*ಶ್ರೀಗಣೇಶೋತ್ಸವ - ಈದ್ ಮಿಲಾದ್ , ಪೊಲೀಸ್ ರಿಂದ ಪಥ ಸಂಚಲನ*-
August 20, 2025
0
ವಿಜಯನಗರ ಜಿಲ್ಲೆ ಕೂಡ್ಲಿಗಿ : ಮುಂಬರುವ ಆ27ರಂದು ಶ್ರೀಗಣೇಶೋತ್ಸವ ಆರಂಭಗೊಳ್ಳಲಿದ್ದು , ಹಾಗೂ ಸೆ 5ರಂದು ಈದ್ ಮಿಲಾದ್ ಆಚರಣೆ ಜರುಗುವ ಹಿನ್ನಲೆಯಲ್ಲಿ. ಕೂಡ್ಲಿಗಿ ಪೊಲೀಸ್ ರಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ , ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಜರುಗಿಸಲಾಗಿದೆ. ಮೊದಲ ಹಂತದ ಕ್ರಮವಾಗಿ ಪೊಲೀಸರು , ಇಂದು (ಆ 19) ಮಧ್ಯಾಹ್ನ ಪಟ್ಟಣದಲ್ಲಿ ಪಥ ಸಂಚಲನ ನಡೆಸುವ ಮೂಲಕ. ಸಾರ್ವಜನಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು , ಪೊಲೀಸರು ನಾಗರಿಕರಲ್ಲಿ ಭದ್ರತೆಯ ಭರವಸೆಯ ಸಂದೇಶ ಸಾರಿದ್ದಾರೆ. ವಿಜಯನಗರ ಜಿಲ್ಲಾ ಎಸ್ಪಿಯವರ ನಿರ್ಧೇಶನದಂತೆೆ , ಕೂಡ್ಲಿಗಿ ಡಿವೈ ಎಸ್ಪಿ ಮಲ್ಲೇಶ ದೊಡ್ಧಮನೆಯವರ ನೇತೃತ್ವದಲ್ಲಿ. ಕೂಡ್ಲಿಗಿ ಪೊಲೀಸ್ ಠಾಣಾಧಿಕಾರಿಗಳಾದ ಪ್ರಹ್ಲಾದ್ ಆರ್ ಚನ್ನಗಿರಿಯವರು , ಹಾಗೂ ಪಿಎಸ್ಐ ಸಿ ಪ್ರಕಾಶ್ ರವರು. ಗುಡೇಕೋಟೆ ಪಿಎಸ್ಐ ಸುಭ್ರಹ್ಮಣ್ಯಂರವರು , ಹಾಗೂ ಕೊಟ್ಟೂರು ಪಿಎಸ್ಐ ಗೀತಾಂಜಲಿ ಶಿಂಧೆಯವರ ಸಹಯೋಗದಲ್ಲಿ. ಕರ್ನಾಟಕ ಮೀಸಲು ಪೊಲೀಸ್ ಪಡೆಗಳ ಸಿಬ್ಬಂದಿಯವರು , ಮತ್ತು ಕೂಡ್ಲಿಗಿ ಪೊಲೀಸ್ ಠಾಣಾ ಸಿಬ್ಬಂದಿಯವರೊಡಗೂಡಿ. ಪಟ್ಟಣದಾಧ್ಯಂತ ಪ್ರಮುಖ ಬೀದಿಗಳಲ್ಲಿ ವೃತ್ತಗಳಲ್ಲಿ , ಪಥ ಸಂಚಲನ ಕವಾಯತ್ ನಡೆಸಲಾಯಿತು. ಈ ಮೂಲಕ ಸಾರ್ವಜನಿಕರಲ್ಲಿ ಸುರಕ್ಷತೆ ಹಬ್ಬಗಳ ಉತ್ಸವ ಆಚರಣೆಗಳ ಸಂದರ್ಭದಲ್ಲಿ , ಶಾಂತಿ ಪಾಲನೆ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಕಾಪಾಡುವ ನಿಟ್ಟಿನಲ್ಲಿ. ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಜಾರಿ ತಂದಿದ್ದು, ಉತ್ಸವಗಳನ್ನು ಹಬ್ಬಗಳನ್ನು ಸೌಹಾರ್ಧತೆಯಿಂದ ನೆಮ್ಮದಿಯಾಗಿ ನಡೆಸುವಂತೆ. ಸಾರ್ವಜನಿಕರಲ್ಲಿ ಅಭಯ ಹಸ್ತ ಹಾಗೂ ನೆರವಿನ ಹಸ್ತ ನೀಡಲಾಗಿದೆ , ಮತ್ತು ಈ ಮೂಲಕ ಪೊಲೀಸ್ ಇಲಾಖೆಯ ಮೇಲೆ ಸರ್ವ ಧರ್ಮಿಯರಲ್ಲಿ ಭದ್ರತೆಯ ಭರವಸೆ ಇಮ್ಮಡಿಗೊಳಿಸಲಾಗಿದೆ. ಪೊಲೀಸ್ ಠಾಣೆಯಿಂದ ಆರಂಭ ಗೊಂಡ ಪಥ ಸಂಚಲನವು , ಪಟ್ಟಣದ ಪ್ರಮುಖ ವೃತ್ತಗಳನ್ನೊಳಗೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಅಧಿಕಾರಿಗಳ ನೇತೃತ್ವದಲ್ಲಿ ನಡೆಸಿದ ಪೊಲೀಸರ ಪಥ ಸಂಚನದಿಂದಾಗಿ , ಪಟ್ಟಣದ ಸಾರ್ವಜನಿಕರಲ್ಲಿ ಸುಸಂಸ್ಕೃತ ಸಜ್ಜನ ನಾಗರೀಕರಲ್ಲಿ ಪ್ರಜ್ಞಾವಂತರಲ್ಲಿ. ಆಸ್ಥಿಕರಲ್ಲಿ ಹಾಗೂ ಧಾರ್ಮಿಕ ಶ್ರದ್ಧಾವಂತರಲ್ಲಿ , ಪೊಲೀಸರ ಬಗ್ಗೆ ಗೌರವ ನಂಬಿಕೆ ಹಿಮ್ಮಡಿಗೊಳಿಸಿತು. ಕಿಡಿಗೇಡಿಗಳಲ್ಲಿ , ಪುಂಡ ಪೋಕರಿಗಳಲ್ಲಿ , ಪುಡಿ ರೌಡಿಗಳಲ್ಲಿ ಭರ್ಜರಿ ನಡುಕ ಹುಟ್ಟಿಸಿದೆ. ಒಟ್ಟಾರೆಯಾಗಿ ಪೊಲೀಸರು ನಡೆಸಿದ ಪಥ ಸಂಚನವು , ಪಟ್ಟಣದ ಸಾರ್ವಜನಿಕರಲ್ಲಿ ಭಾರೀ ಸಂಚಲನ ಮೂಡಿಸಿತು ಅಭಯ ತುಂಬಿತು. ಡಿವೈಎಸ್ಪಿ ಮಲ್ಲೇಶ್ ದೊಡ್ಡಮನೆರವರ ನೇತೃತ್ವದಲ್ಲಿ ನಡೆದ ಪೊಲೀಸ್ ಪಥ ಸಂಚಲನ , ಸರ್ವಧರ್ಮಗಳ ಶ್ರದ್ಧಾವಂತರಲ್ಲಿ ಸಾರ್ವಜನಿಕರಲ್ಲಿ ಅಭಯ ತುಂಬಿದೆ. ಧಾರ್ಮಿಕ ಹಬ್ಬಗಳನ್ನು ಉತ್ಸಾಹ ಉಲ್ಲಾಸದಿಂದ ಆಚರಣೆ ಮಾಡಿ , ನಿಮ್ಮ ಜೊತೆ ಪೊಲೀಸ್ ಇಲಾಖೆ ಇರುತ್ತೆ ಎಂಬ ಸಂದೇಶವನ್ನು. ತುಂಬಾ ಸ್ಪಷ್ಟವಾಗಿ ಸಾರ್ವಜನಿಕ ವಲಯಕ್ಕೆ ಸಾರಿದೆ. ಕೋಮು ಹಲಭೆ ದೊಂಬಿ ಗಲಾಟೆ ಜಗಳಗಳು ಜರುಗದಂತೆ , ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು. ಸಮಾಜದಲ್ಲಿ ಅಶಾಂತಿ ಸೃಷ್ಠಿಸುವ ದುಷ್ಟರ ವಿರುದ್ಧ , ಕಾನೂನು ರೀತ್ಯ ಸಮರ ಸಾರಲು. ತಾವು ಎಲ್ಲಾ ರೀತಿಯಲ್ಲಿ ಸಿದ್ಧ ಎಂಬುದನ್ನು ಅರ್ಥೈಸುವಂತೆ , ಪಥ ಸಂಚಲನ ನಡೆಸುವ ಮೂಲಕ ಪೊಲೀಸರು ಶಕ್ತಿ ಪ್ರದರ್ಶಿಸಿದ್ದಾರೆ. ಕೆ.ಎಸ್.ಆರ್.ಪಿ ತುಕಡಿಗಳ ದಂಡುಗಳ ಜೊತೆಗೆ ಕೂಡ್ಲಿಗಿ, ಕೊಟ್ಟೂರು, ಗುಡೆಕೋಟೆ, ಠಾಣೆಗಳ ಪೊಲೀಸ್ ಸಿಬ್ಬಂದಿಯವರು ಪಥ ಸಂಚಲನದಲ್ಲಿ ಹಾಜರಿದ್ದರು.
Tags