ಕೇವಲ ಭರವಸೆ ಬೇಡ, ಜೆಜೆಎಂ ಬಾಕಿ ಬಿಲ್ ಪಾವತಿಸಿ ಗುತ್ತಿಗಾದರ ಆಗ್ರಹ

Udayavani News
0

ಬೆಂಗಳೂರು ಜ 7 : ಬಾಕಿ ಬಿಲ್ ಸೇರಿದಂತೆ ವಿವಿಧ ಭೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರದ ಮಟ್ಟದಲ್ಲಿನ ಅಧಿಕಾರಿಗಳಿಗೆ ವಾರದಲ್ಲಿ ಎರಡು ಬಾರಿಯಾದರೂ ಬೇಟಿಯಾಗುತ್ತಲೇ ಇದ್ದು ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದೇ ಗುತ್ತಿಗೆದಾರರು ಪರದಾಡುವಂತಾಗಿದೆ ಎಂದು ರಾಜ್ಯದ ಗುತ್ತಿಗೆದಾರರು ಸರ್ಕಾರದ ಅಧಿಕಾರಿಗಳ ಎದುರು ತಮ್ಮ ಗೋಳು ತೋಡಿಕೊಂಡರು.
ಈ ಕುರಿತು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್  ಅಸೋಸಿಯೇಷನ್‌ನ ರಾಜ್ಯಧ್ಯಕ್ಷ ಆರ್.ಮಂಜುನಾಥ ಅವರ ನೇತೃತ್ವದಲ್ಲಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ವರ್ಷನುಗಟ್ಟಲೆ ಕಾದರು ಬಿಲ್ ಪಾವತಿಯಾಗದೇ ಗುತ್ತಿಗೆದಾರರು ಸಾವಿನಂಚಿಲ್ಲಿದ್ದಾರೆ, ಹಾಗೂ ಕಾಮಗಾರಿಯ ಕಾಲಾವಧಿ ವಿಸ್ತರಣೆ, ವರ್ಕ್ಸ್ಲೀಪ್, ಹಸ್ತಾಂತರ ಮಾಡುವ ಪದ್ಧತಿ, ಶೇಕಡಾ 10 ರಷ್ಟು ಅನುದಾನ ಬಿಡುಗಡೆ, ಅನುದಾನ, ಜಿಎಸ್‌ಟಿ ಶೇ.6 (ಉಳಿದ ಹಣ) ಒದಗಿಸಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದರು ಸಹ ಬಿಲ್ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರು ಅಸಮಾದಾನ ವ್ಯಕ್ತಪಡಿಸಿದರು. ಗುತ್ತಿಗೆದಾರರ ಕುಂದು ಕೊರತೆಗಳು ಹಾಗೂ ಬಾಕಿ ಬಿಲ್ ವಿಚಾರವನ್ನು ಹಲವು ಬಾರಿ ಗಮನಕ್ಕೆ ತಂದಿದ್ದೇವೆ, ಬಾಕಿಬಿಲ್ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಯಾವುದೇ  ಸಮಸ್ಯೆಗಳಿದ್ದರೂ ಮಂತ್ರಿಗಳನ್ನು ಭೇಟಿ ಮಾಡಿ ಎಂದು ಹೇಳುತ್ತಾರೆ. ಬಿಲ್ ಪಾವತಿಯಲ್ಲಿ ಜೇಷ್ಠತೆ ಕಡೆಗಣಿಸಲಾಗುತ್ತಿದೆ. ಇದರಿಂದ ಎಲ್ಲಾ ಗುತ್ತಿಗೆದಾರರಿಗೂ ಅನ್ಯಾಯವಾಗುತ್ತಿದೆ. ಕೇವಲ ಜೆಜೆಎಂ ಕಾಮಗಾರಿಯಲ್ಲೇ ಹೆಚ್ಚು ಬಿಲ್ ಬಾಕಿಯಿದೆ ಈಗಾಗಲೇ ಸಾಲದ ಸುಳಿಯಲ್ಲಿರುವ ಕೇಲ ಗುತ್ತಿಗೆದಾರರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಅವರ ಕುಟುಂಬಸ್ಥರು ಸರ್ಕಾರದ ವಿರುದ್ಧ ಇಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಗುತ್ತಿಗೆದಾರರ ಸಮಸ್ಯೆ ಪರಿಹರಿಸಿ, ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿದರು.

ಈ ವೇಳೆ ಜಗನಾಥ ಶೇಖಜೀ, ಪ್ರಧಾನ ಕಾರ್ಯದರ್ಶಿ ಜಿ.ಎಂ ನಂದಕುಮಾರ, ಬಿ.ಜಿ ಕಾಮನಗೌಡ, ಸುಜಿತ್ ಪಾಟೀಲ್, ಬಿ ಎಂ ಹಳ್ಳಿಕೋಟಿ,ರಮೇಶ, ಉಮೇಶ ಮೇಟಗಾರ, ಮಾಣಿಕರಾವ್, ಡಿ.ಎಸ್ ಮರನೂರ, ತಮ್ಮಣಗೌಡ, ಮಲ್ಲಿಕಾರ್ಜುನಗೌಡ ಗುಂಡಗುರ್ತಿ, ಸೇರಿದಂತೆ ರಾಜ್ಯದ ನೂರಾರು ಗುತ್ತಿಗೆದಾರರು ಇದ್ದರು.

Post a Comment

0Comments

Post a Comment (0)