ಮಸ್ಕಿ ರೈತ ಸಂಪರ್ಕ ಕೇಂದ್ರ ಕಛೇರಿ ಸರಕಾರಿ ನೌಕರರ ಕಛೇರಿಯೋ, ಅನ್ಯ ವ್ಯಕ್ತಿಗಳ ಕಛೇರಿಯೋ : ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ರೈತರು

Udayavani News
0

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ,ಮಸ್ಕಿ ಸೆ10 : ಪಟ್ಟಣದ ಲಿಂಗಸ್ಗೂರು ರಸ್ತೆಯ  ಹೊರ ವಲಯದಲ್ಲಿರುವ ರೈತ ಸಂಪರ್ಕ ಕೇಂದ್ರ ಹೇಳಲು ಮಾತ್ರ ರೈತ ಸಂಪರ್ಕ ಕೇಂದ್ರ ಇದರಲ್ಲಿ ಅಧಿಕಾರಿಗಳೂ ಹಾಗೂ ಸಿಬ್ಬಂದಿಯೇ ಇರುವುದಿಲ್ಲ. ನೌಕರರು ಅಲ್ಲದ ವ್ಯಕ್ತಿಗಳು ಸೌಕರ್ಯಗಳನ್ನು ಒದಗಿಸುವರು ಎಂಬುದು ಮಸ್ಕಿ ಹೋಬಳಿಯ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಗೊಳಪಡುವ ರೈತರ ಸರ್ವೇ ಸಾಮಾನ್ಯ ಮನೆ ಮಾತಾಗಿದೆ ಎಂದು ರೈತರಾದ ಹುಲ್ಲೇಶ ಹೊಕ್ರಾಣಿ ಮತ್ತು  ಹನುಮಂತ ಕೆಂಗೇರಿ ತಲೇಖಾನ್ ಕಛೇರಿಯ ಚಲನ ವಲನ ಗಳನ್ನೂ ಇಂಚು ಇಂಚಾಗಿ ಗಣಿನಾಡು ಪತ್ರಿಕೆಗೆ ಪತ್ರಿಕಾ ಹೇಳಿಕೆ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

 ಪ್ರತಿ ವರುಷದ ಹಿಂಗಾರು ಮತ್ತು ಮುಂಗಾರು ಬೆಳೆಗೆ ಸಂಭಂದಿಸಿದಂತೆ ಬಿಜೋಪಕರಣ ಹಾಗೂ ಔಷಧಿಯನ್ನು ಸರಿಯಾಗಿ ಹಂಚಿಕೆ ಮಾಡಲಾಗುತ್ತಿಲ್ಲ.

