ಮಸ್ಕಿ: ತಾಲೂಕಿನ ಹಾಲಾಪೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಜಿನ್ನಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವು ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಹಳ್ಳದ ನೀರು ಸಂಪೂರ್ಣವಾಗಿ ಜಲಾವೃತ ಗೊಂಡಿರುವುದನ್ನು ತಿಳಿದು ಮಾಜಿ ಶಾಸಕರು ಮತ್ತು ಅವರ ಬೆಂಬಲಿಗರು ಸ್ಥಳಕ್ಕೆ ಭೇಟಿ ನೀಡಿದ್ದರು. ಮಾಜಿ ಶಾಸಕರು ಸಮಸ್ಯೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶಾಲಾ ಆವರಣವು ಜಲಾವೃತವಾಗಿರುವುದನ್ನು ಗಮನಿಸಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ದೂರವಾಣಿ ಕರೆ ಮಾಡಿ ತಾಲೂಕ ಪಂಚಾಯಿತಿ ಇಓ ಹಾಗೂ ಹಾಲಾಪೂರ ಪಿಡಿಒ ಗೆ ಕೂಡಲೇ ದುರಸ್ತಿಗೊಳಿಸಲು ಕ್ಲಾಸ್ ತೆಗೆದುಕೊಂಡು ಮುಂದೆ ಮರುಕಳಿಸಬಾರದು ಎಂದು ಖಡಕ್ ಎಚ್ಚರಿಕೆಯನ್ನು ಫೋನ್ ಕರೆಯ ಮೂಲಕ ತಿಳಿಸಿದರು.ಈ ಸಂದರ್ಭದಲ್ಲಿ ಊರಿನ ಹಿರಿಯರು ಮತ್ತು ಗ್ರಾಮಸ್ಥರು ಅದೇ ಶಾಲೆಯ ಅವರಣದಲ್ಲಿದ್ದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಂಡಿದ್ದನ್ನು ಮಾಜಿ ಶಾಸಕರ ಗಮನಕ್ಕೆ ತಂದರು ಸಂಬಂಧಪಟ್ಟ ಅಧಿಕಾರಿಗಳಿಗೆ ತತ್ ಕ್ಷಣವೇ ಕರೆ ಮಾಡಿ ದುರಸ್ತಿಯನ್ನು ಸರಿಪಡಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶಿವಪುತ್ರಪ್ಪ ಅರಳಹಳ್ಳಿ,ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ ಮಲ್ಲಿಕಾರ್ಜುನ ಯಾದವ್, ಗವಿಸಿದ್ದಪ್ಪ ಸಂತೆಕಲ್ಲೂರು, ಬಿಜೆಪಿ ಯುವ ಮುಖಂಡರಾದ ಚೇತನ್ ಪಾಟೀಲ್, ಸಿದ್ಧಾರ್ಥ್ ಪಾಟೀಲ ಹಾಲಾಪುರ್,ಬಸವರಾಜ, ಶೇಖರಪ್ಪ,ಹನುಮನಗೌಡ, ಸಿದ್ದಲಿಂಗಪ್ಪ, ವಿಜಯಕುಮಾರ, ಪಂಚಮಪ್ಪ,ಬಸವಲಿಂಗ, ಹಾಗೂ ಶಾಲಾ ಮುಖ್ಯಗುರು ಶಿವಶಂಕರಗೌಡ ಹಾಗೂ ಊರಿನ ಹಿರಿಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು