ಡಿ ದೇವರಾಜ ಅರಸು ಕೊಡುಗೆ ಅಪಾರ: ಗೋಗಿ ಅಭಿಮತ

Udayavani News
0

ಹೆಳವ ಸಮಾಜದಿಂದ ಡಿ:ದೇವರಾಜ ಅರಸು ೧೦೭ ನೇ ಜಯಂತಿ ಆಚರಣೆ 

ಶಹಾಪುರ ಸುದ್ದಿ :ಅಖಿಲ ಕರ್ನಾಟಕ ಹೆಳವ ಸಮಾಜದ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಶಹಾಪುರದ ನಗರದ ವೆಂಕಟೇಶ್ವರ ಬಡಾವಣೆಯಲ್ಲಿ ಹಿಂದುಳಿದ ವರ್ಗಗಳ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ :ದೇವರಾಜ ಅರಸು ರವರ ೧೦೭ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ವಕೀಲರು ಹಾಗೂ ರಾಜ್ಯ ಆಂತರಿಕ ಲೆಕ್ಕ ಪರಿಶೋಧಕರಾದ ಹೆಚ್ ಎನ್ ಗೋಗಿ ಮಾತನಾಡಿ
ಶೋಷಿತರು ಹಾಗೂ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯದ ಮೂಲಕ ಡಿ. ದೇವರಾಜ ಅರಸುರವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. 
ಭೂ ಸುಧಾರಣೆ ಕಾಯ್ದೆ, ಉಳುವವನೇ ಭೂ ಒಡೆಯ, ಜಾತಿ ಪದ್ಧತಿ ನಿರ್ಮೂಲನೆ, ಗಂಗಾ ಕಲ್ಯಾಣ ಯೋಜನೆ, ಸೇರಿದಂತೆ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸಿ ಕೊಟ್ಟಿದ್ದಾರೆ. ಅದರಂತೆ ಹಿಂದುಳಿದ ಜನಾಂಗಗಳಿಗೆ ಮೀಸಲಾತಿ ಸೌಲಭ್ಯ, ವಸತಿ ಶಾಲೆಗಳ ಸೌಲಭ್ಯ ಸೇರಿದಂತೆ ಹತ್ತು ಹಲವು ಯೋಜನೆಗಳಿಗೆ ಮೂಲಕ ಜನಮಾನಸದಲ್ಲಿ ಇಂದಿಗೂ ಧೀಮಂತ ನಾಯಕರಾಗಿ ಉಳಿದಿದ್ದಾರೆ . 
ಎಂದರು.

ಗೌರವಾಧ್ಯಕ್ಷರಾದ ಶಿವಶರಣಪ್ಪ ಕನ್ನೊಳ್ಳಿ, ಜಿಲ್ಲಾಧ್ಯಕ್ಷರಾದ ಡಾ :ಹನಣಮಂತರಾಯ ಹಳಿಸಗರ, ಉಪಾಧ್ಯಕ್ಷರಾದ ಯಲ್ಲಪ್ಪ ಕೋರಿ,ಹಣಮಂತ್ರಾಯ ಖಾನಾಪುರ, ಪರಶುರಾಮ ದೇವಿಕೇರಿ,ನೆಹರೂ ಹಳಿಸಗರ, ಭೀಮಣ್ಣ ಅಂಚಿನಾಳ, ಲಾಲಪ್ಪ ಕಟ್ಟಿಮನಿ, ಭೀಮಯ್ಯ ಯಾದಗಿರಿ, ಶಿವು ಹಳಿಸಗರ, ಮಲ್ಲು, ಶಿವರಾಜ ದೋರನಹಳ್ಳಿ, ಸೇರಿದಂತೆ ಸಮಾಜದ ಇತರರು ಇದ್ದರು.

Post a Comment

0Comments

Post a Comment (0)