ಕೇಂದ್ರ ಸರ್ಕಾರದ ಯೋಜನೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ಮೋಸ.

Udayavani News
0
ಯಾದಗಿರಿ :   ಜಿಲ್ಲೆಯ ಹುಣಸಗಿ ಮತ್ತು ಶಹಾಪುರು ತಾಲ್ಲೂಕಿನಲಿ ಇಬ್ಬರು ವ್ಯಕ್ತಿಗಳು ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ 90% ರಿಯಾಯ್ತಿ ದರದ ಮೇಲೆ ನಿರುದ್ಯೋಗ ಯುವಕರಿಗೆ ಕಾರಗಳು ಮತ್ತು ರೈತರಿಗೆ ಟ್ರ್ಯಾಕ್ಟರ್ ಗಳು ಕೊಡಿಸುವದಾಗಿ ನಂಬಿಸಿ ಮೋಸ ಮಾಡಲಾಗುತ್ತಿದೆ . ಮತ್ತು ಕೇಂದ್ರ ಸರಕಾರದ ಹೆಸರಿನಲ್ಲಿ ಸುಳ್ಳು ಧಾಖಲೆ ಸೃಷ್ಟಿಸಿ ಪ್ರತಿ ಒಬ್ಬರ ಹತ್ತಿರ ಎರಡು ಲಕ್ಷ ರೂಪಾಯಿ ಹಣವನ್ನು ತಗೆದುಕೊಂಡು ಜನರಿಗೆ ಮೋಸಮಾಡುತ್ತಿರುವುದು ಕಂಡು ಬಂದಿರುತ್ತದೆ ಹುಣಸಗಿ ಭಾಗದ ಮಲ್ಲರೆಡ್ಡಿ ಮತ್ತು ಶಹಾಪುರು ಭಾಗದ ಪ್ರೇಮಸಾಗರ ಎಂಬುವರು ಸಾರ್ವಜನರಿಗೆ ಸಬ್ಸಿಡಿ ದರದಲ್ಲಿ ಕಾರು ಮತ್ತು ಟ್ರ್ಯಾಕ್ಟರ್ ಕೊಡಿಸುತ್ತೇವೆ ಎಂದು ನಂಬಿಸಿ ಅವರ ಹತ್ತಿರ ಡಿ.ಡಿ.ಹೆಸರಿನಲ್ಲಿ ಎರಡುಲಕ್ಷ ಹಣವನ್ನು ಕೊಡಬೇಕು ಎಂದು ನಂಬಿಸಿದರು ಅವರ ಮಾತುಗಳನ್ನು ನಂಬಿ ಸಾರ್ವಜನರು ಹಣವನ್ನು ನೀಡಿದರು ಹಣ ಪಡೆದ ನಂತರ ಮೂರು ತಿಂಗಳ ಒಳಗಾಗಿ ನಿಮಗೆ ವಾಹನಗಳು ಸಿಗುತ್ತದೆ ಎಂದು ನಂಬಿಸಿದರು. ತದನಂತರ ವಾಹನಗಳು ಸರಕಾರದಿಂದ ಬಿಡುಗಡೆ ಆಗುತ್ತಿದೆ ಎಂದು ಅವರ ದಾಖಲೆಗಳು ತಗೆದುಕೊಳ್ಳುವಂತೆ ಮಾಡಿ insurence ಹಣವನ್ನು ಮುಂಚಿತವಾಗಿ ಕಟ್ಟಬೇಕು ಎಂದು ಹೇಳಿ ಮತ್ತೆ ನಾಲ್ವತ್ತು ಸಾವಿರ ರೂಪಾಯಿವರೇಗು ಕೇಳುತ್ತಾರೆ ಸರಿ ಅಂತ ಅದನ್ನು ನಂಬಿ ಸಾರ್ವಜನಿಕರು ಹಣವನ್ನು ಕೊಟ್ಟಿರುತ್ತಾರೆ .. ಅವರು ಹೇಳಿದ ಸಮಯ ಹತ್ತಿರ ಬಂದ ನಂತರ ನೀವು book ಮಾಡಿರುವ ವಾಹನ ಸ್ಟಾಕ್ ಇಲ್ಲ ಬೇರೆ ಗಾಡಿ ಇದೆ innova crista ಇದೆ ಇದು ರೆಡಿ ಇದೆ ನಾಳೆನೆ ಡೆಲಿವರಿ ಆಗುತ್ತೆ ಅಂತ ಹೇಳುತ್ತಾರೆ.. ಅವಾಗ ಜನರು ಸರಿ ಎಂದು ಒಪ್ಪಿಕೊಳ್ಳುತ್ತಾರೆ.. ಒಪ್ಪಿಗೆ ಸೂಚಿಸಿದ ನಂತರಾ ಇನ್ನು ಜಾಸ್ತಿ ಹಣ ಕೊಡ್ಬೇಕು ಈ ಕಾರು ಬೇಕು ಅಂದರೆ ಅಂತ ಹೇಳ್ತಾರೆ ... ಈಗಾಗಲೇ ನೀವು ಎರಡುಲಕ್ಷ ಕೊಟ್ಟಿದಿರಿ ಇನ್ನು ಮುರುಲಕ್ಷ ಕೊಡಿ ಆ ಕಾರು ಬರುತ್ತದೆ ಬರುತ್ತೆ ಅಂತ ದುಡ್ಡು ವಸೂಲಿ ಮಾಡುತ್ತಿದ್ದಾರೆ ಇವರ ಒತ್ತಡಕ್ಕೆ ಮಣಿದು ಕೆಲವರು ಕೊಟ್ಟು ಸಿಕ್ಕಾಕಿಕೊಂಡಿದ್ದಾರೆ ಇನ್ನು ಕೆಲವರು ಕೊಟ್ಟಿರುವುದಿಲ್ಲ. ಕೆಲವರಿಗೆ ಅನುಮಾನ ಬಂದು ನೀವು ಕೊಟ್ಟ ಸಮಯಕಿಂತ ಹೆಚ್ಚು ತಿಂಗಳುಗಳು ಕಾದರು ವಾಹನ ಬರದಿದ್ದಾಗ ನಮ್ಮ ದುಡ್ಡು ನಮಗೆ ಕೊಡಿ ಅಂತ ಕೇಳಿದಾಗ ಅವರು ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿ ಕೊಂಡಿರುತ್ತಾರೆ. ಆದ್ದರಿಂದ ನಮ್ಮ ಯಾದಗಿರಿ ಜಿಲ್ಲೆಯ ವರಿಷ್ಟ ಅಧಿಕಾರಿಗಳು ಶೀಘ್ರವೇ ಈ ಬಗ್ಗೆ ತನಿಖೆ ಮಾಡಿ ಎಂದು ನೊಂದವರು ಮನವಿ ಮಾಡಿದರು

ಜಿಲ್ಲಾ ವರದಿಗಾರರು : ಶಿವು ರಾಠೋಡ

Post a Comment

0Comments

Post a Comment (0)