ಆಶ್ರಯ ಮನೆಯ ಫಲಾನುಭವಿಯನ್ನಾಗಿ ಮಾಡಲು ಮನವಿ,

Udayavani News
0
UDAYAVANI.NEWS
ಕಾರಟಗಿ, ಸೆ.20 : ತಾಲೂಕಿನ ಯರಡೋಣ ಗ್ರಾಮ ಪಂಚಾಯತ್ ವ್ಯಾಪ್ತಿಯ ವಸತಿ ರಹಿತ, ಹಾಗೂ ಖಾಲಿ ಜಾಗದ ಸಂಬಂಧ ಗ್ರಾಮದ ಮಹಿಳೆಯರು ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ವತಿಯಿಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ ಮೋಹನ್ ಇವರಿಗೆ ಮನವಿ ಸಲ್ಲಿಸಿದರು,

ಯರಡೋಣ ಗ್ರಾಮದಲ್ಲಿ ಬಡವರು ಹಾಗೂ ನಿರ್ಗತಿಕರು ವಸತಿ ರಹಿತದವರು ಹಾಗೂ ಜಾವವಿಲ್ಲದವರು ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದಾರೆ,
ಅಂತವರಿಗೆ ಸರ್ಕಾರದಿಂದ ಜಾಗವಿಲ್ಲದವರಿಗೆ ಖಾಲಿ ಜಾಗದ ವ್ಯವಸ್ಥೆ ಹಾಗೂ ಆಶ್ರಯ ಮನೆ ಇಲ್ಲದವರಿಗೆ ಡಾ. ಬಿ ಆರ್ ಅಂಬೇಡ್ಕರ್ ವಸತಿ ಯೋಜನೆ, ಬಸವ ವಸತಿ ಯೋಜನೆ, ಇಂದಿರಾ ಅವಾಜ್ ಆಶ್ರಯ ಯೋಜನೆ ಸೇರಿದಂತೆ ಇನ್ನಿತರ ಯೋಜನೆಯಲ್ಲಿ ಪಲಾನುಭವಿಯನ್ನಾಗಿ ಆಯ್ಕೆ ಮಾಡಲು ಮನವಿ ಪತ್ರ ಸಲ್ಲಿಸಲಾಯಿತು,

ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಕಾರ್ಯನಿರ್ವಾಹಕಧಿಕಾರಿಗಳು
ಅಶ್ರಯ ಯೋಜನೆಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಮಾಹಿತಿ ಪಡೆದು ಆಶ್ರಯ ಮನೆ ಕಲ್ಪಿಸಿ ಕೊಡಲು ತಿಳಿಸಲಾಗುವುದೆಂದು ಈ ಸಂದರ್ಭದಲ್ಲಿ ತಿಳಿಸಿದರು,

ಈ ಸಂದರ್ಭದಲ್ಲಿ ಗೌರಮ್ಮ ಎಚ್. ಹನುಮಂತಮ್ಮ ಭೋವಿ, ಹುಲಿಗೆಮ್ಮ,ಬೇಬಿ ಜಾನ್, ಗೌರಮ್ಮ ಗುಂಡಿ, ದುರುಗಮ್ಮ, ಮುರುಡಮ್ಮ,ಖಜಾಮ್ಮ, ಹುಸೇನ್ ಬಿ, ಲಕ್ಷ್ಮೀ ಕುರುಬರ, ಬಸಮ್ಮ, ಮರಿಯಮ್ಮ, ಮಹಿಬೂಬಿ ಸೇರಿದಂತೆ ಇನ್ನಿತರರು ಇದ್ದರು.
ಕ್ಷಣ ಕ್ಷಣದ ಸುದ್ದಿ ಕೆಳಗಿನ ಜನಸ್ಪಂದನ ವಾಟ್ಸಾಪ್ ಗುಂಪಿನ ಲಿಂಕ್ ಬಳಸಿರಿ. 
https://chat.whatsapp.com/EnPflH1YdrTKgr8itRlTe9

ಸುದ್ಧಿಯ ಲಿಂಕ್ ಓಪನ್ ಆಗದಿದ್ದರೆ *'9008329745'* ನಂಬರನ್ನು *'UDAYAVANI. NEWS'* ಎಂದು ಸೇವ್ ಮಾಡಿಕೊಳ್ಳಿ.

Post a Comment

0Comments

Post a Comment (0)