ಬೆಂಗಳೂರು : ವಿಧಾನಸಭೆಯಲ್ಲಿ ಇಂದು ಅಪರೂಪದ ಘಟನೆಯೊಂದು ನಡೆದಿದೆ. ಅದು ವಿಧಾನಸಭೆಯಲ್ಲಿ ಶಾಸಕರಿಗೆ ನೀಡುವ ಆಸನ ವ್ಯವಸ್ಥೆಯ ಬಗ್ಗೆ, ವಿಧಾನಸಭೆ ಸದನದಲ್ಲಿ ಅಸನದ ವ್ಯವಸ್ಥೆ ಬಗ್ಗೆ ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೇಸರ ವ್ಯಕ್ತಪಡಿಸಿದರು.
ನಾನು, ಎಸ್ ಟಿ ಸೋಮಶೇಖರ್ (S T Somashekar)ಮತ್ತು ಶಿವರಾಮ್ ಹೆಬ್ಬಾರ್ (Shivaram Hebbar)ಸೀನಿಯರ್ ಇದ್ದೇವೆ, ನಾನು ಆರು ಬಾರಿ, ಸೋಮಶೇಖರ್ ನಾಲ್ಕು ಬಾರಿ ಮತ್ತು ಹೆಬ್ಬಾರ್ ನಾಲ್ಕು ಬಾರಿ ಆರಿಸಿ ಬಂದವರಾಗಿದ್ದೇವೆ, ನಮಗೆ ವಿಧಾನ ಸಭೆಯಲ್ಲಿ 224, 225 ಮತ್ತು 226 ನೇ ಸೀಟ್ ನೀಡಲಾಗಿದೆ. ಇದು ಮೊದಲ ಬಾರಿಗೆ ಆಯ್ಕೆಯಾಗಿ ಬರುವ ಶಾಸಕರಿಗೆ ನೀಡುವ ಸ್ಥಾನ, ನಾವು ಹಿರಿಯರಿದ್ದೇವೆ, ಮುಂದಿನ ಸಾಲಿನಲ್ಲಿ ಆಸನದ ವ್ಯವಸ್ಥೆಯ ಮಾಡಿ ಎಂದು ಯತ್ನಾಳ್, ಸ್ಪೀಕರ್ ಅವರಿಗೆ ಮನವಿ ಮಾಡಿದರು.
ನಮಗೆ ನಾನ್ ಅಡ್ಜಸ್ಟ್ಮೆಂಟ್ ಆಪೋಜಿಶನ್ ಪಾರ್ಟಿ ಎಂದು ಅಸನವನ್ನ ಮುಂದಕ್ಕೆ ಕೊಡಿ ಎಂದು ಯತ್ನಾಳ್, ಸ್ಪೀಕರ್ ಗೆ ಮನವಿದರು, ಹಾಗೆಯೇ ವಿಧಾನ ಸಭೆಯಲ್ಲಿ ಇರುವುದು 224 ಸದಸ್ಯರು, ಸೋಮಶೇಖರ್ ಮತ್ತು ಹೆಬ್ಬಾರ್ ಅವರಿಗೆ 225 ಮತ್ತ 226 ಸಂಖ್ಯೆಯ ಸೀಟುಗಳನ್ನು ನೀಡಲಾಗಿದೆ. ಆದರೆ 225, 226 ಸೀಟು ಬೋಗಸ್ ಆಯ್ತಲ್ವಾ ಎಂದು ಅವರು ಪ್ರಶ್ನಿಸಿದರು.
ಇದು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮತ್ತು ಅಮಾನತು ಆದವರ ಗೋಳಾಗಿತ್ತು. ನೀವು ನಮಗೆ ಮುಂದಿನ ಆಸನ ಕೊಡಿ ಇಲ್ಲವೇ ಪ್ರತಿಪಕ್ಷ ನಾಯಕನ ಸ್ಥಾನ ಕೊಡಿ ಎಂದು ಯತ್ನಾಳ್ ಹೇಳಿದ್ದರಿಂದ ಸದನದಲ್ಲಿ ನಗೆಯ ವಾತಾವರಣ ಮೂಡಿತ್ತು.
ಇದಕ್ಕೆ ಸ್ವೀಕರ್ ಯು ಟಿ ಖಾದರ್ ಅವರು, ಆಯ್ತು ನೋಡುತ್ತೇನೆ ಎಂದು ತಿಳಿಸಿದರು. ಹೊಸ ಶಾಸಕರಿಗೆ ನೀಡುವ ಆಸನದಲ್ಲಿ ಅಮಾನತುಗೊಂಡ ಶಾಸಕರಿಗೆ ಅವಕಾಶ ಮಾಡಿದ್ದಕ್ಕೆ ಯತ್ನಾಳ್ ಬೇಸರ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಹಿರಿಯ ಶಾಸಕರಾಗಿದ್ದ ಯತ್ನಾಳ್ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಟೀಕಿಸಿದ್ದರು. ಮತ್ತು ಕುಟುಂಬ ರಾಜಕಾರಣ ಸಂಬಂಧ ಸಾಕಷ್ಟು ಸಲ ಆಕ್ಷೇಪ ಎತ್ತಿದ್ದರಿಂದ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು.
ಹಾಗೆಯೇ ಎಸ್ ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಜೊತೆ ಗುರುತಿಸಿದ ಕಾರಣಕ್ಕಾಗಿ ಅವರನ್ನು ಪಕ್ಷದಿಂದ ಅಮಾನತ್ತು ಮಾಡಲಾಗಿತ್ತು. ಹಾಗೆಯೇ ಇನ್ನೊಬ್ಬ ಹಿರಿಯ ಶಾಸಕ ಕೆ ಎಸ್ ಈಶ್ವರಪ್ಪ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಲ್ಲಿದ್ದುಕೊಂಡೇ, ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರ ವಿರುದ್ಧ ಸ್ಪರ್ಧಿಸಿದ್ದರು. ಅವರೂ ಕೂಡ ಪಕ್ಷದಲ್ಲಿನ ಕುಟುಂಬ ರಾಜಕಾರಣವನ್ನು ತೀವ್ರವಾಗಿ ವಿರೋಧಿಸಿದ್ದ ಹಿನ್ನೆಲೆಯಲ್ಲಿ ಅವರನ್ನೂ ಅಮಾನತ್ತು ಮಾಡಲಾಗಿತ್ತು.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಕಾಂತೇಶ್ ಅವರಿಗೆ ವಿಧಾನಸಭೆ ಚುನಾವಣೆ ನೀಡಬೇಕೆಂದು ಆಗ್ರಹಿಸಿದ್ದರು. ಆದರೆ, ಹೈಕಮಾಂಡ್ ಇದನ್ನು ಒಪ್ಪದೇ ಇದ್ದುದ್ದರಿಂದ ಅವರು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಕಿಡಿಕಾರಿದ್ದರು.