ಹೋಮ್ ಮಿನಿಸ್ಟರ್ ಆರಗ ಜ್ಞಾನೇಂದ್ರ ರಿಗೆ ಮುಳುವಾಯ್ತ ವೀಕ್ ಮಂತ್ರಿ ಪಟ್ಟ
ಅರ್ ಎಸ್ ಎಸ್ ಪಡಸಾಲೆಯಲ್ಲಿ ಹೆದ್ದೂರ್ ನವೀನ,
ಪಕ್ಷದ ಪಡಸಾಲೆಯಲ್ಲಿ ಆರಗ ಜ್ಞಾನೇಂದ್ರ ಜಪ.
ಮತ್ತೊಮ್ಮೆ ರೆಬೆಲ್ ಆಗಿ ಪಕ್ಷ ಬಿಡ್ತಾರಾ ಬೇಗುವಳ್ಳಿ ಸತೀಶ್
ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಯಾರಿಗೆ ಎನ್ನುವ ಪ್ರಶ್ನೆ ಮುಂದಿಟ್ಟು ಕೆಣಕಿ ಸುಖಪಡುತ್ತಿದ್ದ ಬಿಜೆಪಿಗರಿಗೆ ಈಗ ತಮ್ಮದೇ ಪಕ್ಷದ ಟಿಕೆಟ್ ಚರ್ಚೆ ನಿದ್ದೆಗೆಡಿಸಿದೆ.
ಆರಗ ಜ್ಞಾನೇಂದ್ರರವರ ಕಳೆದ ಬಾರಿಯ ಲೀಡ್ ,ಕಿಮ್ಮನೆ ಅರ್ ಎಮ್ಎಮ್ ಹಗ್ಗ ಜಗ್ಗಾಟ ಬಿಜೆಪಿಗೆ ಇದುವರೆಗೆ ಮತ್ತೆ ಗೆಲುವು ನಮ್ಮದೆ ಎನ್ನುವ ಭರವಸೆ ಮೂಡಿತ್ತು. ಆದರೆ ಇದೀಗ ಕಾಂಗ್ರೆಸ್ ನಲ್ಲಿ ಮೋಡ ಸರಿದು ಕಿಮ್ಮನೆ ವಿಧಾನಸಭೆಗೆ ಅರ್ ಎಮ್ ಎಮ್ ಅಪೆಕ್ಸ್ ಬ್ಯಾಂಕ್ ಸಹಿತ ವಿಧಾನ ಪರಿಷತ್ ಗೆ ಎನ್ನುವಲ್ಲಿಗೆ ಟಿಕೆಟ್ ಗೊಂದಲ ಬಗೆಹರಿದಿದೆ ಎಂದು ಆಪ್ತವಲಯದಲ್ಲಿ ಕೇಳಿ ಬರುತ್ತಿದ್ದು ಇನ್ನಷ್ಟೆ ಖಚಿತವಾಗಬೇಕಿದೆ.
ಇತ್ತೀಚೆಗೆ ಅವರಿಬ್ಬರು ಅಂಬೇಡ್ಕರ್ ಜಯಂತಿಯಂದು ಒಟ್ಟಿಗೆ ಸನ್ಮಾನ ಸ್ವಿಕರಿಸಿದ್ದು, ಇಬ್ಬರ ಬೆಂಬಲಿಗರು ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದು ಈ ಸೂಚನೆ ನೀಡುತ್ತಿದೆ. ಆದರೆ ಇದೀಗ ರಾಜ್ಯದ ನಂಬರ್ 2ಹುದ್ದೆ ಗೃಹಮಂತ್ರಿಗಳಾಗಿ ಕುರ್ಚಿ ಹಿಡಿದರು, ಅದೇ ಕುರ್ಚಿಯಲ್ಲಿ ಪದೇ ಪದೇ ಎಡವುತ್ತಿರುವುದು ಆರಗ ಜ್ಞಾನೇಂದ್ರರಿಗೆ ಮುಳುವಾಯ್ತಾ ಎನ್ನುವ ಪ್ರಶ್ನೆ ಕಾಡುತ್ತಿದೆ.
ಇದೀಗ ಆರ್ ಎಸ್ ಎಸ್ ಪಡಸಾಲೆಯಲ್ಲಿ ಬಿ ಎಲ್ ಸಂತೋಷ್ ಮೈಸೂರು ಹೇಳಿಕೆ ಚರ್ಚೆಗೆ ಬಂದು ಆರಗ ಜ್ಞಾನೇಂದ್ರರನ್ನು ಬರುವ ಚುನಾವಣೆಯ ವೇಳೆಗೆ ಮಾರ್ಗದರ್ಶಕ ಮಂಡಳಿ ಸೇರಿಸುತ್ತಾರಾ ಎಂಬ ಅನುಮಾನ ಬಿಜೆಪಿಯಿಂದಲೇ ಮೂಡಿಬರುತ್ತಿದೆ.
