ಎಎಸ್ಐ ಸಿ.ಜಿ.ಕುಲಕರ್ಣಿ ಮಾತನಾಡಿ, ‘ನಿಮ್ಮ ಮನೆಯ ನೆರೆ ಹೊರೆಯಲ್ಲಿಕಾನೂನು ಬಾಹಿರ ಚಟುವಟಿಕೆ, ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ, ಬಾಲ್ಯ ವಿವಾಹ ಜರುಗುತ್ತಿದ್ದರೆ, ಕಷ್ಟಗಳು ಬಂದರೆ, ಜಗಳವಾದರೆ ತಕ್ಷಣವೇ ತುರ್ತು ಕರೆಗಳಿಗೆ ಸಂಪರ್ಕಿಸಿ ಪೊಲೀಸರಿಗೆ ತಿಳಿಸಿದರೆ, ತಕ್ಷಣವೇ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಹಾರ ಕಲ್ಪಿಸುವರು,’ ಎಂದು ಹೇಳಿದರು.
ತುರ್ತು ಕರೆ ಸಂಖ್ಯೆ ಮಾಹಿತಿ:‘ತುರ್ತು ಸಂದರ್ಭದಲ್ಲಿ112, ಮಕ್ಕಳ ಸಹಾಯಕ್ಕೆ 1098, ಸೈಬರ್ ಅಪರಾಧಕ್ಕೆ 1930, ಮಹಿಳಾ ಸಹಾಯವಾಣಿ 1091/181, ಮಾದಕ ದ್ಯವ್ಯ ತಡೆಗೆ 1908 ಹಾಗೂ ಇತರ ತೊಂದರೆಗಳಿಗೆ ಸ್ಥಳೀಯ ಠಾಣೆಯ ನಂಬರ್ ಗೆ ಕರೆ ಮಾಡಿ,’’ ಎಂದು ಸಲಹೆ ನೀಡಿದರು.
ಕರಪತ್ರ ವಿತರಣೆ:
ನಂತರ ಮನೆ ಮನೆಗೆ ಭೇಟಿ ನೀಡಿದ ಪೋಲಿಸ್ ಸಿಬ್ಬಂದಿ ಕಾನೂನು ಅರಿವು ಮತ್ತು ತುರ್ತು ಕರೆಯ ಮಾಹಿತಿ ಕರಪತ್ರಗಳನ್ನು ಬಸವರಾಜ ಹಿಪ್ಪರಗಿ, ಬಸವರಾಜ ಚಿಂಚೋಳಿ ವಿತರಿಸಿದರು.