ಪಿಎಸ್ಐ ನೇಮಕಾತಿಯಲ್ಲಿ ಸಾಕಷ್ಟು ಹಗರಣಗಳು ಬಯಲು

Udayavani News
0
ಪಿ ಎಸ್ ಐ ನೇಮಕಾತಿ ಹಗರಣಗಳು ಬಯಲು ಚಾಮರಾಜನಗರ: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಿಜೆಪಿಯ ಮತ್ತೊಂದು ವಿಕೆಟ್ ಪತನವಾಗಲಿದೆ. ನನ್ನ ಬಾಯಲ್ಲಿ ಅವರ ಹೆಸರು ಹೇಳಲ್ಲ, ಕಾಲವೇ ತಿಳಿಸಲಿದೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಐವರು ರಾಜೀನಾಮೆ ಕೊಟ್ಟಿದ್ದರು. ಈಗ ಮೂವರು ಕೊಟ್ಟಿದ್ದು, ಭ್ರಷ್ಟಾಚಾರದಿಂದ ಮತ್ತೊಬ್ಬರು ರಾಜೀನಾಮೆ ಕೊಡಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಭವಿಷ್ಯ ನುಡಿದಿದ್ದಾರೆ.ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿಯು ಒಂದು ಹಗರಣವಾಗಿದ್ದು, ಘಟನೆ ಗಮನಿಸುತ್ತಿದ್ದರೇ ಸರ್ಕಾರವೇ ಪಾಲ್ಗೊಂಡತಿದೆ. ರಾಜ್ಯ ಸರ್ಕಾರ ವ್ಯಾಪ್ತಿಯಲ್ಲಿರುವ ಸಿಐಡಿ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿದರೇ ನ್ಯಾಯ ಸಿಗುವ ನಿರೀಕ್ಷೆ ಇದೆ. ಸಿಐಡಿ ತನಿಖೆಯಲ್ಲಿ ನಂಬಿಕೆ ಇಲ್ಲ, ತಕ್ಷಣವೇ ಸಿಐಡಿಯಿಂದ ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಬೇಕು ಎಂದು ಆಗ್ರಹಿಸಿದರು.

ಇನ್ನು ಬಿಜೆಪಿಗರ ಮಾತೇ ಬೇರೆ ಆಡಳಿತವೇ ಬೇರೆ, ಕೋಮು ಪ್ರಚೋದನೆ ಬಿಟ್ಟು ಇನ್ಯಾವ ತತ್ವವೂ ಅವರಲ್ಲಿಲ್ಲ. ಜನರು ಇವರ ಆಡಳಿತದಿಂದ ರೋಸಿಹೋಗಿ ಚುನಾವಣೆಗೆ ಬರುವುದನ್ನೇ ಕಾಯುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಇರುವ ಬಿಜೆಪಿ ಸ್ಥಾನಗಳನ್ನೇ ಕಳೆದುಕೊಳ್ಳಲಿದ್ದು, ೨೦೨೩ಕ್ಕೆ ಬಹುಮತ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಬಿಜೆಪಿಗೆ ಸೇರಿ ತಪ್ಪು ಮಾಡಿದೆ ಎಂದು ಎಂಟಿಬಿ ನಾಗರಾಜ್ ಬಹಿರಂಗವಾಗಿ ಹೇಳಿದ್ದಾರೆ. ಆದರೆ ನನ್ನ ಬಳಿ, ಕೆಲ ಖಾಸಗಿ ಕಾರ್ಯಕ್ರಮಗಳಲ್ಲಿ ಹಲವಾರು ಮಂದಿ ಬಿಜೆಪಿ ಸೇರಿ ತಪ್ಪು ಮಾಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಬಸವನ ಅನುಭವ ಮಂಟಪದAತೆ ಇರುವ ಪಕ್ಷ ಅದು ಕಾಂಗ್ರೆಸ್ ಮಾತ್ರ, ಕಾಂಗ್ರೆಸ್ ನಲ್ಲಿರುವುದೇ ಸೌಭಾಗ್ಯ ಎಂದು ಪಕ್ಷ ಬಿಟ್ಟು ಹೋದವರಿಗೆ ಅರ್ಥವಾಗಿದೆ ಎಂದು ಹೇಳಿದರು.

Post a Comment

0Comments

Post a Comment (0)