ಆಸ್ತಿ ಪಾಸ್ತಿ ಇದ್ದರೇನು, ಸಿರಿವಂತಿಕೆ ಇದ್ದರೇನು, ನಗ ನಾಣ್ಯ ಇದ್ದರೇನು. ಅಧಿಕಾರ ಇದ್ದರೇನು, ಮಾನವೀಯತೆ ಇಲ್ಲದ ಮೇಲೆ..
ಪವಿತ್ರ ಗಂಗೆಯಲಿ ಮಿಂದರೇನು, ಗುಡಿ ಗುಂಡಾರ ಸುತ್ತಿದರೇನು, ದೇವರ ದರ್ಶನ ಪಡೆದರೇನು, ಮಂತ್ರ ತಂತ್ರ ಜಪಿಸಿದರೆ ಏನು, ಮಾನವೀಯತೆ ಇಲ್ಲದ ಮೇಲೆ.
ಎಷ್ಟು ಓದಿದರೇನು, ಪದವಿ ಗಳಿಸಿದರೇನು, ದೊಡ್ಡ ನೌಕರಿ ಪಡೆದರೆ, ಮಾನವೀಯತೆ ಇಲ್ಲದ ಮೇಲೆ.
ಏನಿದ್ದರೇನು, ಎಷ್ಟಿದ್ದರೇನು, ಇಲ್ಲದಿದ್ದರೇನು, ಬದುಕಿದ್ದರೇನು, ಮಾನವೀಯತೆ ಇಲ್ಲದ ಮೇಲೆ.
ಸುಸಂಸ್ಕೃತರಾಗಬೇಕು, ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು, ಹೃದಯವಂತಿಕೆ ಮೆರೆಯಬೇಕು, ಕಷ್ಟಗಳಿಗೆ ಸ್ಪಂದಿಸಬೇಕು, ಮಾನವನಾಗಿ ಹುಟ್ಟಿದ ಮೇಲೆ.( ಶೈಲಾ).
ಕಠಿಣ ಶ್ರಮದ ಸಿಹಿಫಲವೇ ಸಾಧನೆ, ಸತತ ಪ್ರಯತ್ನದ ಸನ್ಮಾರ್ಗವೇ ಸಾಧನೆ, ಗಮ್ಯದೆಡೆಗೆ ನಿರಂತರ ಗಮನವೇ ಸಾಧನೆ, ಛಲದ ಉತ್ತುಂಗ ಶಿಖರವೇ ಸಾಧನೆ.
ಎಲ್ಲರ ಮುಂದೆ ಸಣ್ಣವನಾಗಿ ಬದುಕಲು ಕಲಿ, ದೊಡ್ಡಸ್ತಿಕೆಯ ಪ್ರದರ್ಶನ ಬೇಡ, ಪ್ರಮಾಣಿಕತೆಯಿಂದ ದೂರ ಸರಿಯಬೇಡ, ಇಲ್ಲದನ್ನು ಇದೆ ಎಂದು ತೋರಿಸಲು ಹೋಗಬೇಡ.
ಸತ್ಯದ ದಾರಿಯಲ್ಲಿ ಹೋಗು, ನೀನು ನಡೆಯುವಾಗ ಎಡವಿ ಪಾತಾಳಕ್ಕೆ ಬಿದ್ದರೂ ನಿನ್ನನ್ನು ಮೇಲೆತ್ತಲು ನಾನು ಬಂದೇ ಬರುತ್ತೇನೆ. ಶ್ರೀಕೃಷ್ಣ ಪರಮಾತ್ಮ!!
🚩ಭಾರತಾಮೃತಸರ್ವಸ್ವಂ ವಿಷ್ಣೋರ್ವಕ್ತ್ರಾದ್ವಿನಿಃಸೃತಮ್! ಗೀತಾಗಂಗೋದಕಂ ಪೀತ್ವಾ ಪುನರ್ಜನ್ಮ ನ ವಿದ್ಯತೇ!! 🚩
ಓಂ ಜಯ ಭಗವದ್ಗೀತೆ
ಓಂ ಕೇಶವಾಯ ನಮಃ
🙏 ಶುಭೋದಯ🙏