗಳಾದ ಜಲಜೀವನ ಯೋಜನೆ ಗಳಿಗೆ ನೇರವಾಗಿ ಹೆಚ್ಚಿನ ಅನುದಾನವನ್ನು ನೀಡುತ್ತಿದೆ, ಸಮಯದ ಪರಿಮೀತಿಯಲ್ಲಿ ಇಂದು ರೈಲ್ವೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಇಂದು ದೇಶದ ಜನ ಸಂಪೂರ್ಣವಾಗಿ ಭಾರತೀಯ ಜನತಾ ಪಕ್ಷದ ಮೇಲೆ ವಿಶ್ವಾಸವಿಟ್ಟಿರುವುದರಿಂದ ಯಾವ ಪಕ್ಷ ಕೂಡ ಕೇಂದ್ರದಲ್ಲಿ ೫೫ ಸ್ಥಾನಗಳನ್ನು ಪಡೆಯದೆ ಇರುವುದರಿಂದ ಕೇಂದ್ರ ಸರಕಾರಕ್ಕೆ ಅಧಿಕೃತವಾದ ವಿರೊಧ ಪಕ್ಷವೇ ಇಲ್ಲ. ದೇಶದ ಜವಬ್ದಾರಿ ಸಂಪೂರ್ಣವಾಗಿ ಬಿಜೆಪಿ ಪಕ್ಷದ ಮೇಲಿದೆ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರ ಇದ್ದಾಗ ಮಾತ್ರ ರಾಜ್ಯದ ಅಭಿವೃದ್ದಿ ಸಾಧ್ಯ ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಬಿಜೆಪಿ ಪಕ್ಷವು ಎಂದಿಗೂ ಕಳೆದು ಕೊಳ್ಳುವುದಿಲ್ಲ, ಕೇಂದ್ರದಲ್ಲಿನ ಪಕ್ಷದ ಪ್ರಮುಖರು ರಾಜ್ಯದಲ್ಲಿನ ಕ್ಷೇತ್ರವಾರು ಸಮೀಕ್ಷೆ ನಡೆಸಿ ಜನರ ಅಭಿಪ್ರಾಯ ಸಂಗ್ರಹಿಸಿ ಗೇಲುವ ಅಭ್ಯರ್ಥಿಗೆ ಟಿಕೇಟ್ ನೀಡಲಿದ್ದಾರೆ.
ಮಾನ್ವಿ ಕ್ಷೇತ್ರ ಪ.ಪಂಗಡ ಮೀಸಲಾತಿ ಇದ್ದು ಜನರೊಂದಿಗೆ ಸ್ಪಂದಿಸುವ ಸ್ಥಳಿಯ ಅಭ್ಯರ್ಥಿಗಳು ಅವಕಾಶ ನೀಡಲಾಗುತ್ತದೆ. ಹೋರಗಿನವರಿಗೆ ಅವಕಾಶ ನೀಡಿದಲ್ಲಿ ಮೋದಲು ನಾನೇ ವಿರೋಧಿಸುತ್ತೆನೆ ಎಂದು ತಿಳಿಸಿದರು.
ಮಾಜಿಶಾಸಕ ಬಸವನಗೌಡ ಬ್ಯಾಗವಾಟ್ ಮಾತನಾಡಿ ಇಂದು ರಾಜ್ಯದಲ್ಲಿ ಹಿಂದೂಗಳಿಗೆ ದೇವಸ್ಥಾನಕ್ಕೆ ,ಮಂದಿರಗಳಿಗೆ ಹೋಗಲು ಭಯಪಡುವ ಪರಿಸ್ಥಿತಿ ಇದ್ದು ಹಿಂದೂಗಳು ಗಣೇಶ ಹಬ್ಬ ಮಾಡಬೇಕಾದರೆ,ಶಾಲೆಗೆ ಹೋಗಬೇಕಾದರೆ ಭಯ ಪಡಬೇಕಾದ ಸ್ಥಿತಿಯಲ್ಲಿ ಇದ್ದವೆ . ಪಕ್ಷದ ಕಾರ್ಯಕರ್ತರ ಹತ್ಯಗಳು ನಡೆಯುತ್ತಿವೆ,ಧರ್ಮದ ಆಚರಣೆಗಳನ್ನು ಮಾಡಲು ಆಗುತ್ತಿಲ್ಲ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಜನರು ನೆಮ್ಮದಿ ಇಂದ ಇರುವ ವಾತಾವರಣ ನಿರ್ಮಾಣವಾಗುತ್ತದೆ. ಕ್ಷೇತ್ರದಲ್ಲಿ ಕಳೆದ ೨೨ ವರ್ಷಗಳಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ ಪಕ್ಷದ ಕಾರ್ಯಕರ್ತರು ಪಕ್ಷವನ್ನು ಗೇಲಿಸುವ ಪಣ ತೋಟ್ಟಿದ್ದಾರೆ ಆದರೆ ಕ್ಷೇತ್ರಕ್ಕೆ ಬೇರೆ ತಾಲೂಕುಗಳ ಅಭ್ಯರ್ಥಿಗಳು ಬರುತ್ತಾರೆ ಎನ್ನುವ ಗೊಂದಲದಲ್ಲಿ ಇದ್ದಾರೆೆ ಪಕ್ಷದ ಅಭ್ಯರ್ಥಿಗಳು ಪಕ್ಷವು ಟಿಕೇಟ್ ನಿಡುತ್ತಾದೆಯೇ ಇಲ್ಲವೋ ಎನ್ನುವ ಗೊಂದಲ ದಿಂದ ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಸಂಸದರು ಕ್ಷೇತ್ರದ ಅಭ್ಯರ್ಥಿ ಬಗ್ಗೆ ಚುನಾವಣೆಗೂ ಮುನ್ನವೇ ಘೋಷಣೆ ಮಾಡಿದಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೇಲವು ನಿಶ್ಚತವಾಗಿರುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿ ಕ್ಷೇತ್ರದ ಶಾಸಕನಾಗಿ ಸಾಕಷ್ಟು ಅಭಿವೃದಿ ಕೈಗೊಂಡಿದ್ದು ಕಳೆದ ೨೨ವರ್ಷಗಳಿಂದ ಅಧಿಕಾರ ಇಲ್ಲದೇ ಇದರು ಪಕ್ಷದ ಕಾರ್ಯಕರ್ತರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದೇನೆ. ಈ ಬಾರಿ ಮಾನ್ವಿ ಪ.ಪಂಗಡ ಮೀಸಲಾತಿ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದೇನೆ ಪಕ್ಷ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ರಾಮನಂದ ಯಾದವ್,ಜಿಲ್ಲಾ ಕಾರ್ಯದರ್ಶಿ ಪ್ರಾಣೇಶ ದೇಶಪಾಂಡೆ,ಜಾಡಲದಿನ್ನಿ ಶರಣಪ್ಪಗೌಡ,ತಿಮ್ಮರೆಡ್ಡಿ ಭೋಗವತಿ, ಮಂಡಲಾಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಶರಣಪ್ಪಗೌಡ,ಶಂಕರಗೌಡ ಹರವಿ,ಡಾ.ಶರಣಪ್ಪ ಬಲ್ಲಟಗಿ,ಜಿಲ್ಲಾ ಪ.ಪಂಗಡ ಮೋರ್ಚ ಅಧ್ಯಕ್ಷ ಅಯ್ಯಪ್ಪನಾಯಕ ಮ್ಯಾಕಲ್, ತಾ,ಕಾರ್ಯದರ್ಶಿ ಗುರುಸಿದ್ದಪ್ಪ ಕಣ್ಣೂರು,ನಯೋಪ್ರ ಅಧ್ಯಕ್ಷಶರಣಪ್ಪಗೌಡ ನಕ್ಕುಂದಿ,ಕೊಟ್ರೇಶಪ್ಪ ಕೋರಿ,ಮಲ್ಲಿಕಾರ್ಜುನ,ತಾ. ಯುವ ಘಟಕದ ಅಧ್ಯಕ್ಷ ನವೀನ್ ನಾಡಗೌಡ, ಉಮೇಶಗೌಡ, ,ಸೇರಿದಂತೆ ಪಕ್ಷದ ಮುಖಂಡರು ಇದ್ದರು ವಿವಿಧ ಪಕ್ಷಗಳ ಮುಖಂಡರು ಕಾರ್ಯಕರ್ತರು ಸಂಸದರ ಸಮಕ್ಷಮದಲ್ಲಿ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಕ್ಷಣ ಕ್ಷಣದ ಸುದ್ದಿ ಕೆಳಗಿನ ಜನಸ್ಪಂದನ ವಾಟ್ಸಾಪ್ ಗುಂಪಿನ ಲಿಂಕ್ ಬಳಸಿರಿ.
https://chat.whatsapp.com/EnPflH1YdrTKgr8itRlTe9
ಸುದ್ಧಿಯ ಲಿಂಕ್ ಓಪನ್ ಆಗದಿದ್ದರೆ *'9008329745'* ನಂಬರನ್ನು *'UDAYAVANI. NEWS'* ಎಂದು ಸೇವ್ ಮಾಡಿಕೊಳ್ಳಿ.