ಗುರುಗುಂಟಾ ಗ್ರಾಮವನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆರಿಸುವ ಸರ್ಕಾರದ ಯೋಚನೆಯನ್ನು ವಿರೋಧಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ ಮತ್ತು ಗ್ರಾಮಸ್ಥರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಗುರುಗುಂಟಾ ಗ್ರಾಮವು ಹೋಬಳಿ ಕೇಂದ್ರವಾಗಿದ್ದು, ತಹಶೀಲ್ದಾರರ ಕಚೇರಿ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮದಲ್ಲಿ 60-70 ದೊಡ್ಡಿಗಳು ಇದ್ದು, ಹೆಚ್ಚಿನವರು ಪರಿಶಿಷ್ಟ ಪಂಗಡದ ಬಡ ರೈತರಾಗಿದ್ದಾರೆ. ಕೃಷಿಯೇ ಅವರ ಜೀವನಾಧಾರವಾಗಿದ್ದು, ಕೈಗಾರಿಕೆಗಳಿಲ್ಲದ ಕಾರಣ ಕೂಲಿ ಕಾರ್ಮಿಕರು ರಾಷ್ಟ್ರೀಯ ಉದ್ಯೋಗ ಖಾತ್ರಿಗೆ ಅವಲಂಬಿತರಾಗಿದ್ದಾರೆ
ಪಟ್ಟಣ ಪಂಚಾಯತಿಯಾಗಿ ಘೋಷಿಸಿದರೆ, ಬಡ ಕಾರ್ಮಿಕರು ಕೆಲಸಕ್ಕಾಗಿ ಮಹಾನಗರಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ನೀರಿನ ಕರ, ಆಸ್ತಿ ಕರ ಹಾಗೂ ವಿದ್ಯುತ್ ದರ ಹೆಚ್ಚಳದಿಂದ ಸಾಮಾನ್ಯ ಜನತೆ ಸಂಕಷ್ಟ ಅನುಭವಿಸಬೇಕಾಗುತ್ತದೆ. ಅಲ್ಲದೇ ಸುಮಾರು 2000-2500 ವಿದ್ಯಾರ್ಥಿಗಳು ಗ್ರಾಮೀಣ ಕೃಪಾಂಕದ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇದೆ ಗುರುಗುಂಟಾವನ್ನು ಪಟ್ಟಣ ಪಂಚಾಯತಿಯಾಗಿ ಮಾಡಿದಲ್ಲಿ ಸಂಘಟನೆ ಮತ್ತು ಗ್ರಾಮಸ್ಥರು ಹೆದ್ದಾರಿ ಬಂದ್ ಸೇರಿದಂತೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ” ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷರಾದ ವೈ ದುರ್ಗಾ ಪ್ರಸಾದ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಆನಂದ ಕುಂಬಾರ್, ತಿಮ್ಮಣ್ಣ ನಾಯಕ, ಶಿವುಮೇಟಿ ಶರಣೋಜಿ ಪವಾರ್, ಶಿವುಕೆಂಪು ಕನಕಪ್ಪ, ಮಹಾಂತೇಶ, ಹನುಮಂತಲಾಲ್ ಸಾಬ, ಮಹ್ಮದ್ ಸಾಬ, ಹೋಳೆಪ್ಪ, ಬಸಣ್ಣ ಕೋಠಾ, ಲಕ್ಷ್ಮೀನಾರಾಯಣ, ಗಂಗಪ್ಪ ನರಸಪ್ಪ ನರೇಗಾ ಕೂಲಿ ಕಾರ್ಮಿಕರು ಸೇರಿದಂತೆ ಉಪಸ್ಥಿತರಿದ್ದರು.