ಸುರಪುರ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿದ ಶಾಸಕರು

Udayavani News
0

ಸುರಪುರ ವರದಿ : ಸುರಪುರ ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಆರೋಗ್ಯ ಮೇಳವನ್ನು ಸುರಪುರ ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕರು ಹಾಗೂ ಕರ್ನಾಟಕ ನಗರ 
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ನರಸಿಂಹ ನಾಯಕ ರಾಜುಗೌಡ್ರು  ಉದ್ಘಾಟಿಸಿ ನಂತರ ಆರೋಗ್ಯ ತಪಾಸಣಾಸ್ಟಾಲ್ ಗಳಿಗೆ ಬೇಟಿ ನೀಡಿ ವಿಕ್ಷಿಸಿದರು ತದನಂತರ ನೇತ್ರ ಚಿಕಿತ್ಸೆ  ಸ್ಟಾಲ್ ಗೆ ಬೇಟಿ ನೀಡಿ ತಮ್ಮ ನೇತ್ರಗಳನ್ನು ದಾನಮಾಡಿದರು

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ:ಆರ್.ವಿ ನಾಯಕ,ಜಿ.ಪಂ ಮಾಜಿ ಅಧ್ಯಕ್ಷರಾದ ರಾಜಾ ಹನುಮಪ್ಪನಾಯಕ (ತಾತಾ),ಯಲ್ಲಪ್ಪ ಕುರಕುಂದಿ,ರಾಜಾ ಮುಕುಂದ ನಾಯಕ, ಪ್ರಕಾಶ್ ಸಜ್ಜನ್,ಮಹೇಶ್ ಪಾಟೀಲ್, ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಸೇರಿದಂತೆ ಇನ್ನೂ ಅನೇಕ ಮುಖಂಡರು ಭಾಗಿಯಾಗಿದ್ದರು. 

ಎನ್ ಎಮ್ ನಧಾಫ ಕೆಂಬಾವಿ

Post a Comment

0Comments

Post a Comment (0)