ಚಿಂತಾಮಣಿ:ಇತಿಹಾಸ ಪ್ರಸಿದ್ದ ಕೈವಾರ ಗ್ರಾಮದಲ್ಲಿ ತಕಿಟ ತಕತೈ ನೃತ್ಯ ಶಾಲೆ ಹಾಗು ಜನಪರ ಫೌಂಡೇಷನ್ ಮತ್ತು ಚಿಂತನಾ ಫೌಂಡೇಷನ್ ಸಂಸ್ಥೆಗಳ ಸಹಯೋಗದೊಂದಿಗೆ ಜಲ ಉಣಿಸಿ-ಜೀವ ಉಳಿಸಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ವಿದ್ಯಾರ್ಥಿನಿ ತಸ್ಲೀಮಾ ಗಿಡ ಮರಗಳ ಸಂರಕ್ಷಣೆಗೆ ಎಲ್ಲರು ಮುಂದಾಗಬೇಕು,ಆ ಮೂಲಕ ಜೀವ ಸಂಕುಲ ಉಳಿವಿಗೆ ಶ್ರಮಿಸಬೇಕೆಂದ ತಸ್ಲೀಮಾ ಜಾಗತಿಕ ತಾಪಮಾನ ಹೆಚ್ಚಳವಾಗಿ ಇಡೀ ಜೀವ ಸಂಕುಲ ಸಂಕಷ್ಟ ಎದುರಿಸುವಂತಾಗಿದೆ ಎಂದ ಅವರು ಪರಿಸರವನ್ನು ಉಳಿಸಿ,ಬೆಳೆಸಬೇಕೆಂದು ಹೇಳಿದರು.
ಅಭಿಯಾನದಲ್ಲಿ ನೃತ್ಯ ಶಾಲೆಯ ನಿರ್ದೇಶಕ ದೇವಪ್ಪ,ಯುವಯಾನ ಬಳಗದ ಮುಸ್ಕಾನ್,ಮದಿಹಾ,ನಳಿನಿ,ಮಮತಾ,ಪ್ರೀತಿ,ಹಸ್ವಾ,ಬಾಬುರೆಡ್ಡಿ ಸೇರಿದಂತೆ ಪರಿಸರ ಪ್ರಿಯರು ಉಪಸ್ಥಿತರಿದ್ದರು.