45 ನೇ ವಾರ್ಷಿಕ ಮಹಾ ಸಭೆಯು ಯಶಸ್ವಿಯಾಗಿ ಜರುಗಿತು.

Udayavani News
0
ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ,
ಮಸ್ಕಿ ಸೆ.13 : ತಾಲೂಕಿನ ಮೆದಿಕಿನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ.ಮೆದಿಕಿನಾಳ ಕಛೇರಿಯಲ್ಲಿ 45 ನೇ ವಾರ್ಷಿಕ ಮಹಾ ಸಭೆಯು ಯಶಸ್ವಿಯಾಗಿ ನಡೆಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧು ಲಿಂಗರಾಜ್ ನಾಡಗೌಡ ನೇತೃತ್ವವಹಿಸಿದ್ದರು.
ಕಾರ್ಯಕ್ರಮದ ಮೊದಲಿಗೆ ವೇದಿಕೆಯ ಗಣ್ಯರೊಂದಿಗೆ ಉದ್ಘಾಟಕರಾಗಿ ಆಗಮಿಸಿದ್ದಂತಹ ವ್ಯವಸ್ಥಾಪಕಿ ಕುಮಾರಿ ಸಂಗೀತಾ ದೀಪಬೇಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಮರಕಲದಿನ್ನಿ ಸಂಘದ ಪ್ರಾಸ್ತಾವಿಕ ವರದಿ ಮಂಡನೆ ಮಾಡಿದರು.

ಸಹಕಾರಿ ಸಂಘದ ಬ್ಯಾಂಕ್ ವ್ಯವಹಾರ ಮಾಡುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿ ನಂತರ ಪ್ರತಿ ತಿಂಗಳಿಗೊಮ್ಮೆ ಸಾಲ ಪಾವತಿ ಮಾಡುವವರು, ಆರು ತಿಂಗಳಿಗೆ ಸಾಲವನ್ನು ಮರು ಪಾವತಿ ಮಾಡುವವರು ಯಾವುದೇ ಕಂತುಗಳನ್ನು ತಪ್ಪಿಸದೆ ನಿಮ್ಮ ಹಣವನ್ನು ನೀವೇ ಕಟ್ಟಿ ಹೆಚ್ಚಿನ ಸಾಲವನ್ನು ಪಡೆಯುವ ಮೂಲಕ ಸಂಘದ ಸೌಲಭ್ಯವನ್ನು ಬಳಸಿಕೊಳ್ಳಿ ಎಂದು ಚರ್ಚೆ ಮಾಡಲಾಯಿತು.

ನಂತರ ಪ್ರಾಮಾಣಿಕವಾಗಿ ಸಾಲವನ್ನು ಪಾವತಿ ಮಾಡಿದ ಸರ್ವರನ್ನು ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಧು ಲಿಂಗರಾಜ್ ನಾಡಗೌಡ ಇವರು ಮುಂಬರುವ ದಿನಗಳಲ್ಲಿ 2 ಕೋಟಿ ಸಾಲವನ್ನು ಮಹಿಳಾ ಸಂಘದವರಿಗೆ,2 ಕೋಟಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿನ ಸಾಲವನ್ನು ಸಣ್ಣ ಹಿಡುವಳಿದಾರರಿಗೆ,3 ಕೋಟಿ ಮದ್ಯಮ ಅವಧಿ ಸಾಲ,2 ಕೋಟಿ ಪಿ.ಡಿ.ಪಿ ಸಾಲ,1 ಕೋಟಿ ನಗದು ಪತ್ತು ಸಾಲ,ರೈತರಿಗೆ ಅನುಕೂಲವಾಗುವಂತಹ ಗೊಬ್ಬರ,ಕ್ರಿಮಿನಾಶಕ ಖರೀದಿ ಕೇಂದ್ರ ಸೇರಿದಂತೆ ಇನ್ನಿತರೆ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಈ ಸಭೆಯಲ್ಲಿ ಮುಖ್ಯ ಅಧಿತಿಯಾಗಿ ಆಗಮಿಸಿದ್ದ ಗಂಗಾಧರ ಸಹಕಾರ ಅಭಿವೃದ್ದಿ ಅಧಿಕಾರಿ,ಸಂಘದ ಪದಾಧಿಕಾರಿಗಳು,ಅಧಿಕಾರಿಗಳು,ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳು,ಗ್ರಾಮದ ಗಣ್ಯ ವ್ಯಕ್ತಿಗಳು ಮತ್ತು ರೈತ ಬಾಂಧವರು ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Post a Comment

0Comments

Post a Comment (0)