ದೇವದುರ್ಗ:- ಪಟ್ಟಣದ ಜಹೀರದ್ದೀನ್ ಪಾಷ ದರ್ಗಾ ಸರ್ಕಲನಿಂದ ಮೀನಿ ವಿಧಾನಸೌದದ ಕಡೆ ತೆರಳುವ ಮುಖ್ಯ ರಸ್ತೆಯ ಪಕ್ಕದಲ್ಲಿ ಭಗೀರಥ ಮಹರ್ಷಿ ವೃತ್ತವನ್ನು ಮಾನಸಗಲ್ ಶ್ರೀ ಲಕ್ಷ್ಮಿರಂಗನಾಥ ದೇವಸ್ಥಾನದ ಪ್ರಧಾನ ಆರ್ಚಕರಾದ ಗಂಗಪ್ಪಯ್ಯ ಪೂಜಾರಿ ಹಾಗೂ ಬಸವರಾಜ ರಾಜಗುರು ಮಲದಕಲ್ ಇವರುಗಳಿಂದ ಭಗೀರಥ ಮಹರ್ಷಿ ನಾಮ ಫಲಕಕ್ಕೆ ಪೂಜೆ ಸಲ್ಲಿಸಿ ಸೋಮವಾರದಂದು ಭಗೀರಥ ಮಹರ್ಷಿ ವೃತ್ತವನ್ನು ಉದ್ಘಾಟಿಸಿದರು,
ಈ ಸಂದರ್ಭದಲ್ಲಿ :- ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ರಾಮಣ್ಣ ಜಾಲಹಳ್ಳಿ , ಪುರಸಭೆಯ ಮಾಜಿ ಅಧ್ಯಕ್ಷ ನಾಗಪ್ಪ ಉಪ್ಪಾರ್ , ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮಣ್ಣ ಬುದ್ದಿನ್ನಿ, ಸಮಾಜದ ಮುಖಂಡರಾದ ಮುದುಕಪ್ಪ, ವೆಂಕಟೇಶ್ ಪೂಜಾರಿ, ಹನುಮಂತ ದೊಡ್ಡಿ ಹನುಮಂತ ನಗರಗುಂಡ, ಮತ್ತು ಮಹಿಳೆಯರು ಇದ್ದರು.