ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಗೌಡೂರು

Udayavani News
0
ಲಿಂಗಸುಗೂರು, ಆ.15:
ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಗುರುರಾಜ ಗೌಡೂರು ತಿಳಿಸಿದ್ದಾರೆ.

ಪಟ್ಟಣದ ಪತ್ರಿಕಾಭವನದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ,ಕರ್ನಾಟಕವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ರಾಜಕೀಯ, ಸಾಮಾಜಿಕ ಮತ್ತು ಕ್ರಾಂತಿಕಾರಿ ಹೋರಾಟಗಳ ಮೂಲಕ ಮಹತ್ವದ ಪಾತ್ರವಹಿಸಿದೆ. 1857ರ ಮೊದಲ ಸ್ವಾತಂತ್ರ್ಯ ಸಮರದಿಂದ ಹಿಡಿದು 1947ರ ಸ್ವಾತಂತ್ರ್ಯದವರೆಗೆ, ಕರ್ನಾಟಕದ ಹೋರಾಟಗಾರರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ.
 “ದೇಶಾದ್ಯಂತ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಘೋಷಣೆ ಮೊಳಗಿದ್ದಾಗ, ಕರ್ನಾಟಕದಲ್ಲಿಯೂ ಅದರ ಪ್ರತಿಧ್ವನಿ ಗಟ್ಟಿಯಾಗಿ ಕೇಳಿಬಂತು. ಜನನಾಯಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಸಾಮಾನ್ಯ ಪ್ರಜೆಗಳು ಒಟ್ಟಾಗಿ ಹೋರಾಡಿ ಬ್ರಿಟಿಷರ ನಡುಗಿಸಿದರು. ಅವರ ಅಪ್ರತಿಮ ಸಾಹಸವನ್ನು ನೆನೆದು ಗೌರವಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಅಮರಯ್ಯ ಘಂಟಿ, , ಹಿರಿಯ ಪತ್ರಕರ್ತರು ಎನ್‌. ಬಸವರಾಜ, ಲಕ್ಷ್ಮಣ ಬಾರಿಕೇರ, ಖಾಜಾ ಹುಸೇನ್ ಅಮರೇಶ ಕಲ್ಲೂರು, ಶಿವರಾಜ ಕೆಂಭಾವಿ, ಶಶಿಧರ ಕಂಚಿಮಠ, ಗಂಗಾಧರ ನಾಯಕ, ಪಂಪಾಪತಿ, ಗೌತಮ್ ಕುಮಾರ.ರಾಜೇಶ್ ಮಾಣಿಕ್,ರಾಘವೇಂದ್ರ ಭಜಂತ್ರಿ, ಯಲ್ಲಪ್ಪ ವಂದಲಿ, ಸಾದತ್ ಅಲಿ, ಮುಸ್ತಾಫ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Post a Comment

0Comments

Post a Comment (0)