ಹೈಟೆಕ್ ಸಾಮಾನುಗಳು, ತಾಡಪತ್ರಿ ಸೇರಿದಂತೆ ಇನ್ನಿತರೆ ರೈತರಿಗೆ ಸಲ್ಲುವ ಕೃಷಿ ಸಲಕರಣೆಯ ಬಗ್ಗೆ ಯಾವುದೇ ರೀತಿಯ ಮಾಹಿತಿ ಹಾಗೂ ಸೂಚನೆ ನೀಡದೇ ಅಧಿಕಾರಿಗಳು ತಾವಾಗಿ ನಿರ್ಣಯಿಸಿದ ದಿನವೇ ಹಂಚಿಕೆ ಮಾಡುವ ರೂಢಿ ಈ ರೈತ ಸಂಪರ್ಕ ಕೇಂದ್ರದ ವಿಶೇಷ.ಜನ ಸಾಮಾನ್ಯ ರೈತರಿಗೆ ಸೌಕರ್ಯಗಳು ಮುಟ್ಟುತ್ತವೋ ಇಲ್ಲಾ ಗೊತ್ತಿಲ್ಲಾ ಆದರೆ ಮನೆಯಲ್ಲೇ ರಾಜಕೀಯ ಮಾಡುವ ಹಾಗೂ ಪ್ರಭಾವಿ ವ್ಯಕ್ತಿಗಳ ಮನೆಗೆ ಸೌಕರ್ಯಗಳು ಮಾತ್ರ ಸೇರುವುದು ನಿಂತಿಲ್ಲ ಇದು ಮಸ್ಕಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಪ್ರಾಮಾಣಿಕ ಸೇವೆಯಾಗಿರುತ್ತದೆ.ರೈತರು ಮಾತ್ರ ರೈತ ಸಂಪರ್ಕ ಕೇಂದ್ರ ಮಸ್ಕಿ ಕಛೇರಿಗೆ ಅಲೆದು ಅಲೆದು ಚಪ್ಪಲಿಯೇ ಇಲ್ಲವೇ ವ್ಯಕ್ತಿ ಬೇಸರಗೊಳ್ಳುತ್ತಾನೆ ವಿನಃ  ಅಧಿಕಾರಿಗಳು   ಮಾತ್ರ ನಿಜವಾದ ರೈತರಿಗೆ ಸೌಲಭ್ಯ ತಲುಪಿಸುವ ಕೆಲಸಮಾಡುವುದಿಲ್ಲ.  ನೌಕರರು ಅಲ್ಲದವರು ಕಚೇರಿಯಲ್ಲಿ  ಇರುತ್ತಾರೆ ವಿನಃ ನೌಕರರು ಹಾಗೂ ಅಧಿಕಾರಿಗಳು ಮಾತ್ರ ಕಛೇರಿಯಲ್ಲಿ ಇರುವುದಿಲ್ಲ.  ಒಂದು ವೇಳೆ ರೈತರು ಸಂಭದಿಸಿದ ಅಧಿಕಾರಿ ಎಲ್ಲಿ ಎಂದು ಕೇಳಿದರೆ ನಮ್ಮ ಸಾಬ್ ಬ್ಯಾಂಕ್ ಗೆ ಹೋಗಿದ್ದಾರೆ,ನಮ್ಮ ಮೇಡಂ ಸೈಟಿಗೆ ಹೋಗಿದ್ದಾರೆ ಎಂದು ರೈತರ ದಾರಿ ತಪ್ಪಿಸುವ ಉತ್ತರಗಳೇ ಬರುತ್ತವೆ.
ಕಛೇರಿಯಲ್ಲಿ ಸಿಬ್ಬಂದಿ ಅಲ್ಲದವರು ಇರುತ್ತಾರೆ ಆದರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇರುವುದೇ ಇಲ್ಲ ಇಲ್ಲಿಗೆ 25 ದಿನಗಳು ಆಯಿತು ಕಛೇರಿಗೆ ಬರಲು ಯಾವೊಬ್ಬ ಅಧಿಕಾರಿಯೂ ಕಛೇರಿಯಲ್ಲಿ ಇರುವುದೇ ಇಲ್ಲ ಎನ್ನುವುದೇ ನೋವಿನ ಸಂಗತಿಯಾಗಿದೆ.  ಹಾಗೇಯೇ ಬೆಳೆಗಳಿಗೆ ಸಿಂಪಡಣೆ ಮಾಡುವ ರಾಕೆಟ್ ಎಂಬ ಔಷಧಿ ಫೆಬ್ರವರಿ 2022 ಕ್ಕೆ  ಅವಧಿ ಮುಗಿದರು ಅದನ್ನು ರೈತರಿಗೆ ಈಗಲೂ ನೀಡುತ್ತಿರುವುದು ನೋವಿನ ಸಂಗತಿ. ಸರಕಾರ ನಿಗದಪಡಿಸಿರುವ ದರದ ಬಿಲ್ ಅನ್ನು ಪಡೆಯಬೇಕಲ್ಲವೇ ಸರಕಾರಿ ನಿಗದಿತ ಹಣಕ್ಕಿಂತಲು ಎರಡುಪಟ್ಟು ಹಣವನ್ನು ರೈತರಿಂದ ಪಡೆಯಲಾಗುತ್ತಿದೆ. ಬೀಜಗಳು, ಔಷಧಿ, ತಾಡಪತ್ರಿ, ಹೈಟೆಕ್ ಸಾಮಾನುಗಳು ಹಾಗೂ ಇನ್ನಿತರೆ ಬೆಳೆಗಳಿಗೆ ಸಂಭಂದಿಸಿದ ಕೃಷಿ ಸಲಕರಣೆಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದುದ್ದು ದುರಾದೃಷ್ಟ ಸಂಗತಿ.  ಮಸ್ಕಿ ರೈತ ಸಂಪರ್ಕ ಕೇಂದ್ರ ಸರಕಾರಿ ಅಧಿಕಾರಿಗಳ ಕಛೇರಿಯೋ ಅಥವಾ ನೌಕರರೇ ಅಲ್ಲದ ಖಾಸಗಿ ವ್ಯಕ್ತಿಗಳ ಕಛೇರಿಯೋ ಒಂದು ತಿಳಿಯದಾಗಿದೆ. ಸಂಭಂದಪಟ್ಟ ಮೇಲಾಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದರು ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಮುಂದಾಗಿಲ್ಲ.ಅದರಲ್ಲೂ ಪ್ರಮುಖವಾಗಿ ಲಿಂಗಸ್ಗೂರಿನ ಎಡಿ, ರಾಯಚೂರಿನ ಜೆಡಿ ಅಧಿಕಾರಿಗಳಿಗೆ ಫೋನ್  ಕರೆಯ ಮೂಲಕ ಕಛೇರಿಯ ಅವ್ಯವಸ್ಥೆ ಬಗ್ಗೆ  ತಿಳಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೃಷಿ ಇಲಾಖೆ ಸಂಪೂರ್ಣ ವಿಫಲವಾಗಿದೆ   ಎಂದು ರೈತರುಗಳಾದ ಹುಲ್ಲೇಶ ಹೊಕ್ರಾಣಿ ಮತ್ತು  ಹನುಮಂತ ಕೆಂಗೇರಿ ತಲೇಖಾನ್ ಕಛೇರಿಯ ಚಲನ ವಲನ ಗಳನ್ನೂ ಇಂಚು ಇಂಚಾಗಿ ಪತ್ರಿಕಾ ಹೇಳಿಕೆ ನೀಡುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 


Post a Comment

0Comments

Post a Comment (0)