ಇನಾಯತುಲ್ಲಾ ಶಾಬಂದ್ರಿ ಭಟ್ಕಳ ವಿಧಾನಸಭಾ ಜೆ.ಡಿ.ಎಸ್ ಅಭ್ಯರ್ಥಿ- ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಮ್.ಇಬ್ರಾಹಿಂ

Udayavani News
0
ಭಟ್ಕಳ- ಭಟ್ಕಳ ತಾಲೂಕ   
ಜೆ.ಡಿ.ಎಸ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅವರು  ಬೆಂಗಳೂರಿನಲ್ಲಿ ನೂತನ ಜೆ.ಡಿ.ಎಸ್ ರಾಜ್ಯ ಅಧ್ಯಕ್ಷ  ಸಿ.ಎಂ.ಇಬ್ರಾಹಿಂ ಅವರನ್ನು ಭೇಟಿಯಾಗಿ  ಅವರನ್ನು ಅಭಿನಂದಿಸಿ , ಭಟ್ಕಳದ ಜೆ.ಡಿ.ಎಸ್ ಪಕ್ಷದ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಇನಾಯತುಲ್ಲಾ ಅವರಿಗೆ ಭಟ್ಕಳದ ಜೆಡಿಎಸ್ ಟಿಕೆಟ್ ನಿಮ್ಮ ಮನೆಯಲ್ಲಿ ಇದ್ದ ಹಾಗೆ, ನೀವು ಭಟ್ಕಳದ ತಂಜಿಮ್ ಸಹಕಾರ ತೆಗೆದುಕೊಂಡು ಭಟ್ಕಳ ಕ್ಷೇತ್ರದಲ್ಲಿ ಜೆಡಿಎಸ್ ವಿಧನಸಭಾ ಅಭ್ಯರ್ಥಿಯಾಗಿ ತಯಾರಿ ಸುರು ಮಾಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಭಟ್ಕಳದ ಜೆಡಿಎಸ್ ಕಾರ್ಯಕ್ರರ್ತರು ಉಪಸ್ಥಿತರಿದ್ದರು. ಈ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ ಭಟ್ಕಳ ಜೆಡಿಎಸ್ ತಾಲೂಕ ಅಧ್ಯಕ್ಷ  ಇನಾಯತುಲ್ಲಾ ಶಾಬಂದ್ರಿ ಅವರು ಭಟ್ಕಳ ವಿಧಾನಸಭಾ ಜೆಡಿಎಸ್ ಪಕ್ಷದ  ಟಿಕೆಟ್ ತಮಗೆ ಪಕ್ಕಾ ಆಗಿದ್ದು , ತಾವು  ಭಟ್ಕಳ ತಂಜಿಮ್ ಸಹಕಾರದೊಂದಿಗೆ   ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡುವುದಾಗಿ ತಿಳುಸಿದರು.
ವರದಿ-ಕುಮಾರ ನಾಯ್ಕ,  ಭಟ್ಕಳ

Post a Comment

0Comments

Post a Comment (0)