KSRTC ಬಸ್ ಹರಿದು ಬಾಲಕಿ 2 ವರ್ಷದ ಮಗು ಸಾವು.

Udayavani News
0
ಸುರಪುರ ಸುದ್ದಿ :ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ಕೆಎಸ್ ಆರ್ ಟಿಸಿ ಬಸ್ ಹರಿದು 2 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮದ್ಯಾಹ್ನ 11:40 ರ ಸುಮಾರಿಗೆ ಜರುಗಿದೆ.

ಪರಸಪ್ಪ ತಂದೆ ದ್ಯಾವಪ್ಪ ಹುಣಸ್ಯಾಳ ರವರ 2 ವರ್ಷದ ಮಗು ಲಕ್ಷ್ಮಿ ಮೃತ ಬಾಲಕಿಯಾಗಿದ್ದು.

ಕೂಡಲಗಿ ಗ್ರಾಮದಿಂದ ಸುರಪುರಕ್ಕೆ ಹೊರಟಿರುವ KA 33 F 0346 ಬಸ್ ನ ಎರಡು ಚಕ್ರಗಳು ಮಗುವಿನ ಮೇಲೆ ಹರಿದಿದ್ದು ದೇಹ ಛಿದ್ರ ಛಿದ್ರಗೊಂಡಿದೆ. 

ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು ಕೆಂಭಾವಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post a Comment

0Comments

Post a Comment (0)