ಮಸ್ಕಿ:ಪಟ್ಟಣದ ಕರ್ನಾಟಕ ರಾಜ್ಯ ಅಮೆಚೂರ್ ಖೋ ಖೋ ಅಸೋಸಿಯೇಷನ್ ವತಿಯಿಂದ ತಾಲೂಕಾ ಕಛೇರಿ ಅನ್ನಪೂರ್ಣ ನರ್ಸಿಂಗ್ ಹೋಮ್ ನಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.
ಕರ್ನಾಟಕ ರಾಜ್ಯ ಅಮೆಚೂರ್ ಖೋ ಖೋ ಅಸೋಸಿಯೇಷನ್ ಬೆಂಗಳೂರು ಹಾಗೂ ಹಾವೇರಿ ಜಿಲ್ಲಾ ಅಮೆಚೂರು ಖೋ ಖೋ ಅಸೋಸಿಯೇಷನ್ ಇವರ ವತಿಯಿಂದ ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ 14 ವರ್ಷದ ಒಳಗಿನ ಬಾಲಕರ ಅಂತರ್ ಜಿಲ್ಲಾ ಖೋ ಖೋ ಪಂದ್ಯಾವಳಿಯನ್ನು ದಿನಾಂಕ 17 18 19 2022 ರಂದು ಏರ್ಪಡಿಸಲಾಗಿತ್ತು ಈ ಕ್ರೀಡಾಕೂಟದಲ್ಲಿ ರಾಜ್ಯದ 12 ನೊಂದಾಯಿತ ಜಿಲ್ಲೆಗಳು ಭಾಗವಹಿಸಿದ್ದು ಈ ಕ್ರೀಡಾಕೂಟಗಳು ಬಹಳ ಸ್ಪರ್ಧಾ ಯುತವಾಗಿ ನಡೆದವು ಈ ಕ್ರೀಡಾಕೂಟದಲ್ಲಿ ವಿಜೇತ ಎಂಟು ತಂಡಗಳು ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಮಿನಿ ಒಲಿಂಪಿಕ್ ಅಹ೯ತೆಯನ್ನು ಪಡೆದವು ಒಟ್ಟು 12 ತಂಡಗಳಲ್ಲಿ ರಾಯಚೂರ್ ಜಿಲ್ಲಾ ತಂಡವು ಬೆಂಗಳೂರು ಹಾಗೂ ಗದಗ್ ಜಿಲ್ಲಾ ತಂಡವನ್ನು ಸೋಲಿಸಿ ಸೂಪರ್ ಎಂಟರ ಘಟ್ಟಕ್ಕೆ ಆಯ್ಕೆಯಾಗಿದೆ. ಇದಕ್ಕೆ ಸಹಕರಿಸಿದ ಜಿಲ್ಲಾ ಅಧ್ಯಕ್ಷರಾದ ಡಾಕ್ಟರ್ ಮಲ್ಲಿಕಾರ್ಜುನ್ ಇಡ್ಲಿ ಹಾಗೂ ಅವರ ತಂಡದ ಸರ್ವ ಸದಸ್ಯರು ಅದೇ ರೀತಿ ತಾಲೂಕ ಅಧ್ಯಕ್ಷರಾದ ಶ್ರೀಯುತ ಮೌನೇಶ್ ನಾಯಕ್ ಹಾಗೂ ಅವರ ತಂಡದ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳು.ಅದೇರೀತಿ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಲು ತರಬೇತಿ ನೀಡಿದ ಎಲ್ಲ ದೈಹಿಕ ಶಿಕ್ಷಣ ವೃಂದಕ್ಕೆ ಅಭಿನಂದನೆಗಳು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಡಾಕ್ಟರ್ ಮಲ್ಲಿಕಾರ್ಜುನ ಇತ್ಲಿ ಜಿಲ್ಲಾ ಅಧ್ಯಕ್ಷರು, ಶ್ರೀ ಮೌನೇಶ್ ನಾಯಕ ತಾಲೂಕ ಅಧ್ಯಕ್ಷರು, ಹಾಗೂ ಸದಸ್ಯರಾದ ಮಸೂದ್ ಪಾಷಾ, ಅಮರೇಶ್ ಬ್ಯಾಳಿ, ನಾಗರಾಜ ಯಂಬಲದ, ಇತರರು ಭಾಗವಹಿಸಿದ್ದರು.
ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ,
ಮೊ:8197164470