ಆರ್.ಟಿ. ಜೆ. ಟೂರ್ನಾಮೆಂಟ್ ಉದ್ಘಾಟನೆಯನ್ನು ಮಾಡಿದ : ನರಸಿಂಹನಾಯಕ (ರಾಜುಗೌಡ )

Udayavani News
0
ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಭಾನುವಾರ ನಡೆದ ಎ.ಎನ್.ಸಿ.ಸಿ ಕ್ರೀಡಾಂಗಣದಲ್ಲಿ 24ನೇ ಬಾರಿಗೆ ಹಾರ್ಡ್ ಟೆನಿಸ್ ಬಾಲ್ ಓಪನ್ ಕ್ರಿಕೇಟ್ ಟೂರ್ನಾಮೆಂಟ್ ಇದಾಗಿದ್ದು. ಪ್ರತಿ ವರ್ಷದಂತೆ ಈ ವರ್ಷವು ಸಹ ಟೂರ್ನಾಮೆಂಟ್ ಆರ್.ಟಿ. ಜೆ . ಗ್ರೂಪ್ಸ್ ನಾರಾಯಣಪುರರವರು ನರಸಿಂಹನಾಯಕ (ರಾಜುಗೌಡ) ಹುಟ್ಟು ಹಬ್ಬದ ಪ್ರಯುಕ್ತವಾಗಿ ಈ ಟೂರ್ನಾಮೆಂಟ್ ಆಯೋಜಿಸುತ್ತಾರೆ.

ಟೂರ್ನಾಮೆಂಟ ಉದ್ಘಾಟನೆಯನ್ನು ಮಾಜಿ ಸಚಿವರು ಸುರಪುರ ನರಸಿಂಹನಾಯಕ (ರಾಜುಗೌಡ) ಮಾಡಿ. ಯುವಕರು ದೇಶದ ನಿಜವಾದ ಸಂಪತ್ತು. ನಿತ್ಯ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸದೃಢವಾಗಿರುತ್ತದೆ. ಸೋಲು -ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು. ಈ ವೇಳೆ ನೆರೆದಿದ್ದ ವಿವಿಧ ತಂಡಗಳ ಆಟಗಾರರಿಗೆ ಶುಭ‌ ಕೋರಿದರು.

ಪ್ರಥಮ ಬಹುಮಾನ : 3.00.000 = ರೂ &ಆರ್.ಟಿ.ಜೆ ಟ್ರೋಫಿ ಕೊಡುಗೆ: ಶ್ರೀ ಎಸ್.ಪಿ.ದಯಾನಂದ ಮಾಲಕರು ಡಿ.ಎಸ್.ಮ್ಯಾಕ್ ಬೆಂಗಳೂರು, ದ್ವೀತಿಯ ಬಹುಮಾನ : 150.000 = ರೂ & ಆರ್.ಟಿ.ಜೆ ಟ್ರೋಫಿ ಕೊಡುಗೆ: ಶ್ರೀ ಡಾ|| ಬಿ.ಎಮ್.ಅಚ್ಛಿಕೋಟೆ ಪ್ರಥಮ ದರ್ಜೆ ಗುತ್ತಿಗೆದಾರರು ರಾಜನಕೋಳೂರ, ತೃತೀಯಾ ಬಹುಮಾನ : 55.000 = ರೂ & ಆರ್.ಟಿ.ಜೆ ಟ್ರೋಫಿ ಕೊಡುಗೆ: ಶ್ರೀ ಬಿ.ಎನ್.ಪೋಲೀಸ್ ಪಾಟೀಲ್ ಪ್ರಥಮ ದರ್ಜೆ ಗುತ್ತಿಗೆದಾರ. ಕೊಡುಗೆ: ಶ್ರೀ ಮತ್ತು ನವಲಗುಡ್ಡ ಪ್ರಥಮ ದರ್ಜೆ ಗುತ್ತಿಗೆದಾರರು ಕೊಡೇಕಲ, ಚತುರ್ಥ ಬಹುಮಾನ : 55.000 = ರೂ & ಆರ್.ಟಿ.ಜೆ ಟ್ರೋಫಿ ಉಡುಗೊರೆಯಾಗಿ ನೀಡಿದರು 

 ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ. ಹಣಮಂತನಾಯಕ (ಬಬ್ಲೂಗೌಡ) ಬಿ.ಜೆ.ಪಿ ಯುವ ಮುಖಂಡರು ಕೊಡೇಕಲ್, ಕುಶಾಲ್ ಧಣಿ , ದೇವು ಗೋಪಳ್ಳಿ, ಚಿನ್ನಪ್ಪ ಡೊಳ್ಳಿ, ತಿಮ್ಮಪ್ಪ ರೋಡಲಬಂಡ, ಮಲ್ಲಿಕಾರ್ಜುನ್ ಅಮ್ಮಾಪುರ್, ಸುರೇಶ್ ಸಜ್ಜನ್, ವಾಸಿಗೌಡ, ಆಂಜನೇಯ ದೊರೆ, ಸಂಗಣ್ಣ ಬಸಪ್ಪ ಶೆಟ್ಟರ್, ಸೇಕ್ ಅಹ್ಮದ್, ರಮೇಶ್ ಕೋಳೂರು, ಶಿವು ಬಿರಾದರ್, ಜಟ್ಟಪ್ಪ ಗೊಳಸಂಗಿ, ಇನ್ನಿತರರು ಇದ್ದರು.

ಜಿಲ್ಲಾ ವರದಿಗಾರ : ಶಿವು ರಾಠೋಡ 

Post a Comment

0Comments

Post a Comment (0)