ಬೆಂಗಳೂರು ; ರಾಜಗೋಪಾಲನಗರದ ಬಸಪ್ಪನಕಟ್ಟೆಯಲ್ಲಿ ಭಾರತಿದರ್ಶ್ ಫೌಂಡೇಶನ್ (ರಿ) ಆಯೋಜಿಸಿದ್ದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಎಲ್.ಬಿ.ಎಸ್ ಅಟೋಮೆಷನ್ ಸಿಸ್ಟಮ್ ನ ಮಾಲೀಕ ಬಸವರಾಜ್ ಎನ್. ಕೆ ಮತ್ತು ಶ್ರೀಮತಿ ಲೀಲಾವತಿ. ಪಿ.ಎಮ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷಕರಾದ ಭಾ ಮ ಹರೀಶ್ ಉದ್ಘಾಟಿಸಿದರು
ಭಾ ಮ ಹರೀಶ್ ಮಾತನಾಡಿ ಖಾಸಗಿ ಆಸ್ಪತ್ರೆ ವೈದ್ಯರಲ್ಲಿ ಚಿಕಿತ್ಸೆ ಮಾಡಿಸುವ ವೆಚ್ಚ ದುಬಾರಿಯಾಗಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕರು ಭಾರತಿದರ್ಶ್ ಫೌಂಡೇಶನ್ (ರಿ) ಆಯೋಜಿಸುವ ವೈದ್ಯಕೀಯ ಚಿಕಿತ್ಸೆ ಶಿಬಿರದಲ್ಲಿ ಎಲ್ಲಾ ರೀತಿಯ ಉಚಿತ ಶಸ್ತ್ರ ಚಿಕಿತ್ಸೆಯ ಲಾಭವನ್ನು ಪಡೆಯಬೇಕೆಂದು ಹೇಳಿದರು.
ನೂರಾರು ಜನರು ಭಾಗವಹಿಸಿ ಶಿಬಿರದ
ಲಾಭವನ್ನು ಪಡೆದರು. ಈ ಕಾರ್ಯಕ್ರಮದಲ್ಲಿ ಶ್ರೀಮತಿ ನರಸಮ್ಮ, ಎಮ್. ಮುನಿರಾಜು, ಭಾರತಿ ದರ್ಶ್ ಫೌಂಡೇಶನ್ (ರಿ) ಸಂಸ್ಥಾಪಕರಾದ ಶೈಲೇಂದ್ರ ಪಾಟೀಲ್ ಭಾಗವಹಿಸಿದ್ದರು