ಅರ್ ಎಸ್ ಎಸ್ ಪಕ್ಷದ ನೆಲೆಗಟ್ಟಿ ಇರುವಾಗಲೆ ಹೊಸ ನಾಯಕನನ್ನು ಸೃಷ್ಟಿಸುವ ಹವಣಿಕೆಯಲ್ಲಿದೆ. ಅದಕ್ಕಾಗಿ ಸಿದ್ದಪಡಿಸಿರುವ ಹಾಗೂ ಎಲ್ಲಿಯೂ ಕಪ್ಪು ಕಲೆಗಳು ತಾಗದಂತೆ ಕಾಪಾಡಿಕೊಂಡಿರುವ ನಗುಮೊಗದ ನಾಯಕ ಹೆದ್ದೂರ ನವೀನ್ ಎಂಟ್ರಿಗೆ ಪ್ರಶಸ್ತ ಕಾಲ ಎನ್ನುತ್ತಿದೆ. ಆದರೆ ಗೃಹ ಮಂತ್ರಿಗಳಾಗಿ, ಮರಳು ,ವರ್ಗಾವಣೆ ಸೇರಿದಂತೆ ಹಲವು ತಂತ್ರಗಳಿಂದ ಗಟ್ಟಿಯಾಗಿರುವ ಆರಗ ಜ್ಞಾನೇಂದ್ರರಿಗೆ ಕಡೆಯ ಚುನಾವಣೆ ಇದಾಗಿದ್ದು ,ಹಣ ಮತ್ತು ಕೊನೆಯ ಚುನಾವಣೆ ಎಂಬ ಟ್ರಂಪ್ ಕಾರ್ಡ್ ಕೈಹಿಡಿಯಬಹುದು.
ಏನೇ ತಿಪ್ಪರಲಾಗ ಹಾಕಿದರೂ ಈ ಬಾರಿ ಆರಗ ಜ್ಞಾನೆಂದ್ರರಷ್ಟು ಹಣ ಯಾರಿಗೂ ಚುನಾವಣೆಯಲ್ಲಿ ಹಾಕಲಾಗದು ಎಂಬುದು ಅಷ್ಟೇ ಸತ್ಯ. ಆದರೆ ಗೃಹಮಂತ್ರಿಗಳಾದ ಮೇಲೆ ಮಾಡಿಕೊಂಡಿರುವ ಸಾಲು ಸಾಲು ಎಡವಟ್ಟು, ಕ್ಷೇತ್ರದಲ್ಲಿ ಬೀಸುತ್ತಿರುವ ಆಡಳಿತ ವಿರೋಧಿ ಅಲೆ ಇವರ ಟಿಕೆಟ್ ಗೆ ಕೊಳ್ಳಿ ಇಟ್ಟರು ಆಶ್ಚರ್ಯ ಪಡಬೇಕಿಲ್ಲಾ....
ಇನ್ನು ಬಿಜೆಪಿಯ ಹಿರಿಯ ನಾಯಕ ದಿ ಸಿ ಎಮ್ ಉದಾಸಿ ಆಪ್ತ ಎಂಬ ಎಂಟ್ರಿಯೊಂದಿಗೆ ಬಿಜೆಪಿಯಲ್ಲಿ ಸ್ಥಾನ ಪಡೆದು , ಕಳೆದ ಚುನಾವಣೆಯಲ್ಲೇ ಅರಗ ಜೊತೆ ತನ್ನ ಹೆಸರು ಟಿಕೆಟ್ ಫೈಟ್ ಗೆ ತರಲು ಯಶಸ್ವಿಯಾಗಿದ್ದ ಬೇಗುವಳ್ಳಿ ಸತೀಶ್ ಏನು ಮಾಡುತ್ತಾರೆ ಎಂಬುದು ಕುತೂಹಲ ಹೆಚ್ಚಿಸಿದೆ. ಈಗಾಗಲೆ ರೆಬೆಲ್ ಆಗಿ ಕಾಣಿಸುತ್ತಿರುವ ಬೇಗುವಳ್ಳಿ ಸತೀಶ್ ಮುಂದಿನ ನಡೆ ಕೂಡಾ ಕುತೂಹಲಕಾರಿಯಾಗಲಿದೆ. ಇನ್ನೂ ಇತ್ತೀಚೆಗೆ ಬಿಜೆಪಿ ಸೇರಿ ಏರುಸಿರು ಬಿಡುತ್ತಿರುವ ಮತ್ತು ಹಳೆಯ ಮೊನಚು, ಚರಿಷ್ಮಾ, ಛಾಪು ಕಳೆದುಕೊಂಡಿರುವ ಮದನ್ ನಂಥಹ ನಾಯಕರ ಗತಿ ಏನಾಗಲಿದೆ ಎನ್ನುವುದು ಕುತೂಹಲಕಾರಿ ವಿಷಯವೇ ಸರಿ.....
ಒಟ್ಟಿನಲ್ಲಿ ಈಗ ಬಿಜೆಪಿಯಲ್ಲಿ ಟಿಕೆಟ್ ಯಾರಿಗೆ ಎನ್ನುವ ಚರ್ಚೆ ಭಾರಿ ಕುತೂಹಲ ಮೂಡಿಸಿದೆ.....