ಕನ್ನಡ ಹಿರಿಮೆ ಮಾಜಿ ಉಪ ರಾಷ್ಟ್ರಪತಿ ಬಿ ಡಿ ಜತ್ತಿ :: ಶರಣಪ್ಪ ಖಾಶಂಪೂರ ಸ್ಮರಣ

Udayavani News
0
ಬೀದರ ಸೆ 10 :: ದಿಲ್ಲಿಯವರೆಗೆ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಮಾಜಿ ಹಂಗಾಮಿ ರಾಷ್ಟ್ರಪತಿ ಬಿ.ಡಿ.ಜತ್ತಿ ಅವರು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮ ಪಂಚಾಯತಿ ಯಿಂದ ತಮ್ಮ ರಾಜಕೀಯ ಜೀವನ ಆರಂಭಿಸಿ, ದೇಶದ ಹಂಗಾಮಿ ರಾಷ್ಟ್ರಪತಿ ಹುದ್ದೆಯನ್ನೇರಿದ ಕನ್ನಡದ ಏಕೈಕ ರಾಜಕಾರಣಿ, ಕನ್ನಡಮ್ಮನ ಹೆಮ್ಮೆಯ ಪುತ್ರ ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಅವರು. ಇಂದು ಅವರ ಜನ್ಮದಿನ.

ಸರಳ, ಸಜ್ಜನ ಹಾಗೂ ರಾಜಕೀಯ ಮುತ್ಸಧಿಯಾದ ಬಿ.ಡಿ.ಜತ್ತಿ ಅವರು ಬಸವ ತತ್ವದ ಅನುಯಾಯಿಗಳಾಗಿದ್ದರು. ಇಂದಿಗೂ ಬಸವ ಸಮಿತಿ ಇವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಾ, ಧರ್ಮ,ಜಾತಿ, ಮತ ಬೇದವಿಲ್ಲದೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ತನ್ನ ಕಾಯಕವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ಬಿ.ಡಿ.ಜತ್ತಿ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಹಾಕಿಕಟ್ಟ ದಾರಿಯಲ್ಲಿ ಸಾಗುವ ಮೂಲಕ ಅವರನ್ನು ಮನಸಾರೆ ಸ್ಮರಿಸಿ, ಅವರ ಜನ್ಮ ದಿನದಂದು ಹಾರ್ದಿಕ ಶುಭಾಶಯಗಳನ್ನು ಕನ್ನಡದ ಹಿರಿಮೆ, ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ. :ಶರಣಪ್ಪಾ ಖಾಶಂಪೂರ ಸ್ಮರಣೆ ಮಾಡಿದರು.

Post a Comment

0Comments

Post a Comment (0)