ಜಂಗಮಸೋವೇನಹಳ್ಳಿ:ನಿದ್ದೆಗೆಡಿಸಿದ ಹುಚ್ಚನಾಯಿ,ಮಕ್ಕಳು ಸೇರಿ ಏಳು ಜನರ ಮೇಲೆ ದಾಳಿ-ಕ್ರಮಕ್ಕೆ ಆಗ್ರಹ

Udayavani News
0
ವಿಜಯನಗರ  ಜಿಲ್ಲೆ ಕೂಡ್ಲಿಗಿ ತಾಲೂಕು ಜಂಗಮ ಸೋವೆನಹಳ್ಳಿಯಲ್ಲಿ,ಹುಚ್ಚುನಾಯಿ ಆರೇಳು ಜನರನ್ನ ಕಚ್ಚಿ ಗಾಯಗೊಳಿಸಿರುವ ಘಟನೆ. ಎ20ರಂದು ರಾತ್ರಿ ಜರುಗಿರುವುದಾಗಿ ಗ್ರಾಮಸ್ಥರು ತಿಳಿಸಿದ್ದು,ರಾತ್ರಿ ಮನೆಯಂಗಳದಲ್ಲಿ ಮಲಗಿರೋರ ಮೇಲೆ ನಾಯಿ ಎರಗಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ ಎಂದು ತಿಳಿದು ಬಂದಿದೆ. ಗ್ರಾಮದಲ್ಲಿ ಹುಚ್ಚು ನಾಯಿ ಕಡಿತಕ್ಕೆ ಐದು ಮಕ್ಕಳು ಸೇರಿದಂತೆ ಒಟ್ಟು ಏಳು ಜನ ತುತ್ತಾಗಿದ್ದರೆಂದು, ಗ್ರಾಮದ  ಕೆಲವರು ತಿಳಿಸಿದ್ದಾರೆ. ಗ್ರಾಮ ಹಾಗೂ ಗ್ರಾಮದ ಸುತ್ತ ಮುತ್ತ ಕೆಲ ದಿನಗಳಿಂದ ಹುಚ್ಚು ನಾಯಿ ಗ್ರಾಮದಲ್ಲಿ ಅಲೆದಾಡುತ್ತಿದ್ದು, ಅದು ನಾಯಿಗಳನ್ನ ಹಾಗೂ ದನಕರು ಮತ್ತು ಮನುಷ್ಯರ  ಮೇಲೆ ನಿರಂತರ ದಾಳಿ ಮಾಡುತ್ತಿದೆ ಎಂದು ದೂರಲಾಗಿದೆ. ನಾಯಿಯು ಹುಚ್ಚು ಸೋಂಕುನಿಂದ ಬಳಲುತಿದ್ದು, ಅದು ಕಂಡ ಕಂಡವರ ಮೇಲೆ ಎರಗುತ್ತಿದೆ ಮತ್ತು ದನ ಕರುಗಳ ಮೇಲೇ ನಿರಂತರವಾಗಿ ದಾಳಿ ಮಾಡಿ ಗಾಯಗೊಳಿಸಿದೆ.ಇದು ತೀರಾ ಅಪಾಯಕಾರಿ ಸನ್ನಿವೇಶವಾಗಿದ್ದು, ಮಕ್ಕಳು ಮಹಿಳೆಯರು ಜೀವವನ್ನು ಕೈಯಲ್ಲಿಡಿದೇ ಜೀವಿಸುವಂತಹ ಆತಂಕ ಸೃಷ್ಟಿಯಾಗಿದೆ  ಎಂದು ಗ್ರಾಮದ ಹಿರಿಯರು ಹೇಳಿಕೊಂಡಿದ್ದಾರೆ.ಗ್ರಾಪಂ ಅಧಿಕಾರಿಗಳು ಶೀಘ್ರವೇ ನಾಯಿಯನ್ನು ಸೆರೆಹಿಡಿದು ಸೂಕ್ತ ಕ್ರಮ ಜರುಗಿಸಬೇಕಿದೆ,ಹುಚ್ಚು ನಾಯಿ ದಾಳಿಗೊಳಗಾದವರಿಗೆ ಅಗತ್ಯ ನೆರವನ್ನು, ಗ್ರಾಪಂ ಅಧಿಕಾರಿಗಳು ಶೀಘ್ರವೇ ಒದಗಿಸಬೇಕೆಂದು ಗ್ರಾಮಸ್ಥರು ಈ ಮೂಲಕ ಒತ್ತಾಯಿಸಿದ್ದಾರೆ.ಗ್ರಾಮಕ್ಕೆ ತಾಪಂ ಕಾರ್ಯನಿರ್ವಹಣಾಧಿಕಾರಿ ಭೆಟ್ಟಿ ನೀಡಿ ವಸ್ಥು ಸ್ತಿತಿಯನ್ನು,ಮನವರಿಕೆ ಮಾಡಿಕೊಂಡು,ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Post a Comment

0Comments

Post a Comment (0)